ತಿರುಗಿಬಿದ್ದ ಮಾಜಿ ಕ್ರಿಕೆಟಿಗ ಕೆ.ಶ್ರೀಕಾಂತ್: ರಾಹುಲ್ ದ್ರಾವಿಡ್ ಹಾಗೂ ರೋಹಿತ್ ರವರಿಗೆ ಕೈ ಮುಗಿದು ಬೇಡಿಕೊಂಡಿದ್ದು ಏನು ಗೊತ್ತೇ?? ದ್ರಾವಿಡ್ ತಪ್ಪು ಮಾಡುತ್ತಿದ್ದಾರೆಯೇ??

175

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಮುಗಿದಿದೆ. ಭಾರತ ಏಕಪಕ್ಷೀಯವಾಗಿ ಈ ಸರಣಿಯನ್ನು ಗೆದ್ದುಕೊಂಡಿತು. ಸದ್ಯ ನಡೆಯುತ್ತಿರುವ ಟಿ 20 ಸರಣಿಯಲ್ಲಿ ಎರಡು ತಂಡಗಳು ಸಮಬಲದ ಹೋರಾಟ ನಡೆಸುತ್ತಿವೆ.ಮೂರು ಪಂದ್ಯಗಳಲ್ಲಿ ಭಾರತ ಸದ್ಯ 2-1 ರಿಂದ ಮುಂದಿದೆ. ಆದರೇ ಎರಡು ತಂಡಗಳು ಸಮಬಲದ ಹೋರಾಟ ನಡೆಸುತ್ತಿವೆ. ಉಳಿದಿರುವ ಎರಡು ಪಂದ್ಯಗಳು ಸದ್ಯ ರೋಚಕ ಘಟ್ಟದಲ್ಲಿದ್ದು, ಉಳಿದಿರುವ ಎರಡು ಪಂದ್ಯಗಳಲ್ಲಿ ತೀವ್ರ ಹೋರಾಟವನ್ನು ನಾವು ಕಾಣಬಹುದಾಗಿದೆ.

ಈ ನಡುವೆ ಭಾರತ ತಂಡದ ಆಡುವ ಹನ್ನೊಂದರ ಬಳಗದ ಸಂಯೋಜನೆ ಬಗ್ಗೆ ಭಾರತ ತಂಡದ ಮಾಜಿ ಆಟಗಾರರು ಕಿಡಿಕಾರುತ್ತಿದ್ದಾರೆ. ಮುಖ್ಯವಾಗಿ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಕೃಷ್ಣಮಾಚಾರಿ ಶ್ರೀಕಾಂತ್ ತಮ್ಮ ಕೋಪವನ್ನು ವಿನೂತನ ರೀತಿಯಲ್ಲಿ ಹೊರ ಹಾಕಿದ್ದಾರೆ.
ರೋಹಿತ್ ಶರ್ಮಾ ರವರೇ, ರಾಹುಲ್ ದ್ರಾವಿಡ್ ರವರೇ, ನಿಮಗೆ ಕೈ ಮುಗಿಯುತ್ತೇನೆ, ದಯವಿಟ್ಟು ಕ್ರಿಕೇಟಿಗರ ಭವಿಷ್ಯ ಹಾಳು ಮಾಡಬೇಡಿ ಎಂದಿದ್ದಾರೆ. ಭಾರತ ತಂಡದಲ್ಲಿ ಸದ್ಯ ಆರಂಭಿಕರಿಗೇನು ಕೊರತೆಯಿಲ್ಲ. ಆದರೇ ನೀವು ಉತ್ತಮ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆಗುವ ಎಲ್ಲಾ ಭರವಸೆ ಮೂಡಿಸಿರುವ ಸೂರ್ಯ ಕುಮಾರ್ ಯಾದವ್ ರನ್ನು ಯಾವ ಕಾರಣಕ್ಕೆ ಆರಂಭಿಕರಾಗಿ ಆಡಿಸುತ್ತಿರಿ ಎಂದು ಪ್ರಶ್ನಿಸಿದ್ದಾರೆ.

ಇಂಗ್ಲೆಂಡ್ ಸರಣಿಯಲ್ಲಿ ರಿಷಭ್ ಪಂತ್ ರನ್ನು ಆರಂಭಿಕರಾಗಿ ಆಡಿಸಲಾಗಿತ್ತು. ಈ ಸರಣಿಯಲ್ಲಿ ಅವರನ್ನೇ ಆರಂಭಿಕರಾಗಿಸಬಹುದಿತ್ತು. ಆದರೇ ನೀವು ಇಲ್ಲಿ ಹೊಸ ಪ್ರಯೋಗ ಮಾಡಿದ್ದಿರಿ, ಭಾರತ ತಂಡದ ಆರಂಭಿಕ ಬ್ಯಾಟ್ಸ್ ಮನ್ ಇರಲಿಲ್ಲವೇ, ಇಶಾನ್ ಕಿಶನ್ ರನ್ನು ತಂಡದಲ್ಲಿ ಏಕೆ ಇರಿಸಿಕೊಂಡಿದ್ದಿರಿ, ನೀವು ಸ್ಥಾನ ತುಂಬಬಲ್ಲ ಆಟಗಾರರಿದ್ದರೂ, ಅವರಿಗೆ ಅವಕಾಶವಿದ್ದರೂ, ಅವರನ್ನು ಬೆಂಚು ಕಾಯಿಸುವ ಹಾಗೇ ಮಾಡಿದರೇ, ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿ, ಪ್ರದರ್ಶನ ಕೆಟ್ಟದಾಗಬಹುದು ಎಂದು ಎಚ್ಚರಿಸಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.