ನಾವು ವಾಸ್ತವಿಕವಾಗಿ ಯೋಚನೆ ಮಾಡಬೇಕು ಎಂದ ಕೋಚ್ ರಾಹುಲ್ ದ್ರಾವಿಡ್. ಈ ಆಟಗಾರನನ್ನು ತಂಡದಲ್ಲಿ ಸೇರಿಸಿಕೊಳ್ಳುವುದು ಅನುಮಾನ.

222

ರಾಹುಲ್ ದ್ರಾವಿಡ್ ಭಾರತದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಇವರನ್ನು ವಾಲ್ ಅಂದರೆ ಗೋಡೆ ಎಂದೇ ಕರೆಯುತ್ತಾರೆ. ಟೆಸ್ಟ್ ಕ್ರಿಕೆಟ್ ಅಲ್ಲಿ ಉತ್ತಮ ತಾಳ್ಮೆ ಇಂದ ಆಟ ಆಡುವ ವ್ಯಕ್ತಿ. ಇವರು ನಿವೃತ್ತಿ ನಂತರ ತರಬೇತುಗಾರರಾಗಿ ಭಾರತ ತಂಡಕ್ಕೆ ಸೇರಬೇಕು ಎನ್ನುವುದು ಹಲವರ ಇಚ್ಛೆ ಆಗಿತ್ತು. ಇದಕ್ಕೆ ಕಾರಣ ಅವರು ತರಬೇತು ನೀಡಿದ ಅಂಡರ್ ೧೯ ಆಟಗಾರರ ಪ್ರದರ್ಶನ. ನಂತರ ರವಿ ಶಾಸ್ತ್ರೀ ಅವರ ನಂತರ ರಾಹುಲ್ ದ್ರಾವಿಡ್ ಅವರು ಭಾರತ ತಂಡದ ಕೋಚ್ ಆಗಿ ನೇಮಕ ಗೊಂಡರು. ಇವರು ನೇಮಕಗೊಂಡ ಕೂಡಲೇ ವಿರಾಟ್ ಕೊಹ್ಲಿ ನಾಯಕತ್ವ ಬಿಟ್ಟರು.

ದ್ರಾವಿಡ್ ಗೆ ಪ್ರಾರಂಭದಲ್ಲೇ ದೊಡ್ಡ ಸಮಸ್ಯೆ ಎದುರಾದದ್ದು ನಿಜ. ಆದರೆ ರೋಹಿತ್ ಶರ್ಮ ಅವರ ಜೊತೆ ಬೆರೆತು ಪಂದ್ಯಗಳನ್ನು ಗೆಲ್ಲುವಲ್ಲಿ ಸಫಲರಾದರು. ಇದೀಗ ಮುಂಬರುವ ದಕ್ಷಿಣ ಆಫ್ರಿಕಾ ಜೊತೆಗಿನ 5 ಪಂದ್ಯಗಳ ಟಿ-20 ಸರಣಿ ನಾಳೆಯಿಂದ ನಡೆಯಲಿದೆ. ಇದಕ್ಕೆ ದ್ರಾವಿಡ್ ಅವರು ತಯಾರಾಗುತ್ತಿದ್ದಾರೆ. ಇವರಿಗೆ ಇಲ್ಲಿ ಕಾಣಿಸಿಕೊಂಡ ಸಮಸ್ಯೆ ಎಂದರೆ, ಎಲ್ಲ ಆಟಗಾರರು ಯುವಕರು. ಹಲವು ಹೊಸಮುಖಗಳು. ಈ ತಂಡ ರಚಿಸುವುದೇ ದೊಡ್ಡ ಚಿಂತೆ ಆಗಿ ಬಿಟ್ಟಿದೆ ದ್ರಾವಿಡ್ ಅವರಿಗೆ. ಇದಕ್ಕೆ ಸರಿಯಾಗಿ ಕೆ ಎಲ್ ರಾಹುಲ್ ಕೂಡ ಗಾಯಾಳುವಾಗಿ ಸರಣಿಯಿಂದಲೇ ಹೊರಗೆ ನಡೆದಿದ್ದಾರೆ. ಅದೇ ರೀತಿ ಸ್ಪಿನ್ ವಿಭಾಗದಲ್ಲಿ ಕುಲದೀಪ್ ಯಾದವ್ ಕೂಡ ಗಾಯದ ಸಮಸ್ಯೆ ಇಂದ ಹೊರಗೆ ಉಳಿದಿದ್ದಾರೆ.

ಇನ್ನು ಅನೇಕ ದಿನದಿಂದ ಕೇಳಿ ಬರುತ್ತಿರುವ ಹೆಸರು ಎಂದರೆ ಉಮ್ರಾನ್ ಮಲಿಕ್. ತನ್ನ ವೇಗದ ಬೌಲಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಮಲಿಕ್ ಅವರನ್ನು ಎಲ್ಲರ ಒತ್ತಾಯದ ಮೇಲೆ ಹಾಗೇನೇ ಅವರ ಪ್ರದರ್ಶನ ನೋಡಿ ದಕ್ಷಿಣ ಆಫ್ರಿಕಾ ಸರಣಿಗೆ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿದೆ. ಅದಲ್ಲದೆ ಇದೀಗ ಇವರನ್ನು ಪ್ಲೇಯಿಂಗ್ 11 ಅಲ್ಲೂ ಸೇರಿಸಿಕೊಳ್ಳಬೇಕೆಂದು ಅನೇಕರು ಹಿರಿಯ ಆಟಗಾರರು ಒತ್ತಾಯ ಮಾಡುತ್ತಿದ್ದರು. ಇದೀಗ ರಾಹುಲ್ ದ್ರಾವಿಡ್ ಅದಕ್ಕೆಲ್ಲ ತೆರೆ ಎಳೆದಿದ್ದಾರೆ. ಉಮ್ರಾನ್ ಮಲಿಕ್ ಬೇಗೆ ದ್ರಾವಿಡ್ ಹೇಳಿದ ಅಭಿಪ್ರಾಯ ಇದೀಗ ಸಂಚಲನ ಮೂಡಿಸುತ್ತಿದೆ.

ಮಲಿಕ್ ಅವರ ನೆಟ್ ಅಭ್ಯಾಸದ ವೇಳೆ 163 KMPH ವೇಗದಲ್ಲಿ ಬೌಲಿಂಗ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಇದನ್ನು ನೋಡಿದ ರಾಹುಲ್ ದ್ರಾವಿಡ್ ಉಮ್ರಾನ್ ಮಲಿಕ್ ಇನ್ನು ಯುವಕ, ಇನ್ನು ಕಲಿಯುತ್ತಿದ್ದಾರೆ. ದಿನದಿಂದ ದಿನಕ್ಕೆ ಉತ್ತಮವಾಗಿ ಬೆಳೆಯುತ್ತಿದ್ದಾರೆ. ಅಲ್ಲದೆ ಇವರ ಪ್ರದರ್ಶನ ಕೂಡ ಉತ್ತಮವಾಗಿ ಬೆಳೆಯುತ್ತಿದೆ. ಹೆಚ್ಚು ಪಂದ್ಯ ಆಡಿದಷ್ಟು ಹೆಚ್ಚು ಬೆಳೆಯುತ್ತಾರೆ ಎಂದು ದ್ರಾವಿಡ್ ಹೇಳಿದ್ದಾರೆ. ಅದರ ಜೊತೆಗೇನೆ ಮಲಿಕ್ ಅಂತಹ ಆಟಗಾರ ತಂಡದಲ್ಲಿ ಆಯ್ಕೆ ಆಗಿದ್ದು ಸಂತೋಷವಾಗಿದೆ. ಅದೇ ರೀತಿ ನಾವು ವಾಸ್ತವಿಕವಾಗಿಯೂ ಯೋಚನೆ ಮಾಡಬೇಕಾಗುತ್ತದೆ.

ಈಗಾಗಲೇ ತಂಡ ದೊಡ್ಡದಾಗಿದೆ. ಎಲ್ಲರಿಗು ಪ್ಲೇಯಿಂಗ್ 11 ಅಲ್ಲಿ ಸ್ಥಾನ ಕೊಡುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ನಾನು ಆಟಗಾರರ ಸ್ಥಿರತೆ ಮೇಲೆ ಹೆಚ್ಚು ಗಮನ ಕೊಡುತ್ತೇನೆ. ಅದು ಆಗಬೇಕೆಂದರೆ ಆಟಗಾರರಿಗೆ ಹೆಚ್ಚಿನ ಪಂದ್ಯದಲ್ಲಿ ಆಡಲು ಅವಕಾಶ ಕೊಡಬೇಕು. ಹಾಗೇನೇ ಈಗಾಗಲೇ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಹಾಗು ಆವೇಶ ಖಾನ್ ಈಗಾಗಲೇ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾಳಿನ ಪಂದ್ಯಕ್ಕೆ ಇವರೇ ಮೂವರು ಆಯ್ಕೆ ಆಗುವ ಸಾಧ್ಯತೆ ಕೂಡ ಇದೆ ಎನ್ನುವುದು ರಾಹುಲ್ ಅವರ ಮಾತಿನಿಂದ ಗೊತ್ತಾಗುತ್ತದೆ.

Leave A Reply

Your email address will not be published.