ಧೋನಿ ಹಾಗು ಪಾಂಡ್ಯ ಇವರುಗಳೇ ಈ ಬೌಲರ್ ಎದುರು ರನ್ ಮಾಡಲು ಪರದಾಡುತ್ತಾರೆ. ಈತ ದಕ್ಷಿಣ ಆಫ್ರಿಕಾದ ಎಲ್ಲ ಟಿ-೨೦ ಪಂದ್ಯಕ್ಕೂ ಬೇಕೇ ಬೇಕು ಎಂದ ಇರ್ಫಾನ್ ಪಠಾಣ್.

650

ಇಂಡಿಯನ್ ಪ್ರೀಮಿಯರ್ ಲೀಗ್ ಮುಗಿಯುತ್ತಿದ್ದಂತೆ ದಕ್ಷಿಣ ಆಫ್ರಿಕಾ ವಿರುದ್ದದ ಟಿ-೨೦ ಗೆ ಭಾರತ ತಂಡ ತಯಾರಾಗುತ್ತಿದೆ. ಈಗ ಎಲ್ಲರ ಗಮನ ಅಂತಾರಾಷ್ಟ್ರೀಯ ತಂಡದತ್ತ ಮುಖ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ೫ ಪಂದ್ಯಗಳ ಟಿ-೨೦ ಸರಣಿ ಆಡಲಿದೆ. ಇದು ಜೂನ್ ೯ ರಿಂದ ಶುರುವಾಗಲಿದೆ. ಈ ಪಂದ್ಯಗಳು ಶುರು ಆಗುವುದಕ್ಕಿಂತ ಮುಂಚೆಯೇ ಹಿರಿಯ ಆಟಗಾರರು ತಮ್ಮ ಅಭಿಪ್ರಾಯಗಳನ್ನು ತಿಳಿಸುತ್ತಿದ್ದಾರೆ. ಹಾಗೇನೇ ತಮ್ಮ ಲೆಕ್ಕಾಚಾರದ ಪ್ರಕಾರ ಪ್ಲೇಯಿಂಗ್ ೧೧ ತಂಡವನ್ನು ಪ್ರಕಟಿಸುತ್ತಿದ್ದಾರೆ. ಇದೀಗ ಭಾರತದ ಮಾಜಿ ಆಟಗಾರ ಇರ್ಫಾನ್ ಪಠಾಣ್ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಬಿಸಿಸಿಐ ಹೊಸ ಪ್ರತಿಭೆಗಳಿಗೆ ಮುಂದಿನ ಸರಣಿಗೆ ಅವಕಾಶ ನೀಡಿದೆ. ಇರ್ಫಾನ್ ಪಠಾಣ್ ಒಂದು ಅಂತಾರಾಷ್ಟ್ರೀಯ ಪಂದ್ಯ ಅದಾದ ೨೩ ವರ್ಷದ ಪ್ರತಿಭಾನ್ವಿತ ಆಟಗಾರ ಅರ್ಶದೀಪ್ ಸಿಂಗ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈ ಆಟಗಾರ ಐಪಿಎಲ್ ಅಲ್ಲಿ ಪಂಜಾಬ್ ಪರ ಉತ್ತಮವಾಗಿ ಆಟವಾಡಿ ಎಲ್ಲರ ಗಮನ ಸೆಳೆದಿದ್ದರು. ಆಡಿದ ೧೪ ಪಂದ್ಯಗಳಲ್ಲಿ ಒಟ್ಟು ೧೦ ವಿಕೆಟ್ ಕಬಳಿಸಿದ ಇವರು ರನ್ ನೀಡದೆ ಒಳ್ಳೆಯ ಎಕಾನೊಮಿಕಲ್ ಬೌಲರ್ ಎಂದು ಕರೆಸಿಕೊಂಡಿದ್ದಾರೆ. ಅದೇ ರೀತಿ ಇವರನ್ನು ಇರ್ಫಾನ್ ಪಠಾಣ್ ಡೆತ್ ಓವರ್ ಸ್ಪೆಷಲಿಸ್ಟ್ ಎಂದು ಕೂಡ ಕರೆದಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಚಾನೆಲ್ ಅಲ್ಲಿ ಮಾತಾಡುತ್ತ ಇರ್ಫಾನ್ ಪಠಾಣ್ ‘ ಅರ್ಶದೀಪ್ ಸಿಂಗ್ ಉತ್ತಮ ಬೌಲರ್, ಡೆತ್ ಓವರ್ ಸ್ಪೆಷಲಿಸ್ಟ್. ಇವರು ಮುಂಬರುವ ದಕ್ಷಿಣ ಆಫ್ರಿಕಾದ ಎದುರು ನಡೆಯುವ ಎಲ್ಲ ಟಿ-೨೦ ಪ್ಲೇಯಿಂಗ್ ೧೧ ಅಲ್ಲಿ ಕಾಣಿಸಿಕೊಳ್ಳಬೇಕೆಂದು ನಾನು ಆಶಿಸುತ್ತೇನೆ ಎಂದು ಹೇಳಿದ್ದಾರೆ. ಈ ಆಟಗಾರ ಹೆಚ್ಚು ವಿಕೆಟ್ ತೆಗೆಯದಿದ್ದರು ಕೂಡ ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಆಯ್ಕೆ ಆಗಿದ್ದಾರೆ. ಇದಕ್ಕೆ ಕಾರಣವಿದೆ. ಈತ ಡೆತ್ ಓವರ್ಗಳಲ್ಲಿ ಬೌಲಿಂಗ್ ಮಾಡುವಾಗ ಎಷ್ಟೇ ಉತ್ತಮ ಬ್ಯಾಟ್ಸಮನ್ ಆಗಿರಲಿ, ಧೋನಿ ಅಥವಾ ಪಾಂಡ್ಯ ಇವರನ್ನು ಬೌಂಡರಿ ಹೊಡೆಯಲು ಬಿಡುವುದಿಲ್ಲ. ಉತ್ತಮವಾಗಿ ಯೋರ್ಕರ್ ಹಾಕುವ ಮೂಲಕ ರನ್ ಕೊಡುವುದನ್ನು ನಿಲ್ಲಿಸುತ್ತಾರೆ ಈ ಆಟಗಾರ ಎಂದು ಪಠಾಣ್ ಹೇಳಿದ್ದಾರೆ.

೨೭ ಬೌಲರ್ ಗಳಲ್ಲಿ ಅರ್ಶದೀಪ್ ಸಿಂಗ್ ಉತ್ತಮ ಎಕಾನಮಿ ರೇಟ್ ಹೊಂದಿದ್ದಾರೆ. ಇವರ ಎಕಾನಮಿ ೭.೯೧ ಇದೆ. ಮೊದಲನೇ ಸ್ಥಾನದಲ್ಲಿ ಭುವನೇಶ್ವರ್ ಕುಮಾರ್ ಉತ್ತಮ ಎಕಾನಮಿ ಹೊಂದಿದ್ದಾರೆ. ಇವರ ಎಕಾನಮಿ ರೇಟ್ ೭.೬೬ ರಲ್ಲಿದೆ. ಅರ್ಶದೀಪ್ ಸಿಂಗ್ ಒಟ್ಟಾರೆ 36 ಯೋರ್ಕರ್ ಬೌಲ್ ಹಾಕಿದ್ದಾರೆ. ಒಳ್ಳೆ ವಿಷಯವೆಂದರೆ ಈ ಆಟಗಾರನಿಗೆ ಹೇಗೆ ಬೌಲಿಂಗ್ ಮಾಡಬೇಕು ಎನ್ನುವುದು ಗೊತ್ತಿದೆ, ಈ ಆಟದ ಬಗ್ಗೆ ಗೊತ್ತಿದೆ. ಯಾವ ಓವರ್ಗಳಲ್ಲಿ ಹೇಗೆ ಬೌಲಿಂಗ್ ಮಾಡಬೇಕು ಎಂದು ಗೊತ್ತಿದೆ. ಅದಕ್ಕೆ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆ ಆಗಿದ್ದರೆ ಎಂದು ಇರ್ಫಾನ್ ಪಠಾಣ್ ಹೇಳಿದ್ದಾರೆ.

Leave A Reply

Your email address will not be published.