ದಿನೇಶ್ ಕಾರ್ತಿಕ್ ಗೋಸ್ಕರ ಔಟ್ ಆಗುವ ಯೋಚನೆ ಮಾಡಿದ್ದೆ. ಪಂದ್ಯ ಗೆದ್ದ ನಂತರ ಅಚ್ಚರಿಯ ಹೇಳಿಕೆ ನೀಡಿದ ನಾಯಕ ಡುಪ್ಲೆಸಿಸ್.

5,787

ಭಾನುವಾರ ಅಂದರೆ ೦೯/೦೫/೨೦೨೨ ರಂದು ನಡೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗು ಸನ್ ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದಲ್ಲಿ RCB ಭರ್ಜರಿ ೬೭ ರನ್ ಗಳಿಂದ ಗೆದ್ದು ಬೀಗಿದೆ. ಇದರ ಜೊತೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿಯೇ ಮುಂದುವರೆದಿದೆ. ಇನ್ನು ಅತಿ ಹೆಚ್ಚು ಅಂತರ ಹಾಗೇನೇ ೨೦ ಓವರ್ ಗಳಿಗಿಂತ ಮೊದಲೇ ಗೆದ್ದದ್ದರಿಂದ RCB ರನ್ ರೇಟ್ ಕೂಡ ಬಹಳ ಸುಧಾರಿಸಿದೆ. ಇನ್ನು ಎರಡು ಪಂದ್ಯ ಗೆದ್ದರೆ RCB ಪ್ಲೇಆಫ್ ಕನಸು ಸುಗಮವಾಗಲಿದೆ.

ನಿನ್ನೆಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮಗದೊಮ್ಮೆ ಗೋಲ್ಡನ್ ಡಕ್ ಪಡೆದರೆ ನಾಯಕ ಡುಪ್ಲೆಸಿಸ್ ಉತ್ತಮ ಆಟ ಆಡಿದ್ದಾರೆ. ಕೇವಲ ೫೦ ಬಾಲ್ ಗಳಲ್ಲಿ ೭೩ ರನ್ ಗಳಿಸಿದ್ದಾರೆ. ಅಲ್ಲದೆ ಇವರಿಗೆ ಸಾತ್ ನೀಡಿದ್ದು ರಜತ್ ಪಾಟೀದಾರ್ ೪೮ ರನ್ ಗಳಿಸಿದರು. ಅನಂತರ ಬಂಡ ಮ್ಯಾಕ್ಸ್ವೇಲ್ ಕೂಡ ೩೩ ರನ್ ಗಳ ಉತ್ತಮ ಆಟ ಅಡಿ ತಂಡದ ಮೊತ್ತ ೧೫೦ ರ ಗಡಿ ದಾಟುವಟೆ ಮಾಡಿದರು. ನಂತರ ನಾವು ನೋಡಿದ್ದು ದಿನೇಶ್ ಕಾರ್ತಿಕ್ ಅವರ ಭರ್ಜರಿ ಆಟ. ಕೇವಲ ೮ ಬಾಲ್ ಗಳಲ್ಲಿ ಬರೋಬ್ಬರಿ ೩೦ ರನ್ ಗಳಿಸಿ ತಂಡದ ಮೊತ್ತವನ್ನು ೧೯೦ ರ ಗಡಿ ದಾಟಿಸಿದರು. ಇದರಲ್ಲಿ ೪ ಸಿಕ್ಸ್ ಹಾಗು ೧ ಫೋರ್ ಕೂಡಿತ್ತು.

ಗೆಲುವಿನ ಬಳಿಕ ನಾಯಕ ಡುಪ್ಲೆಸಿ ಮಾತಾಡುತ್ತ ಕೇವಲ ೮ ಎಸೆತಗಳಲ್ಲಿ ಅಜೇಯ ೩೦ ರನ್ ಕಲೆ ಹಾಕಿದ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಅನ್ನು ಗುಣಗಾನ ಮಾಡಿದರು. ದಿನೇಶ್ ಕಾರ್ತಿಕ್ ಹಿರಿಯ ಆಟಗಾರ ಅವರಿಗೆ ಬ್ಯಾಟಿಂಗ್ ಅವಕಾಶ ಕಲ್ಪಿಸಿಕೊಡಲು ನಾನು ರಿಟೈರ್ಡ್ ಔಟ್ ಆಗುವ ಬಗ್ಗೆ ಯೋಚನೆ ಕೂಡ ಮಾಡಿದ್ದೆ ಎಂದು ಹೇಳಿದ್ದಾರೆ. ನಿಜವಾಗಿ ಹೇಳಬೇಕೆಂದರೆ ನಾನು ಸುಸ್ತಾಗಿದ್ದೆ, ದಿನೇಶ್ ಕಾರ್ತಿಕ್ ಸಿಕ್ಸರ್ ಹೊಡೆಯುವುದನ್ನು ನೋಡುತ್ತಿದ್ದರೆ ಇನ್ನು ಹೆಚ್ಚಿನ ಸಮಯ ಅವರಿಗೆ ಬ್ಯಾಟ್ ಮಾಡಲು ಅವಕಾಶ ಕಲ್ಪಿಸಬೇಕು. ಅದಕ್ಕಾಗಿ ಔಟ್ ಆಗಲು ಪ್ರಯತ್ನಿಸುತ್ತಿದೆ.

ದಿನೇಶ್ ಕಾರ್ತಿಕ್ ಅತ್ಯುತ್ತಮ ಫಾರಂ ಅಲ್ಲಿ ಇದ್ದಾರೆ. ಇದು ಸ್ವಲ್ಪ ಟ್ರಿಕಿ ವಿಕೆಟ್ ಆಗಿತ್ತು. ಸಾಕಷ್ಟು ಆರಂಭಿಕ ಆಟಗಾರರು ಕೆಲ ಬಾಲ್ ಗಳಿಂದ ತೊಂದರೆ ಅನುಭವಿಸಿದ್ದರು. ಆದರೆ ದಿನೇಶ್ ಕಾರ್ತಿಕ್ ಅವರ ಒಂದು ಕ್ಯಾಚ್ ಚೆಲ್ಲಿದರಿಂದ ನಮಗೆ ಅದು ಅದೃಷ್ಟವಾಗಿ ಪರಿಣಮಿಸಿತು. ಅದರ ಲಾಭ ದಿನೇಶ್ ಕಾರ್ತಿಕ್ ಸಂಪೂರ್ಣವಾಗಿ ಪಡೆದುಕೊಂಡರು. ಇಲ್ಲಿಯವರೆಗೆ ಆಡಿದ ೧೨ ಪಂದ್ಯಗಳಲ್ಲಿ ದಿನೇಶ್ ಕಾರ್ತಿಕ್ ಸರಾಸರಿ ೬೮.೫ ಹಾಗು ರನ್ ೨೭೪ ಆಗಿದೆ. ಅವರ ಸ್ಟ್ರೈಕ್ ರೇಟ್ ೨೦೦ಕ್ಕೂ ಹೆಚ್ಚಿದೆ. ಅದೇ ರೀತಿ ವನಿಂದು ಹಸಾರಂಗ ಅವರು ೫ ವಿಕೆಟ್ ಗೋಂಚಿಲು ಪಡೆದದಕ್ಕೂ ಡುಪ್ಲೆಸಿಸ್ ಸಂತಸ ವ್ಯಕ್ತ ಪಡಿಸಿದ್ದಾರೆ.

Leave A Reply

Your email address will not be published.