ನಾವು ಆಟಗಾರನ ಬಗ್ಗೆ ಆರಂಭದಲ್ಲಿ ಸಾಕಷ್ಟು ಹೊಗಳುತ್ತೇವೆ. ಒಂದು ವರ್ಷದ ನಂತರ ಆಟಗಾರನೇ ಮಾಯಾ ಆಗಿ ಬಿಡುತ್ತಾನೆ. ಉಮ್ರಾನ್ ಮಲಿಕ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಕಪಿಲ್ ದೇವ್.

221

ಭಾರತದ ಯುವ ವೇಗದ ಬೌಲರ್ ಉಮ್ರಾನ್ ಮಲಿಕ್ ಇಂದಿನ ಸಮಯದಲ್ಲಿ ಸಾಕಷ್ಟು ಚರ್ಚೆಯಲ್ಲಿ ಇದ್ದಾರೆ. ಐಪಿಎಲ್ ೨೦೨೨ ರಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಅತ್ಯಂತ ಉತ್ತಮವಾಗಿ ಬೌಲಿಂಗ್ ಮಾಡಿದ ಯುವ ವೇಗಿ ಉಮ್ರಾನ್ ಮಲಿಕ್ ನಂತರ ಇದೀಗ ಭಾರತ ತಂಡಕ್ಕೂ ಆಯ್ಕೆ ಆಗಿದ್ದಾರೆ. ತಮ್ಮ ವೇಗದ ಬಾಲ್ ಮಾತ್ರವಲ್ಲದೆ ನಿಖರವಾದ ಲೈನ್ ಹಾಗು ಲೆಂಥ್ ಇಂದ ಬ್ಯಾಟ್ಸಮನ್ ಗಳನ್ನೂ ಬೆರಗುಗೊಳಿಸಿದ್ದು ಮಾತ್ರ ಸುಳಲ್ಲ. ಉಮ್ರಾನ್ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಅಲ್ಲಿ ಆಡಿದ 14 ಪಂದ್ಯಗಳಲ್ಲಿ 22 ವಿಕೆಟ್ ಪಡೆದು ಮಿಂಚಿದ್ದಾರೆ. ಇವರ ಬಾಲ್ ವೇಗ 157 ಕಿಮಿ ದಲ್ಲಿಇತ್ತು.

ಭಾರತ ತಂಡದ ಆಯ್ಕೆ ಸಮಿತಿ ಉಮ್ರಾನ್ ಅವರಿಂದ ಪ್ರಭಾವಿತರಾಗಿ ಅಂತಾರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ಎದುರಿನ 5 ಟಿ-20 ಸರಣಿಗೆ ಉಮ್ರಾನ್ ಮಲಿಕ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಇವರು ಮೊದಲ ಪಂದ್ಯದ ಪ್ಲೇಯಿಂಗ್ 11 ಅಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. ಮೊದಲ ಪಂದ್ಯದಲ್ಲಿ 200 ಕ್ಕೂ ಅಧಿಕ ರನ್ ಗಳಿಸಿ ಕೂಡ ಭಾರತ ಸೋತಿದ್ದು ನೋಡಿದರೆ ಮುಂದಿನ ಪಂದ್ಯಕ್ಕೆ ಉಮ್ರಾನ್ ಮಲಿಕ್ ಆಯ್ಕೆ ಆಗಬಹುದು ಎನ್ನುವ ಸುದ್ದಿ ಹರಿದಾಡುತ್ತಿದೆ. ಇವರು ಅಂತಾರಾಷ್ಟ್ರೀಯ ಪಂದ್ಯಕ್ಕೆ ಚೊಚ್ಚಲ ಪದಾರ್ಪಣೆಗೂ ಮುನ್ನ ಕಪಿಲ್ ದೇವ್ ಹೇಳಿಕೆ ನೀಡಿದ್ದಾರೆ.

ಉಮ್ರಾನ್ ಮಲಿಕ್ ರೀತಿಯೇ ಕಪಿಲ್ ದೇವ್ ಕೂಡ ಅವರ ವೇಗದ ಬೌಲಿಂಗ್ ಗೆ ಹೆಸರುವಾಸಿ ಆದವರು. ಉಮ್ರಾನ್ ಮಲಿಕ್ ವೇಗದ ಬೌಲಿಂಗ್ ಜೊತೆಗೆ ರನ್ ಕೊಡುವಲ್ಲಿ ಕಡಿವಾಣ ಹಾಕಿದರೆ ಸೂಕ್ತ ಎನ್ನುವುದು ಕಪಿಲ್ ದೇವ್ ಅವರ ಅಭಿಪ್ರಾಯ. ಉಮ್ರಾನ್ ಆಯ್ಕೆ ನನಗೆ ಸಂತೋಷ ಆಗಿದೆ, ಆದರೆ ಇವರನ್ನು ತಂಡಕ್ಕೆ ಈಗಲೇ ಸೇರಿಸಿದ್ದು ತಪ್ಪು ಎಂದು ಹೇಳಿದ್ದಾರೆ. ಯಾವುದೇ ಆಟಗಾರನಿಗೆ ಆಗಲಿ ಈ ಮಟ್ಟದಲ್ಲಿ ಆಡಲು ೨-೩ ವರ್ಷ ಸಮಯ ನೀಡಬೇಕು. ಆಗ ನೀವು ಆ ಆಟಗಾರನ ಮೌಲ್ಯಮಾಪನ ಮಾಡಬಹುದು. ನಾವು ಆರಂಭದಲ್ಲಿ ಆಟಗಾರನನ್ನು ಬಹಳ ಹೊಗಳುತ್ತವೆ, ಒಂದು ವರ್ಷದ ನಂತರ ಆಟಗಾರನೇ ಮರೆಯಾಗುತ್ತಾನೆ.

ಉಮ್ರಾನ್ ಪ್ರತಿಭೆಯಲ್ಲಿ ಕೊರತೆಯಿಲ್ಲ, ಉಮ್ರಾನ್ ತನ್ನ ಉತ್ತಮ ವಾತಾವರಣದಲ್ಲಿ ಇದೂ ತನ್ನ ಪರಿಶ್ರಮವನ್ನು ಮುಂದುವರೆಸಬೇಕೆಂದು ನಾನು ಬಯಸುತ್ತೇನೆ. ಅವನ ಬೌಲಿಂಗ್ ನೋಡಿದರೆ ಆತನಿಗೆ ಯಾವುದೇ ಕೊರತೆಯಿಲ್ಲ ಎಂದು ಕಾಣುತ್ತದೆ. ಉತ್ತಮ ಬೌಲರ್ ಗಳ ಜೊತೆ ಸಮಯ ಕಳೆಯಬೇಕು, ಅವರ ವಿಡಿಯೋ ಗಳನ್ನೂ ನೋಡಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಾಗೇನೇ ಗಂಟೆಗೆ 150 ಕಿಮಿ ವೇಗದಲ್ಲಿ ಬೌಲಿಂಗ್ ಮಾಡುತ್ತಿದ್ದರೆ ಉತ್ತಮ ಆದರೆ ಎಕಾನಮಿ ೯ ರ ಮೇಲೆ ಇದ್ದಾರೆ ಅದು ಉತ್ತಮವಲ್ಲ ಎಂದು ಹೇಳಿದ್ದಾರೆ. ಪ್ರತಿ ಓವರ್ ಗೆ ಕೇವಲ ೬-೭ ರನ್ ಇದ್ದರೆ ಉತ್ತಮ ಇದನ್ನು ಉಮ್ರಾನ್ ಮೊದಲು ಸರಿಪಡಿಸಿಕೊಳ್ಳಬೇಕು. ಇದಕ್ಕಾಗಿ ಯೋರ್ಕರ್ ಹೆಚ್ಚಾಗಿ ಬಳಸಬೇಕು. ಬ್ಯಾಟ್ಸಮನ್ ಚಲನ ವಲನಗಳನ್ನು ಕೂಡ ಗಮನಿಸಬೇಕು. ಈ ಎಲ್ಲ ವಿಷಯಗಳು ಸಮಯ ಹೋದಂತೆ ಗೊತ್ತಾಗುತ್ತದೆ ಎಂದು ಕಪಿಲ್ ದೇವ್ ಹೇಳಿದ್ದಾರೆ.

Leave A Reply

Your email address will not be published.