ನಮ್ಮ ಮುಖ್ಯ ಉದ್ದೇಶ ನಿಸ್ಸಂಶಯವಾಗಿ ವಿಶ್ವಕಪ್. ಸೋಲಿನ ನಂತರ ಶ್ರೇಯಸ್ ಅಯ್ಯರ್ ದೊಡ್ಡ ಹೇಳಿಕೆ.

207

ಅಕ್ಟೋಬರ್ ಹಾಗು ನವೆಂಬರ್ ತಿಂಗಳುಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ-೨೦ ವಿಶ್ವಕಪ್ ಗೆ ಎಲ್ಲ ತಂಡಗಳು ಸಿದ್ಧತೆ ನಡೆಸುತ್ತಿವೆ. ಈಗಾಗಲೇ ಹಲವು ತಂಡಗಳು ವಿಶ್ವಕಪ್ ಗೆ ತಯಾರಿ ಎನ್ನುವಂತೆಯೇ ದ್ವಿಪಕ್ಷೀಯ ಕ್ರಿಕೆಟ್ ನಡೆಸುತ್ತಿದೆ. ಭಾರತ ಕೂಡ ದಕ್ಷಿಣ ಆಫ್ರಿಕಾ ಜೊತೆ ಸರಣಿ ಆಡುತ್ತಿದೆ. ಉಭಯ ದೇಶಗಳ ನಡುವೆ ೫ ಪಂದ್ಯಗಳ ಟಿ-೨೦ ಸರಣಿ ನಡೆಯುತ್ತಿದೆ. ನಿನ್ನೆ ಅಂದ್ರೆ ಭಾನುವಾರ ಭಾರತ ತಂಡ ದಕ್ಷಿಣ ಆಫ್ರಿಕಾ ಎದುರು ೪ ವಿಕೆಟ್ ಗಳ ಸೋಲನ್ನು ಅನುಭವಿಸಿದೆ. ಸತತ ಎರಡು ಪಂದ್ಯಗಳನ್ನು ಸೋತ ಭಾರತ ಆತಿಥೇಯ ವಿರುದ್ಧ ೨-೦ ಪಂದ್ಯಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

ಭಾರತ ತಂಡದ ಮಾಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಶ್ರೇಯಸ್ ಅಯ್ಯರ್ ಭಾರತ ತಂಡದ ಬ್ಯಾಟ್ಸಮನ್ ಗಳ ಪ್ರಮುಖ ತಂತ್ರಗಳ ಬಗ್ಗೆ ಹೇಳಿದ್ದಾರೆ. ತಂಡದ ಗಮನ ವಿಶ್ವಕಪ್ ಮೇಲಿದೆ. ಆಟಗಾರರ ಉದ್ದೇಶ ಕೂಡ ಅದೇ ಆಗಿದೆ. ಅದಕ್ಕೆ ಎಲ್ಲರು ತಯಾರಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ. ನಾವು ಇದೀಗ ಸಂಪೂರ್ಣ ಸ್ವತಂತ್ರ ಮನಸ್ಥಿತಿಯವರಾಗಿದ್ದೇವೆ. ಅದರಿಂದ ಬೇರೆ ಯಾವುದರ ಬಗೆಯು ಯೋಚಿಸುತ್ತಿಲ್ಲ. ಅದು ನಿಜವಾದ ಆಟಗಳಾಗಿವೆ. ಈಗಿನ ಪಂದ್ಯಗಳಲ್ಲಿ ನಮ್ಮ ಕೊರತೆ ಬಗ್ಗೆ ನಾವು ಪ್ರತಿ ಪಂದ್ಯದ ನಂತರ ಚರ್ಚಿಸುತ್ತೇವೆ. ನಂತರ ಅಭ್ಯಾಸ ಮಾಡುತ್ತೇವೆ. ನಾವು ಮಾಡಿರುವ ಪ್ಲಾನ್ ಗಳನ್ನೂ ಕಾರ್ಯರೂಪಕ್ಕೆ ತರಲೇಬೇಕು. ಸೋತರು ಅದರಿಂದ ಪಾಠ ಕಲಿತು ನಾವು ಮುನ್ನಡೆಯುತ್ತೇವೆ ಇದರಿಂದ ತಂಡ ಕೂಡ ಮುನ್ನಡೆಯುತ್ತದೆ.

ವಿಕೆಟ್ ಕಳೆದುಕೊಳ್ಳುತ್ತಿರುವ ಬಗ್ಗೆ ಮಾತಾಡಿದ ಶ್ರೇಯಸ್ ಅಯ್ಯರ್, ನಮಗೆ ಮುಕ್ತವಾಗಿ ಆಡಲು ಅವಕಾಶ ನೀಡಿದೆ ತಂಡ ಹಾಗು ಆಡಳಿತ ಮಂಡಳಿ. ಅವಕಾಶ ನೀಡಿದೆ. ನಾವು ಏನೇ ಆದರೂ ಮುಂದುವರೆಯುತ್ತ ಹೋಗುತ್ತೇವೆ. ವಿಕೆಟ್ ಕಳೆದುಕೊಂಡರು ಕೂಡ ಅದು ನಮ್ಮ ಯೋಜನೆಯ ಒಂದು ಭಾಗವೇ ಆಗಿದೆ. ಮುಂದೆ ಕೂಡ ಇದೆ ಯೋಜನೆ ಮೂಲಕ ಮುಂದುವೆರೆಯುತ್ತೇವೆ. ಉತ್ತಮ ಆತ್ಮವಿಶ್ವಾಸದೊಂದಿಗೆ ಮುಂದಿನ ಪಂದ್ಯದಲ್ಲಿ ಆಡಲು ನಮಗೆ ಸಹಾಯವಾಗುತ್ತದೆ. ನಮ್ಮನ್ನು ನಾವು ಸಮರ್ಥನೆ ಮಾಡಿ ಕೊಳ್ಳುತ್ತೇವೆ ಹಾಗೇನೇ ನಮ್ಮ ಅಭ್ಯಾಸಗಳನ್ನು ಕೂಡ.

ನಿನ್ನೆಯ ಪಂದ್ಯದಲ್ಲಿ ಕಠಿಣ ಪಿಚ್ ಅಲ್ಲಿ ಭಾರತೀಯ ಬ್ಯಾಟ್ಸಮನ್ ಗಳು ರನ್ ಗಳಿಸಲು ಪರದಾಡಿದರು. ೬ ವಿಕೆಟ್ ಗೆ ೧೪೮ ರನ್ ಮಾಡಿತು. ಇದು ಉತ್ತಮ ರನ್ ಕೂಡ ಆಗಿರಲಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಶ್ರೇಯಸ್ ಅಯ್ಯರ್, ನಾವು ಈ ಪಿಚ್ ಅಲ್ಲಿ ೧೧-೧೫ ಓವರ್ ತನಕ ವಿಕೆಟ್ ಕಳೆದು ಕೊಳ್ಳದೆ ಆಟವಾಡಿದರಷ್ಟೇ ನಾವು ಏನಾದರು ದೊಡ್ಡ ರನ್ ಗಳಿಸಲು ಸಾಧ್ಯವಾಗುತ್ತಿತ್ತು. ಹಾಗೇನೇ ನನ್ನ ಪ್ರಕಾರ ೧೬೦ ರನ್ ಗಳಿಸಿದ್ದರು ಕೂಡ ಅದೊಂದು ಉತ್ತಮ ರನ್ ಗಳಿಕೆ ಆಗಿರುತ್ತಿತ್ತು. ಈ ಸ್ಕೋರ್ ಎದುರಾಳಿ ತಂಡಕ್ಕೂ ಸ್ವಲ್ಪ ಪ್ರೆಷರ್ ನೀಡುತಿತ್ತು. ಎಂದು ಶ್ರೇಯಸ್ ಅಯ್ಯರ್ ಹೇಳಿದ್ದಾರೆ. ನಿನ್ನೆಯ ಪಂದ್ಯದ ಬಗ್ಗೆ ನಿಮ್ಮ ಅಭಿಪ್ರಾಯ ಏನು ತಿಳಿಸಿ.

Leave A Reply

Your email address will not be published.