ನನ್ನ ನಂಬರ್ ಎಲ್ಲರ ಬಳಿ ಇದೆ, ಆದರೆ ಅಂದು ನನಗೆ ಮೆಸೇಜ್ ಮಾಡಿದ್ದು ಆತ ಮಾತ್ರ. ಭಾವುಕರಾದ ಕೊಹ್ಲಿ ಬಹಿರಂಗಪಡಿಸಿದ್ದು ಏನು ಗೊತ್ತೇ??

167

ನಿನ್ನೆ ನಡೆದ ಏಷ್ಯಾಕಪ್ 2022, ಸೂಪರ್ 4 ಹಂತದ ಭಾರತದ ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ಧ ನಡೆಯಿತು, ಈ ಪಂದ್ಯದಲ್ಲಿ ಭಾರತ ತಂಡ ಟಾಸ್ ಸೋತು, ಮೊದಲು ಬ್ಯಾಟಿಂಗ್ ಮಾಡಿತು, ನಿನ್ನೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಗಳು ಚೆನ್ನಾಗಿ ಪ್ರದರ್ಶನ ನೀಡಲಿಲ್ಲ, ಆದರೆ ವಿರಾಟ್ ಕೋಹ್ಲಿ ಅವರು 60 ರನ್ ಭಾರಿಸಿ, ಭಾರತ ತಂಡಕ್ಕೆ ನೆರವಾದರು, ಅವರಿಂದ ಭಾರತ ಗಂಡ 181 ರನ್ ಗಳಿಸಲು ಸಾಧ್ಯವಾಯಿತು. ನಿನ್ನೆಯ ಇನ್ನಿಂಗ್ಸ್ ಇಂದ ಕೋಹ್ಲಿ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರವಾದರು. ಆದರೆ ಭಾರತ ತಂಡದ ಕಳಪೆ ಬೌಲಿಂಗ್ ಪ್ರದರ್ಶನದಿಂದ ಭಾರತ ತಂಡ ನಿನ್ನೆಯ ಪಂದ್ಯದಲ್ಲಿ ಸೋತಿತು..

19.5 ಓವರ್ ನಲ್ಲಿ 182 ರನ್ ಗಳಿಸಿ, ಗೆದ್ದಿತು ಪಾಕಿಸ್ತಾನ್ ತಂಡ. ಭಾರತ ತಂಡ ಹೆಚ್ಚಿನ ಮೊತ್ತ ಗಳಿಸಿದರು ಸಹ, ಅದನ್ನು ಸಂರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದೇ ಬೇಸರದ ವಿಚಾರ ಆಗಿದೆ. ನಿನ್ನೆಯ ಪಂದ್ಯ ಮುಗಿದ ಬಳಿಕ, ವಿರಾಟ್ ಕೋಹ್ಲಿ ಅವರು ಮಾಧ್ಯಮದ ಜೊತೆಗೆ ಮಾತನಾಡಿ, ಒಂದು ಆಸಕ್ತಿಕರ ವಿಚಾರವನ್ನು ಶೇರ್ ಮಾಡಿಕೊಂಡಿದ್ದಾರೆ. ಅಂದು ಕೋಹ್ಲಿ ಅವರು ಟೆಸ್ಟ್ ಪಂದ್ಯಗಳ ಕ್ಯಾಪ್ಟನ್ಸಿ ಬಿಟ್ಟಾಗ, ಮೆಸೇಜ್ ಮಾಡಿ ವಿಚಾರಿಸಿಕೊಂಡಿದ್ದು ಒಬ್ಬ ವ್ಯಕ್ತಿ ಮಾತ್ರ, ಹಲವು ಜನರ ಬಳಿ ನನ್ನ ನಂಬರ್ ಇದ್ದರೂ ಯಾರು ನನಗೆ ಮೆಸೇಜ್ ಮಾಡಲಿಲ್ಲ ಎಂದು ಹೇಳಿದ್ದಾರೆ ಕೋಹ್ಲಿ..

ಕೋಹ್ಲಿ ಅವರು ಹೇಳಿದ್ದು ಮತ್ಯಾರ ಬಗ್ಗೆಯೂ ಅಲ್ಲ, ಎಂ.ಎಸ್.ಧೋನಿ ಅವರ ಬಗ್ಗೆ, ನನ್ನ ನಂಬರ್ ಹಲವರ ಬಳಿ ಇದೆ ಆದರೆ ಮೆಸೇಜ್ ಮಾಡಿ ಏನಾಗಿದೆ ಎಂದು ವಿಚಾರಿಸಿದ್ದು ಧೋನಿ ಅವರು ಮಾತ್ರ, ಇನ್ಯಾರು ನನಗೆ ಮೆಸೇಜ್ ಮಾಡಿಲ್ಲ. ಅದು ನನ್ನ ಮತ್ತು ಧೋನಿ ಅವರ ನಡುವೆ ಇರುವ ಬಾಂಧವ್ಯ ಎಂದು ಹೇಳಿದ್ದಾರೆ. ಕೋಹ್ಲಿ ಅವರ ಈ ಹೇಳಿಕೆ ಬಗ್ಗೆ ಕೆಲವರು ಸಂತೋಷ ವ್ಯಕ್ತಪಡಿಸಿದರೆ ಇನ್ನು ಕೆಲವರು, ಈ ಸಮಯದಲ್ಲಿ ಈ ರೀತಿ ಹೇಳಿ, ಇನ್ಯಾರು ಮೆಸೇಜ್ ಮಾಡಿಲ್ಲ ಎಂದು ಹೇಳಿ ಬೇರೆಯವರ ಮೇಲೆ ತಪ್ಪಾದ ಭಾವನೆ ಬರುವ ಹಾಗೆ ಹೊಸ ವಿವಾದ ಬೇಕಾ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ..

Leave A Reply

Your email address will not be published.