ದಿನೇಶ್ ಕಾರ್ತಿಕ್ ವಯಸ್ಸು ನೋಡಬೇಡಿ ಆತನ ಆಟ ನೋಡಿ. ಈತ ಆಸ್ಟ್ರೇಲಿಯಾ ವಿಶ್ವಕಪ್ ಗೆ ವಿಮಾನ ಏರದಿದ್ದರೆ ಅದು ದೊಡ್ಡ ಆಶ್ಚರ್ಯ ಎಂದ ಸುನಿಲ್ ಗವಾಸ್ಕರ್.

1,202

ಭಾರತ ತಂಡದ ವಿಕೆಟ್ ಕೀಪರ್ ಹಾಗು ಬ್ಯಾಟ್ಸಮನ್ ದಿನೇಶ್ ಕಾರ್ತಿಕ್ ವರ್ಷಗಳ ಬಳಿಕ ಭಾರತ ತಂಡಕ್ಕೆ ಆಯ್ಕೆ ಆಗಿದ್ದಾರೆ. ಇದೀಗ ತಂಡದಲ್ಲಿ ಬ್ಯಾಟ್ಸಮನ್ ಆಗಿ ಆಡುತ್ತಿದ್ದಾರೆ ಹಾಗೇನೇ ಭಾರತ ತಂಡದ ಫಿನಿಶರ್ ಆಗಿ ಮಿಂಚುತ್ತಿದ್ದಾರೆ. ರಾಜಕೋಟ್ ಅಲ್ಲಿ ನಡೆದ ಸೌತ್ ಆಫ್ರಿಕಾ ಎದುರಿನ ಪಂದ್ಯದಲ್ಲಿ ಇವರ ಬೊಂಬಾಟ್ ಬಿರುಸಿನ ಆಟದಿಂದ ಸಂಕಷ್ಟದಲ್ಲಿದ್ದ ಭಾರತ ತಂಡವನ್ನು ಗೆಲುವಿನ ನಗೆ ಬಿರಿಸುವಲ್ಲಿ ಇವರದೇ ಮುಖ್ಯ ಪಾತ್ರ ಎಂದರೆ ತಪ್ಪಾಗಲಾರದು. ಅರ್ಧ ಶತಕ ಬಾರಿಸಿ ತಂಡ ಗೆಲುವಿನ ರೂವಾರಿ ಆಗಿ ಮಿಂಚಿದರು.

ಐಪಿಎಲ್ ನ ಈ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ ದಿನೇಶ್ ಕಾರ್ತಿಕ ತಮ್ಮ ಬ್ಯಾಟಿಂಗ್ ಅಬ್ಬರದ ಮೂಲಕ ಆಯ್ಕೆಗಾರರ ಗಮನ ಸೆಳೆದರು. ಈ ಬೊಂಬಾಟ್ ಆಟದಿಂದಾಗಿ ಇದೀಗ ಭಾರತ ತಂಡಕ್ಕೆ ವಾಪಸ್ಸಾಗಿದ್ದಾರೆ. ಇದೀಗ ಆಸ್ಟ್ರೇಲಿದಲ್ಲ್ಲಿ ನಡೆಯಲಿರುವ ಟಿ-೨೦ ವಿಶ್ವಕಪ್ ಗೆ ಇವರು ಅನುಭವಿ ಆಟಗಾರನಾಗಿ ಆಯ್ಕೆ ಆಗಬೇಕು ಎಂದು ಎಲ್ಲರ ಇಚ್ಛೆ ಕೂಡ ಆಗಿದೆ. ಈ ಹೇಳಿಕೆ ನೀಡುವಲ್ಲಿ ಮುಖ್ಯವಾಗಿ ಕಾಣಿಸಿಕೊಂಡಿದ್ದು ಸುನೀಲ್ ಗವಾಸ್ಕರ್. ದಿನೇಶ್ ಕಾರ್ತಿಕ್ ಅವರ ಆಟದಿಂದ ಬಹಳ ಪ್ರಭಾವಿತರಾದ ಇವರು ವಿಶ್ವಕಪ್ ಗೆ ಇವರು ತಂಡದಲ್ಲಿ ಇರಲೇಬೇಕು ಎಂದು ಹೇಳಿದ್ದಾರೆ.

ನಾಲ್ಕನೇ ಟಿ-೨೦ ಪಂದ್ಯದಲ್ಲಿ ಬ್ಯಾಟಿಂಗ್ ನಿಂದ ದೊಡ್ಡ ಹೊಡೆತ ನೀಡಲೇಬೇಕಾದ ಸಂದರ್ಭದಲ್ಲಿ ಇವರು ಮೈದಾನಕ್ಕೆ ಬಂದರು. ಇಲ್ಲಿ ಉತ್ತಮವಾಗಿ ರನ್ ಪೇರಿಸಲೇಬೇಕಾಗಿತ್ತು. ಅದನ್ನು ಹೊರತು ಪಡಿಸಿ ಬೇರೆ ಆಯ್ಕೆ ದಿನೇಶ್ ಗೆ ಇರಲಿಲ್ಲ. ಇದನ್ನು ಅವರು ಉತ್ತಮವಾಗಿ ನಿಭಾಯಿಸಿದ್ದಾರೆ. ಇವರ ವಯಸ್ಸು ನೋಡುವುದು ಬೇಡ ಇವರ ಆಟ ನೋಡಬೇಕಾಗಿದೆ. ಮುಂಬರುವ ವಿಶ್ವಕಪ್ ಗೆ ಇವರು ಆಸ್ಟ್ರೇಲಿಯಾ ವಿಮಾನದಲ್ಲಿ ಇಲ್ಲದೆ ಇದ್ದಾರೆ ಅದಕ್ಕಿಂತ ಆಶ್ಚರ್ಯಕರ ಸಂಗತಿ ಬೇರೆ ಇಲ್ಲ ಎಂದು ಸುನೀಲ್ ಗವಾಸ್ಕರ್ ಹೇಳಿದ್ದಾರೆ.

ನಾಲ್ಕನೇ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಮೈದಾನಕ್ಕೆ ಇಳಿದಾಗ ಭಾರತ ತಂಡ ೮೧ ರನ್ ಗಳಿಗೆ ೪ ವಿಕೆಟ್ ಕಳೆದುಕೊಂಡಿತ್ತು. ಆದರೆ ಇವರು ಹಾರ್ದಿಕ್ ಪಂದ್ಯ ಜೊತೆ ಗೂಡಿ ತಂಡವನ್ನು ಉತ್ತಮವಾಗಿ ನಿಭಾಯಿಸಿದರು. 5 ನೇ ವಿಕೆಟ್ ಗೆ ಮಹತ್ವದ ೬೫ ರನ್ ಜೊತೆಯಾಟ ನಡೆಸಿದರು. ದಿನೇಶ್ ಕಾರ್ತಿಕ್ ಕೇವಲ ೨೭ ಬಾಲ್ ಗಳಲ್ಲಿ ೯ ಫೋರ್ ಹಾಗು ೨ ಸಿಕ್ಸರ್ ನೆರವಿನಿಂದ 55 ರನ್ ಗಳಿಸಿ ತಂಡದ ಮೊತ್ತ ೧೬೯ ಗೆ ತಲುಪಿಸಿದರು. ಇರ್ಫಾನ್ ಪಠಾಣ್ ಕೂಡ ದಿನೇಶ್ ಕಾರ್ತಿಕ್ ಬಗ್ಗೆ ಉತ್ತಮವಾಗಿ ಮಾತಾಡುತ್ತ ಇದೀಗ ಕಾರ್ತಿಕ್ ಉತ್ತಮ ಲಯದಲ್ಲಿ ಇದ್ದಾರೆ ಎಂದು ಹೇಳಿದ್ದಾರೆ.

Leave A Reply

Your email address will not be published.