ದಕ್ಷಿಣ ಆಫ್ರಿಕಾ ವಿರುದ್ದದ 2 ನೇ ಟಿ-೨೦ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ 11 ಗೆ ಈ ಇಬ್ಬರು ಆಟಗಾರರ ನಡುವೆ ತೀವ್ರ ಪೈಪೋಟಿ. ಸಂಭಾವ್ಯ ತಂಡ ಹೀಗಿದೆ.
ಮೊದಲ ದಕ್ಷಿಣ ಆಫ್ರಿಕಾ ವಿರುದ್ದದ ಟಿ-೨೦ ಪಂದ್ಯದಲ್ಲಿ ೨೦೦ ರನ್ ಗಳಿಸಿದರು ಕೂಡ ಪಂದ್ಯವನ್ನು ಹೀನಾಯವಾಗಿ ಸೋತಿತ್ತು ಭಾರತ ತಂಡ. ಇದಕ್ಕೆ ಮುಖ್ಯ ಕಾರಣ ಬೌಲರ್ ಗಳು ಎಂದರೆ ತಪ್ಪಾಗಲಾರದು. ಬೌಲಿಂಗ್ ವಿಭಾಗದಲ್ಲಿ ಯಾರು ಕೂಡ ರನ್ ಗೆ ಕಡಿವಾಣ ಹಾಕಲು ಸಾಧ್ಯವಾಗಲಿಲ್ಲ. ಅದೇ ಕಾರಣಕ್ಕೆ ಮೊದಲ ಪಂದ್ಯ ದಕ್ಷಿಣ ಆಫ್ರಿಕಾ ಗೆದ್ದು ಬಿಗಿತ್ತು. ಇದೀಗ ಎರಡನೇ ಪಂದ್ಯ ಇವತ್ತು ನಡೆಯಲಿದೆ. ಈ ಪಂದ್ಯಕ್ಕೆ ತಂಡ ಸಜ್ಜು ಮಾಡಲು ರಿಷಬ್ ಪಂತ್ ಹಾಗು ರಾಹುಲ್ ದ್ರಾವಿಡ್ ತಯಾರಿ ನಡೆಸುತ್ತಿದ್ದಾರೆ. ಭಾರತದ ಸಂಭಾವ್ಯ ತಂಡ ಹೇಗಿರಬಹುದು?
ಭಾರತ ತಂಡದ ಬ್ಯಾಟಿಂಗ್ ವಿಭಾಗದಲ್ಲಿ ಮೇಲೆ ಹೇಳಿದಂತೆ ಯಾವುದೇ ಕೊರತೆ ಕಾಣಲು ಸಿಗುತ್ತಿಲ್ಲ. ಆರಂಭಿಕ ಆಟಗಾರರಾದ ಇಶಾನ್ ಕಿಶನ್ ಹಾಗು ಋತುರಾಜ್ ಗಾಯಕ್ವಾಡ್ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಎಡ ಬಲ ಕಾಂಬಿನೇಷನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುತ್ತಾರೆ ಈ ಇಬ್ಬರು ಆಟಗಾರರು. ನಂತರ ಬರುವ ಶ್ರೇಯಸ್ ಅಯ್ಯರ್, ರಿಷಬ್ ಪಂತ್ ಹಾಗು ಹಾರ್ದಿಕ್ ಪಂದ್ಯ ಉತ್ತಮವಾಗಿ ಬಾಟಿಂಗ್ ನಿಭಾಯಿಸಿದ್ದಾರೆ. ಇವರ ಮೇಲೆ ತಂಡ ಸಂಪೂರ್ಣವಾಗಿ ಅವಲಂಬಿಸಿದೆ. ಹಾಗೇನೇ ಜವಾಬ್ದಾರಿ ಕೂಡ ನಿಭಾಯಿಸಿದ್ದಾರೆ. ಇನ್ನು ಪವರ್ ಹಿಟರ್ ದಿನೇಶ್ ಕಾರ್ತಿಕ್ ಸಾಮರ್ಥ್ಯ ಎಲ್ಲರಿಗು ತಿಳಿದೇ ಇದೆ.
ಮೊದಲ ಪಂದ್ಯದಲ್ಲಿ ಕಾರ್ತಿಕ್ ಗೆ ತಮ್ಮ ಪ್ರದರ್ಶನ ತೋರಿಸಲು ಯಾವುದೇ ಅವಕಾಶ ಸಿಗಲಿಲ್ಲ. ಎರಡು ಬಾಲ್ ಆಡಿದರಷ್ಟೇ. ಹಾರ್ದಿಕ್ ಹಾಗು ಕಾರ್ತಿಕ್ ಭಾರತ ತಂಡದ ಇಬ್ಬರು ಪವರ್ ಹಿಟರ್ ಗಳಾಗಿದ್ದಾರೆ. ಇನ್ನು ಸ್ಪಿನ್ ವಿಭಾಗದಲ್ಲಿ ಯಜುವೇಂದ್ರ ಚಾಹಲ್ ಅನುಭವಿ ಆಟಗಾರ ಇವರಿಗೆ ಸಾತ್ ನೀಡಲಿದ್ದಾರೆ ಅಕ್ಷರ್ ಪಟೇಲ್. ಇವರಲ್ಲಿ ಯಾವುದೇ ಬದಲಾವಣೆ ಇರದು. ಇನ್ನು ವೇಗದ ಬೌಲಿಂಗ್ ನಾಯಕತ್ವ ಭುವನೇಶ್ವರ್ ಕುಮಾರ್ ಅವರೇ ಈ ಪಂದ್ಯದಲ್ಲೂ ವಹಿಸಲಿದ್ದಾರೆ. ಇನ್ನು ಹರ್ಷಲ್ ಪಟೇಲ್ ಕೂಡ ತಂಡದಲ್ಲಿ ಕಾಣಿಸಿಕೊಳ್ಳಬಹುದು.
ಇನ್ನು ಉಳಿದ ಒಂದು ಸ್ಥಾನಕ್ಕೆ ಆವೇಶ್ ಖಾನ್, ಅರ್ಶದೀಪ್ ಸಿಂಗ್ ಹಾಗು ಉಮ್ರಾನ್ ಮಲ್ಲಿಕ್ ನಡುವೆ ಪೈಪೋಟಿ ಇದೆ. ಮೊದ್ಲ ಪಂದ್ಯದಲ್ಲಿ ಆವೇಶ ಖಾನ್ ಗೆ ಸ್ಥಾನ ನೀಡಲಾಗಿತ್ತು. ಆದರೆ ಇವರ ಪ್ರದರ್ಶನದಿಂದ ಈ ಬಾರಿ ಇವರು ಹೊರಗೆ ಉಳಿಯುವುದು ಬಹುತೇಕ ಖಚಿತ. ಇನ್ನು ಅರ್ಶದೀಪ್ ಸಿಂಗ್ ಗೆ ಈ ಬಾರಿ ತಂಡದಲ್ಲಿ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಉಮ್ರಾನ್ ಮಲಿಕ್ ಈ ಬಾರಿಯೂ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನವಾಗಿದೆ. ಉಮ್ರಾನ್ ಮಲಿಕ್ ವೇಗವಾಗಿ ಬೌಲಿಂಗ್ ಮಾಡಬಲ್ಲರು ಆದರೆ ರನ್ ತಡೆಯಲು ಸಮರ್ಥರಿಲ್ಲ. ಇನ್ನು ಅರ್ಶದೀಪ್ ಬಗ್ಗೆ ಹೇಳಬೇಕೆಂದರೆ ಇವರು ಉತ್ತಮ ಬೌಲರ್. ರನ್ ತಡೆಯುವಲ್ಲಿ ಉತ್ತಮವಾಗಿದ್ದಾರೆ.
ಹಾಗೇನೇ ಐಪಿಎಲ್ ಅಲ್ಲಿ ಅತಿ ಹೆಚ್ಚು ಯೋರ್ಕರ್ ಹಾಕಿದವರಲಿ ಇವರು ಎರಡನೇ ಸ್ಥಾನದಲ್ಲಿ ಇದ್ದಾರೆ. ಇದೆ ಕಾರಣಕ್ಕೆ ಇವತ್ತಿನ ಪಂದ್ಯಕ್ಕೆ ಅರ್ಶದೀಪ್ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತ ಎನ್ನುವುದು ನಮ್ಮ ಅಭಿಪ್ರಾಯ. ಇವತ್ತಿನ ಪ್ಲೇಯಿಂಗ್ 11 ಹೀಗಿರಬಹುದು- ಇಶಾನ್ ಕಿಶನ್, ಋತುರಾಜ್ ಗೈಕ್ವಾಡ್,ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್,ಯುಜುವೇಂದ್ರ ಚಾಹಲ್, ಅಕ್ಷರ್ ಪಟೇಲ್,ಭುವನೇಶ್ವರ್ ಕುಮಾರ್,ಹರ್ಷಲ್ ಪಟೇಲ್, ಅರ್ಶದೀಪ್ ಸಿಂಗ್/ಉಮ್ರಾನ್ ಮಲಿಕ್/ಆವೇಶ್ ಖಾನ್.