ದಕ್ಷಿಣ ಆಫ್ರಿಕಾ ಜೊತೆಗಿನ ಮೊದಲ ಟಿ-20 ಸರಣಿಗೆ ಈ ರೀತಿ ಇರಬಹುದು ಭಾರತೀಯ ತಂಡ. ಸಂಭವನೀಯ ತಂಡದಲ್ಲಿ ಈ ಆಟಗಾರರಿಗೆ ಅವಕಾಶ ಸಿಗಬಹುದು?

221

ಐಪಿಎಲ್ ೨೦೨೨ ರ ನಂತರ ಭಾರತದ ಮುಂದಿನ ನಡೆ ಹಾಗು ಗುರಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ-೨೦ ಸರಣಿ ಗೆಲ್ಲುವುದಾಗಿದೆ. ದಕ್ಷಿಣ ಆಫ್ರಿಕಾದ ಜೊತೆಗಿನ ೫ ಟಿ-೨೦ ಸರಣಿಯ ಮೊದಲ ಪಂದ್ಯ ಜೂನ್ ೯ ರಂದು ನಡೆಯಲಿದೆ. ಈ ಸರಣಿಯ ಮೊದಲ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಇದೆಲ್ಲದಕ್ಕೂ ಮುನ್ನ ಮೊದಲ ಟಿ-೨೦ ಪಂದ್ಯಕ್ಕೆ ಪ್ಲೇಯಿಂಗ್ ೧೧ ತಂಡ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ. ಈಗಾಗಲೇ ಈ ಸರಣಿಗೆ ನಾಯಕರಾಗಿ ಕೆ ಎಲ್ ರಾಹುಲ್ ಆಯ್ಕೆ ಆಗಿದ್ದಾರೆ. ಇವರ ಸಂಭವನೀಯ ತಂಡ ಹೀಗಿರಬಹುದು.

ಈ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಅದೇ ಕಾರಣಕ್ಕೆ ರೋಹಿತ್, ವಿರಾಟ್ ಗೆ ಕೂಡ ವಿಶ್ರಾಂತಿ ನೀಡಲಾಗಿದ್ದು. ಯುವ ಆಟಗಾರರಿಗೆ ಅವಕಾಶ ನೀಡಲಾಗಿದೆ. ಮೂವರು ರಾಹುಲ್, ಇಶಾಂಕ್ ಕಿಶನ್, ಋತುರಾಜ್ ಗಾಯಕ್ವಾಡ್ ಆರಂಭಿಕ ಆಟಗಾರರಾಗಿ ಆಯ್ಕೆ ಆಗಿದ್ದಾರೆ. ಮೊದಲ ಓಪನರ್ ಆಗಿ ಕೆ ಎಲ್ ರಾಹುಲ್ ಇದ್ದರೆ ಇವರಿಗೆ ಸಾತ್ ನೀಡಲು ಋತುರಾಜ್ ಅವರನ್ನು ಆಯ್ಕೆ ಮಾಡಬಹುದು. ಶ್ರೇಯಸ್ ಅಯ್ಯರ್ ಮೂರನೇ ಸ್ಥಾನದಲ್ಲಿ ಹಾಗು ದೀಪಕ್ ಹೂಡಾ ನಾಲ್ಕನೇ ಕ್ರಮಾಂಕದಲ್ಲಿ ಆಡಬಹುದು. ವಿಕೆಟ್ ಕೀಪರ್ ಆಗಿ ರಿಷಬ್ ಪಂತ್ ಇರಲಿದ್ದಾರೆ.

ಇನ್ನು ಮ್ಯಾಚ್ ಫಿನಿಶರ್ ಜಗದಲ್ಲಿ ಹಾರ್ದಿಕ್ ಪಾಂಡ್ಯ ಖಂಡಿತವಾಗಿಯೂ ತಂಡದಲ್ಲಿ ಸ್ಥಾನ ಪಡೆಯಬಹುದು. ಗುಜರಾತ್ ಟೈಟನ್ ತಂಡವನ್ನು ಚಾಂಪಿಯನ್ ಮಾಡಿದ್ದೂ ಇದೆ ಹಾರ್ದಿಕ್. ಈ ಕಾರಣದಿಂದಾಗಿ ಇವರ ಉಪಸ್ಥಿತಿ ತಂಡದಲ್ಲಿ ಇರಲಿದೆ. ಇನ್ನು ಈ ಬಾರಿಯ RCB ತಂಡದಲ್ಲಿ ಸ್ಥಾನ ಪಡೆದು ಉತ್ತಮವಾಗಿ ಆಡಿದ ದಿನೇಶ್ ಕಾರ್ತಿಕ್ ಕೂಡ ತಂಡದಲ್ಲಿ ಕಾಣಿಸಿಕೊಳ್ಳಬಹುದು. ಇನ್ನು ಬೌಲರ್ ಗಳ ರೂಪದಲ್ಲಿ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಹಾಗು ಉಮ್ರಾನ್ ಮಲಿಕ್ ಕಾಣಿಸಿಕೊಳ್ಳಬಹುದು. ಅನುಭವಿ ಆಟಗಾರ ಭುವನೇಶ್ ಕುಮಾರ್ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ. ಇನ್ನು ಹರ್ಷಲ್ ಪಟೇಲ್ ಡೆತ್ ಓವರ್ ಸ್ಪೆಷಲಿಸ್ಟ್ ಅಂತಾನೆ ಕರೆಸಿಕೊಂಡಿದ್ದಾರೆ.

ಇನ್ನು ಸ್ಪಿನ್ನರ್ ಆಗಿ ಯಜುವೇಂದ್ರ ಚಾಹಲ್ ಆಯ್ಕೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಐಪಿಎಲ್ ೨೦೨೨ ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ಪಡೆದಿದ್ದಾರೆ. ಅಲ್ಲದೆ ಅನುಭವಿ ಆಟಗಾರ ಕೂಡ ಆಗಿದ್ದಾರೆ. ಒಟ್ಟಾರೆ ಹೀಗಿರಬಹುದು ಭಾರತದ ಪ್ಲೇಯಿಂಗ್ ೧೧- ಕೆ.ಎಲ್.ರಾಹುಲ್, ಋತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ದೀಪಕ್ ಹೂಡಾ, ರಿಷಬ್ ಪಂತ್,ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಯುಜುವೇಂದ್ರ ಚಾಹಲ್. ಈ ತಂಡದ ಬಗ್ಗೆ ನಿಮ್ಮ ಅಭಿಪ್ರಾಯವೇನು?

Leave A Reply

Your email address will not be published.