ದಿನೇಶ್ ಕಾರ್ತಿಕ್ ಹಾಗೂ ಪಂತ್ ವಿಚಾರದಲ್ಲಿ ಭಾರತಕ್ಕೆ ಸಲಹೆ ನೀಡಿದ ಆಸ್ಟ್ರೇಲಿಯಾ ಗ್ರಿಲ್ ಕ್ರಿಸ್ಟ್ ಹೇಳಿದ್ದೇನು ಗೊತ್ತೆ??

127

ಅಕ್ಟೋಬರ್ 16 ರಿಂದ ನವೆಂಬಫ್ 13ರ ವರೆಗೂ ಐಸಿಸಿ ಟಿ20 ವಿಶ್ವಕಪ್ ಪಂದ್ಯಗಳು ನಡೆಯಲಿದೆ. ಇದಕ್ಕಾಗಿ ಭಾರತ ತಂಡವು ಬಲಿಷ್ಠವಾದ ಪ್ಲೇಯಿಂಗ್ 11 ಟೀಮ್ ಕಟ್ಟುವ ಪ್ರಯತ್ನದಲ್ಲಿದೆ. ವಿಶ್ವಕಪ್ ಪಂದ್ಯಗಳು ಈ ಬಾರಿ ನಡೆಯುತ್ತಿರುವುದು ಆಸ್ಟ್ರೇಲಿಯಾದಲ್ಲಿ. ಪ್ರಸ್ತುತ ಭಾರತದಲ್ಲಿ ಇಂಡಿಯಾ ವರ್ಸಸ್ ಆಸ್ಟ್ರೇಲಿಯಾ ಮೂರು ಸರಣಿ ಪಂದ್ಯಗಳು ನಡೆಯುತ್ತಿವೆ. ಭಾರತ ತಂಡದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಗಳಾಗಿರುವ ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್ ಇಬ್ಬರಲ್ಲಿ ಯಾರನ್ನು ತೆಗೆದುಕೊಳ್ಳಬೇಕು ಎನ್ನುವ ಬೆಂಬಳ ಇದೆ. ಇದೀಗ ವಿಶ್ವದ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಕ್ರಿಸ್ ಗೇಯ್ಲ್ ಅವರು ಉತ್ತರ ಕೊಟ್ಟಿದ್ದಾರೆ.

ಕ್ರಿಸ್ ಗೇಯ್ಲ್ ಅವರು ಹೇಳುವ ಪ್ರಕಾರ ಭಾರತದ ಪ್ಲೇಯಿಂಗ್ 11 ನಲ್ಲಿ ಇಬ್ಬರು ಇರಬೇಕು. ರಿಷಬ್ ಪಂತ್ ಅವರು ಟೆಸ್ಟ್ ಹಾಗೂ ಒನ್ ಡೇ ಕ್ರಿಕೆಟ್ ನಲ್ಲಿ ಅದ್ಭುತವಾದ ಪ್ರದರ್ಶನ ನೀಡುವ ಹಾಗೆ ಟಿ20 ಪಂದ್ಯಗಳಲ್ಲಿ ನೀಡುತ್ತಿದ್ದ ಎನ್ನುವ ಕಾರಣಕ್ಕೆ ರಿಷಬ್ ಪಂತ್ ಅವರನ್ನು ಪ್ಲೇಯಿಂಗ್ 11 ಇಂದ ಹೊರಗಿಟ್ಟು, ದಿನೇಶ್ ಕಾರ್ತಿಕ್ ಅವರಿಗೆ ಸ್ಥಾನ ಕೊಡಲಾಗಿದೆ. ಇದೀಗ ಕ್ರಿಸ್ ಗೇಯ್ಲ್ ಅವರು ಇದರ ಬಗ್ಗೆ ಮಾತನಾಡಿ, “ವೇಗವಾಗಿ ಬೌಲಿಂಗ್ ಮಾಡುವ ಬೌಲರ್ ಗಳ ಎದುರು ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಲು ಗುಂಡಿಗೆ ಬೇಕು, ರಿಷಬ್ ಪಂತ್ ಕೆಚ್ಚೆದೆಯ ಆಟಗಾರ. ಹಾಗಾಗಿ ಪ್ಲೇಯಿಂಗ್ 11 ನಲ್ಲಿ ಪಂತ್ ಇರಬೇಕು.

ಭಾರತದ ಮ್ಯಾನೇಜ್ಮೆಂಟ್ ಇಬ್ಬರನ್ನು ಒಟ್ಟಿಗೆ ಆಡಿಸಿದರೆ ಒಳ್ಳೆಯದು. ಪಂತ್ ಅವರು ತಂಡದಲ್ಲಿ ಇರಲೇಬೇಕು. ಇವರಿಬ್ಬರಿಗೂ ಒಟ್ಟಿಗೆ ಆಡುವ ಅವಕಾಶವನ್ನು ಭಾರತ ಕೊಡುತ್ತದೆಯೇ ಎನ್ನುವ ಕುತೂಹಲ ಇದೆ. ನನ್ನ ಅಭಿಪ್ರಾಯ, ಇಬ್ಬರು ಆಡಬೇಕು, ದಿನೇಶ್ ಕಾರ್ತಿಕ್ ತಂಡದ ಬ್ಯಾಟಿಂಗ್ ನಲ್ಲಿ ವಿಭಿನ್ನತೆ ತರುತ್ತಾರೆ, ಅಗ್ರ ಕ್ರಮಾಂಕದಲ್ಲಿ ಸಹ ಚೆನ್ನಾಗಿ ಆಡಬಲ್ಲರು. ವೃತ್ತಿಜೀವನದಲ್ಲಿ ಹಲವು ಕ್ರಮಾಂಕಗಳಲ್ಲಿ ಕಾರ್ತಿಕ್ ಆಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ, ಫಿನಿಷರ್ ಆಗಿ ತಮ್ಮ ಸಾಮರ್ಥ್ಯ ತೋರಿಸಿಕೊಟ್ಟಿದ್ದಾರೆ..” ಎಂದು ಹೇಳಿದ್ದಾರೆ ಕ್ರಿಸ್ ಗೇಯ್ಲ್..

Leave A Reply

Your email address will not be published.