ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯಕ್ಕೆ ಭಾರತ ತಂಡಕ್ಕೆ ಈ ಮೂರೂ ಆಟಗಾರರ ಆಯ್ಕೆ ಯಾಕೆ ಎಂದು ಕೇಳಿದ ಅಭಿಮಾನಿಗಳು.

268

ದಕ್ಷಿಣ ಆಫ್ರಿಕಾ ಹಾಗು ಭಾರತ ನಡುವಿನ ಪಂದ್ಯಕ್ಕೆ ಭಾರತದ ೧೮ ಮಂದಿಯ ತಂಡವನ್ನು ರಚಿಸಲಾಗಿದೆ. ವಿರಾಟ್ ಕೊಹ್ಲಿ ಹಾಗು ರೋಹಿತ್ ಶರ್ಮ ಸೇರಿದಂತೆ ಅನೇಕ ಅನುಭವಿ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಕೆಎಲ್ ರಾಹುಲ್ ಈ ಬಾರಿ ತಂಡವನ್ನ ಮುಂದುವರೆಸಿದ್ದಾರೆ. ಆದರೆ ತಂಡಕ್ಕೆ ಮೂರೂ ಆಟಗಾರರನ್ನು ಆಯ್ಕೆ ಮಾಡಲಾಗಿದ್ದು, ಅವರನ್ನು ಯಾವ ಕಾರಣಕ್ಕೆ ಆಯ್ಕೆ ಮಾಡಿದ್ದಾರೆ ಎನ್ನುವುದು ಕ್ರಿಕೆಟ್ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.

೧. ಶ್ರೇಯಸ್ ಅಯ್ಯರ್- ವಿರಾಟ್ ಕೊಹ್ಲಿ ಅವರ ದೀರ್ಘವದಿಯ ಬದಲಿ ಆಟಗಾರ ಎಂದೇ ಕರೆಯಲ್ಪಡುವ ಆಟಗಾರ ಶ್ರೇಯಸ್ ಅಯ್ಯರ್. ಈ ಬಾರಿಯ ಐಪಿಎಲ್ ಅಲ್ಲಿ ಕೋಲ್ಕತ್ತಾ ತಂಡವನ್ನು ಮುನ್ನಡೆಸುವ ಜವಾಬ್ದಾರಿ ಹೊಂದಿದ್ದರು. ಆದರೆ ಅವರ ನಾಯಕತ್ವ ಹಾಗು ಅವರ ಬ್ಯಾಟಿಂಗ್ ತುಂಬಾ ಕಳಪೆಯಾಗಿತ್ತು. ಅವರು ಹೇಳಿಕೊಳ್ಳುವಂತಹ ಆಟ ಹಾಗು ನಾಯಕತ್ವ ನಿಭಾಯಿಸಿರಲಿಲ್ಲ. ೧೪ ಪಂದ್ಯಗಳಲ್ಲಿ ಗಳಿಸಿದ್ದು ೪೦೧ ರನ್ ಅಷ್ಟೇ ಅವರ ಸ್ಟ್ರೈಕ್ ರೇಟ್ ಕೇವಲ ೧೩೫. ಅವರ ಸ್ಥಿರತೆ ಈ ಬಾರಿಯ ಆಟದಲ್ಲಿ ಇರಲಿಲ್ಲ. ಕೇವಲ ೩ ಅರ್ಧಶತಕ ಅಷ್ಟೇ ಅವರ ದಾಖಲೆ.

೨. ವೆಂಕಟೇಶ್ ಅಯ್ಯರ್- ಈ ಆಟಗಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಆಟವಾಡಿ ಎಲ್ಲರ ಗಮನ ಸೆಳೆದಿದ್ದರು, ಅವರ ಪ್ರದರ್ಶನ ಕೂಡ ಅಷ್ಟೇ ಉತ್ತಮವಾಗಿತ್ತು. ಜಡೇಜಾ ಅವರ ಬದಲಿಗೆ ಒಬ್ಬ ಉತ್ತಮ ಎಲ್ಲ ರೌಂಡರ್ ಸಿಕ್ಕಿದರು ಎಂದು ಎಲ್ಲರು ಹೇಳಿದ್ದಾರೆ. ಅದೇ ಕಾರಣಕ್ಕೆ ಕೋಲ್ಕತ್ತಾ ಅವರನ್ನು ಅತಿ ಹೆಚ್ಚು ಮೊತ್ತ ನೀಡಿ ತಂಡದಲ್ಲಿ ಉಳಿಸಿಕೊಂಡಿತ್ತು. ಆದರೆ ಈ ಆವೃತ್ತಿಯಲ್ಲಿ ಅವರ ಪ್ರದರ್ಶನ ತುಂಬಾ ನಿರಾಸೆ ಮೂಡಿಸಿತ್ತು. ಆರಂಭಿಕ ಆಟಗಾರನಾಗಿ ಬಂದಿದ್ದ ವೆಂಕಿ ಅವರ ಬ್ಯಾಟ್ ಇಂದ ಬಂದಿದ್ದು ಬರಿ ೧೮೨ ರನ್ ಅದು ಕೂಡ ಆಡಿದ ೧೨ ಪಂದ್ಯಗಳಲ್ಲಿ. ಅಲ್ಲದೆ ಒಂದ್ ವಿಕೆಟ್ ಕೂಡ ಪಡೆಯಲು ಸಾಧ್ಯವಾಗಿಲ್ಲ.

೩. ಇಶಾನ್ ಕಿಶನ್- ಇಶಾನ್ ಕಿಶನ್ ಕಳೆದ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕೊನೆಯ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ಎಲ್ಲರ ಮನಸು ಗೆದ್ದಿದ್ದ ಇಶಾನ್ ಕಿಶನ್ ಅವರು ಬರೋಬ್ಬರಿ ೧೫ ಕೋಟಿ ಗು ಅಧಿಕ ಹಣ ನೀಡಿ ಮುಂಬೈ ತಂಡ ಉಳಿಸಿಕೊಂಡಿತ್ತು. ಆದರೆ ಈ ಬಾರಿಯ ಅವರ ಬ್ಯಾಟ್ ಇಂದ ಹೇಳಿಕೊಳ್ಳುವಂತಹ ಯಾವುದೇ ಪ್ರದರ್ಶನ ನಾವು ನೋಡಲು ಸಾಧ್ಯವಾಗಿಲ್ಲ. ಮುಂಬೈ ಪರ ಈ ಬಾರಿ ಅತಿ ಹೆಚ್ಚು ರನ್ ಗಳಿಸಿದ್ದು ಇಶಾನ್ ಕಿಶನ್ ಆದರೂ ಕೂಡ ಆರಂಭಿಕರಾಗಿ ಬರುವ ಇವರು ಆಡಿದ ೧೪ ಪಂದ್ಯಗಳಲ್ಲಿ ಗಳಿಸಿದ್ದು ಕೇವಲ ೪೧೮ ರನ್. ಇವರ ಸ್ಟ್ರೈಕ್ ರೇಟ್ ಕೇವಲ ೧೨೦ ರ ಆಸು ಪಾಸಿನಲ್ಲಿದೆ.

ಇನ್ನು ಹೈದರಾಬಾದ್ ತಂಡದ ಇಮ್ರಾನ್ ಮಲಿಕ್ ಅವರನ್ನು ಕೂಡ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ. ಇವರು ಉತ್ತಮ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ ಅನ್ನುವ ಕಾರಣಕ್ಕೆ ಆಯ್ಕೆ ಮಾಡಿರಬೇಕು ಕಾಣುತ್ತದೆ, ಇವರು ವೇಗದ ಬೌಲಿಂಗ್ ಅಷ್ಟೇ ಮಾಡುತ್ತಾರೆ ಹೊರತು ರನ್ ಬಿಟ್ಟುಕೊಡುವುದರಲ್ಲಿ ಕೂಡ ಮಹಾರಥರು, ವಿಕೆಟ್ ಪಡೆಯುದರಲ್ಲಿ ಕೂಡ ಅಷ್ಟೇನೂ ಉತ್ತಮವಾಗಿಲ್ಲ, ಆದರೂ ಕೂಡ ಇವರನ್ನು ಆಯ್ಕೆ ಮಾಡಿದ್ದಾರೆ ಬಿಸಿಸಿಐ. ಇನ್ನು ರಾಹುಲ್ ತ್ರಿಪಾಠಿ ಎಲ್ಲ ಆವೃತ್ತಿಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದರು ಕೂಡ ಇವರನ್ನು ಆಯ್ಕೆ ಮಾಡಿಲ್ಲ. ಇದು ಎಲ್ಲರಲ್ಲಿ ಬೇಸರ ತಂದಿದೆ.

Leave A Reply

Your email address will not be published.