ದಕ್ಷಿಣ ಆಫ್ರಿಕಾ ಪಂದ್ಯದಲ್ಲಿ ನಡೆಯುತ್ತಾ‌ ಕನ್ನಡಿಗನ ಕೈಚಳಕ? ರಾಹುಲ್ ಮುಂದಿದೆ ಈ ಸಮಸ್ಯೆ.

230

ಜೂನ್ 9 ರಿಂದ ದಕ್ಷಿಣ ಆಫ್ರಿಕಾ ಹಾಗು ಭಾರತ ನಡುವಿನ 5 ಪಂದ್ಯಗಳ ಟ-20 ಪಂದ್ಯಗಳು ನಡೆಯಲಿದೆ. ಇದರಲ್ಲಿ ಭಾರತ ತಂಡದ ನಾಯಕತ್ವ ವಹಿಸಿಕೊಂಡಿರುವುದು ಕೆ.ಎಲ್. ರಾಹುಲ್. ಇದಕ್ಕಿಂತ ಮೊದಲು ಕೂಡಾ ಐಪಿಎಲ್‌ ಮೊದಲು ತಂಡವನ್ನು ಮುನ್ನಡೆಸಿ ಬೇಷ್ ಎನಿಸಿಕೊಂಡಿದ್ದಾರೆ ರಾಹುಲ್. ಅದಾದ ನಂತರ ಐಪಿಎಲ್ ಅಲ್ಲಿ ಹೊಸ ತಂಡ ಲಕ್ನೋ ನಾಯಕತ್ವ ವಹಿಸಿ ಪ್ಲೇ ಆಫ್ ವರೆಗೂ ಮನ್ನಡೆಸಿದ ಶ್ರೇಯ ಕೂಡಾ ಸಿಗುವುದು ಇದೇ ಕನ್ನಡಿಗ ಕೆ.ಎಲ್ ರಾಹುಲ್ ಗೆ. ಇನ್ನು ಸೌತ್ ಆಫ್ರಿಕಾ ನಡುವಿನ ಪಂದ್ಯದಲ್ಲಿ ಕೆ.ಎಲ್.ರಾಹುಲ್ ತಂಡವನ್ನೆ ಹೇಗೆ ಮುನ್ನಡೆಸಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿ ಇದೆ.

ಈ ಸರಣಿಗೆ ಹಲವು ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಹಾಗೆನೆ ಹಲವು ಯುವ ಆಟಗಾರರಿಗೆ ಮಣೆ ಹಾಕಲಾಗಿದೆ. ಈ ಸರಣಿಗಾಗಿ‌ ಅಭಿಮಾನಿಗಳು ಕೂಡಾ ಉತ್ಸುಕರಾಗಿದ್ದಾರೆ. ಇದರ ನಡುವೆ ಈ ಯುವ ಆಟಗಾರರನ್ನು ಇಟ್ಟುಕೊಂಡು ಪಂದ್ಯ ಹೇಗೆ ಗೆಲ್ಲುವುದು ಎನ್ನುವುದೇ ದೊಡ್ಡ ಸಮಸ್ಯೆಯಾಗಿದೆ ಈ ಕೆ.ಎಲ್. ರಾಹುಲ್ ಗೆ. ಅಲ್ಲದೆ ಈ ಸರಣಿ ಕೂಡಾ ಬಹಳ ಮಹತ್ವದ್ದಾಗಿದೆ. ರಾಹುಲ್‌ ಅವರಿಗೆ ಹಾಗೆನೆ ಭಾರತಕ್ಕೂ ಕೂಡಾ.

ಇನ್ನು ಮೊದಲು ಹೇಳಿದ ಹಾಗೆ ಇದು ರಾಹುಲ್ ಎರಡನೇ ಬಾರಿ ತಂಡದ ನೇತೃತ್ವ ವಹಿಸಿಕೊಳ್ಳುತ್ತಿರುವುದು. ಆದರೆ ಮೊದಲ ಬಾರಿ ಟೆಸ್ಟ್, ಏಕದಿನ ಹಾಗು ಟಿ-೨೦ ಯಾವ‌ ಸರಣಿ ಕೂಡಾ ಗೆಲ್ಲಲಿಲ್ಲ‌ ರಾಹುಲ್. ಇದು ಸರಣಿ ಇದಕ್ಕೆ ಬಹಳ ಮಹತ್ವ ಪಡೆದಿದೆ. ಕಾರಣ ತಂಡದಲ್ಲಿ ರಿಷಬ್ ಪಂತ್, ಹಾರ್ದಿಕ್ ಪಾಂಡ್ಯರಂತಹ ಗಟಾನುಗಟಿಗಳು ನಾಯಕತ್ವ ವಹಿಸಿಕೊಳ್ಳಲು ಪೈಪೋಟಿಯಲ್ಲಿದ್ದಾರೆ. ಮತ್ತೊಂದು ಅವಕಾಶ ಪಡೆದ ರಾಹುಲ್ ಈ ಬಾರಿ ಸರಣಿ ಗೆಲ್ಲಲೇಬೇಕಾದ ಅವಶ್ಯಕತೆ ಇದೆ.

Leave A Reply

Your email address will not be published.