ಧೋನಿಗೆ ಕ್ರಿಕೆಟ್ ಗಿಂತಲೂ ಇದರಲ್ಲಿ ಹೆಚ್ಚು ಆಸಕ್ತಿಯಂತೆ. ಹರ್ಭಜನ್ ಸಿಂಗ್ ರಿಂದ ಬಯಲು?

1,296

ಎಂ ಎಸ್ ಧೋನಿ ಎಂಬ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕ್ರಿಕೆಟ್ ಜಗತ್ತಿನಲ್ಲಿ ಭಾರತ ತಂಡವನ್ನು ಹೊಸ ಆಯಾಮಕ್ಕೆ ತೆಗೆದುಕೊಂಡು ಹೋದ ನಾಯಕರ ಪಟ್ಟಿಯಲ್ಲಿ ಗಂಗೂಲಿ ನಂತರದ ಸ್ಥಾನ ಮಹೇಂದ್ರ ಸಿಂಗ್ ಧೋನಿ ಎಂದು ಹೇಳುತ್ತಾರೆ ಕ್ರಿಕೆಟ್ ಪರಿಣಿತರು. ಸ್ವತಃ ಸೌರವ್ ಗಂಗೂಲಿ ಕೂಡ ಹೇಳಿಕೆ ನೀಡಿದ್ದಾರೆ ಧೋನಿ ಈ ಯುಗದ ಶ್ರೇಷ್ಠ ನಾಯಕ ಎಂದು. ಅತ್ಯಂತ ಯಶಸ್ವಿ ನಾಯಕರ ಸಾಲಿನಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ ಧೋನಿ. ಭಾರತದ ಅದೆಷ್ಟೋ ವರ್ಷಗಳ ಕನಸನ್ನು ಎರಡು ಬಾರಿಗೆ ನನಸು ಮಾಡಿದ ಕೀರ್ತಿ ಇವರ ಪಾಲಿಗೆ ಇದೆ.

ಅದು ಎರಡು ವರ್ಲ್ಡ್ ಕಪ್ ಟ್ರೋಫಿಗಳು. ಇವರ ಸಾಧನೆ ಕೇವಲ ಭಾರತದ ತಂಡದಲ್ಲಿ ಮಾತ್ರ ಅಲ್ಲದೇ ಅವರು ತಮ್ಮ ಚವಿಯನ್ನು ಐಪಿಎಲ್ ನಲ್ಲಿ ಕೂಡ ಮೂಡಿಸಿದ್ದಾರೆ. ಐಪಿಎಲ್ ನಲ್ಲಿ ಯಶಸ್ಸು ಕಂಡಷ್ಟು ಮತ್ಯಾವ ನಾಯಕನು ಕಾಣಲಿಲ್ಲ ಎನ್ನಬಹುದು. ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಹ ಆಟಗಾರ ಆಗಿದ್ದ ಹರ್ಭಜನ್ ಸಿಂಗ್ ಅವರು ಧೋನಿ ಬಗ್ಗೆ ಕುತೂಹಲ ಮಾಹಿತಿ ಒಂದನ್ನು ಹೊರ ಹಾಕಿದ್ದಾರೆ. ಧೋನಿಗೆ ಕ್ರಿಕೆಟ್ ಗಿಂತಲೂ ಹೆಚ್ಚಿನ ಆಸಕ್ತಿ ಬೇರೆಯದರಲ್ಲಿ ಇದೆ.

ಅವರು ಕ್ರಿಕೆಟ್ ಆಟ ಮುಗಿಸಿದ ನಂತರ ತಮ್ಮ ಹೆಚ್ಚಿನ ಸಮಯವನ್ನು ಅದರ ಜೊತೆ ಕಳೆಯುತ್ತಾರೆ ಎನ್ನುತ್ತಾರೆ ಅವರು. ಹೌದು ಅದು ವಿಡಿಯೋ ಗೇಮ್ ಆಟಗಳು .ಧೋನಿ ಆವರಿಗೆ ಇ ಸ್ಪೋರ್ಟ್ಸ್ ನಲ್ಲಿ ಬಹಳ ಆಸಕ್ತಿ. ಆಟ ಮುಗಿಸಿ ಡ್ರೆಸ್ಸಿಂಗ್ ರೂಮ್ ಗೆ ಬಂದ ಕೂಡಲೇ ಅವರ ಆಟ ಶುರು ಆಗುತ್ತದೆ ಎನ್ನುತ್ತಾರೆ. ಕ್ರಿಕೆಟ್ ಗಿಂತಲೂ 15% ಹೆಚ್ಚಿನ ಸಮಯವನ್ನು ಅವರು ಇ ಸ್ಪೋರ್ಟ್ಸ್ ಜೊತೆ ಕಳೆಯುತ್ತಾರೆ ಎಂದು ಹರ್ಭಜನ್ ಸಿಂಗ್ ಹೇಳುತ್ತಾರೆ. ಅವರು ಅತೀ ಹೆಚ್ಚಾಗಿ ಫಿಫಾ PUBG ಆಟಗಳನ್ನು ಆಡುತ್ತಾರೆ ಎನ್ನುತ್ತಾರೆ ಬಜ್ಜಿ ಅವರು.

Leave A Reply

Your email address will not be published.