ನಿಜಕ್ಕೂ ಭಾರತ ತಂಡ ವಿಶ್ವಕಪ್ ಗೆಲ್ಲಲು ಸಾಧ್ಯವೇ?? ರೋಹಿತ್ ಟೆನ್ಶನ್ ಹೆಚ್ಚಿಸಿರುವ ಆಟಗಾರರು ಯಾರ್ಯಾರು ಗೊತ್ತೇ??

143

ಸರಿಯಾಗಿ ಇನ್ನೊಂದು ತಿಂಗಳಿಗೆ ವಿಶ್ವಕಪ್ ಪಂದ್ಯಗಳು ಶುರುವಾಗಲಿದೆ. ಟಿ20 ವಿಶ್ವಕಪ್ ಶುರುವಾದ ಮೊದಲ ವರ್ಷ 2007ರಲ್ಲಿ ಭಾರತ ತಂಡ ವಿಶ್ವಕಪ್ ಗೆದ್ದಿತು, ಅದಾದ ಬಳಿಕ 2014ರಲ್ಲಿ ಫೈನಲ್ಸ್ ತಲುಪಿತ್ತು, 2016ರಲ್ಲಿ ಸೆಮಿಫೈನಲ್ಸ್ ವರೆಗೂ ತಲುಪಿತ್ತು. ಮೊದಲ ಸೀಸನ್ ಬಳಿಕ ಭಾರತ ತಂಡವು ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಹಾಗಾಗಿ ಈ ವರ್ಷ ಏನೇ ಆದರೂ ವಿಶ್ವಕಪ್ ಗೆಲ್ಲಲೇಬೇಕು ಎಂದು ಪಣತೊಟ್ಟು ವಿಶ್ವಕಪ್ ಗೆ ತಂಡದ ಆಯ್ಕೆ ಮಾಡಲಾಗಿದೆ. 15 ಪ್ಲೇಯರ್ ಗಳ ತಂಡ 4 ಸ್ಟ್ಯಾಂಡ್ ಬೈ ಆಟಗಾರರನ್ನು ಸೆಲೆಕ್ಟ್ ಮಾಡಲಾಗಿದೆ.

ಭಾರತ ತಂಡ ಅಂದುಕೊಂಡಷ್ಟು ಬಲಿಷ್ಟವಾಗಿ ತಂಡ ಇಲ್ಲ. ಒಂದು ಮಟ್ಟಕ್ಕೆ ಬ್ಯಾಟಿಂಗ್ ನಲ್ಲಿ ಸಮಸ್ಯೆ ಇಲ್ಲ ಎಂದುಕೊಂಡರೆ, ಬೌಲಿಂಗ್ ನಲ್ಲಿ ಅಂದುಕೊಂಡ ಮಟ್ಟಿಗೆ ಆಟಗಾರರು ಇಲ್ಲ ಎಂದು ಹೇಳಬೇಕು, ಆಸ್ಟ್ರೇಲಿಯಾ ಪಿಚ್ ಗೆ, ಹಿಟ್ ದಿ ಡೆಕ್ ರೀತಿಯಲ್ಲಿ ಬೌಲಿಂಗ್ ಮಾಡುವ ಆಟಗಾರರು ಭಾರತ ತಂಡಕ್ಕೆ ಬೇಕಾಗುತ್ತಾರೆ.ಹಿಟ್ ದಿ ಡೆಕ್ ಎಂದರೆ ಬಹಳ ಎತ್ತರದಿಂದ ಬೌಲಿಂಗ್ ಮಾಡುವುದು ಹಾಗೂ ಪಿಚ್ ಇಂದ ಬೌನ್ಸ್ ಮಾಡುವುದು, ಪ್ರಸ್ತುತ ಇರುವ ತಂಡದಲ್ಲಿ ಈ ರೀತಿ ಬೌಲಿಂಗ್ ಮಾಡುವುದು ಜಸ್ಪ್ರೀತ್ ಬುಮ್ರ ಅವರು ಮಾತ್ರ. ಭುವನೇಶ್ವರ್ ಕುಮಾರ್ ಹಾಗೂ ಹರ್ಷಲ್ ಪಟೇಲ್ 130ಕಿಮೀ ವೇಗದಲ್ಲಿ ಬೌಲಿಂಗ್ ಮಾಡುತ್ತಾರೆ.

ಯುವ ಆಟಗಾರ ಅರ್ಷದೀಪ್ ಸಿಂಗ್ ಅವರು ಮಧ್ಯಮ ಓವರ್ ಗಳಿಗಿಂತ ಹೆಚ್ಚಾಗಿ, ಡೆತ್ ಓವರ್ ಗಳಲ್ಲಿ ಒಳ್ಳೆಯ ಪ್ರದರ್ಶನ ನೀಡುತ್ತಾರೆ. ಪ್ರಸ್ತುತ ಭಾರತ ತಂಡದಲ್ಲಿ ಹಿಟ್ ದಿ ಡೆಕ್ ಬೌಲಿಂಗ್ ಮಾಡುವ ಸಾಮರ್ಥ್ಯ ಇರುವುದು ಮೊಹಮ್ಮದ್ ಶಮಿ ಅವರಿಗೆ, ಆದರೆ ಅವರು ಮೀಸಲು ಆಟಗಾರನ ಪೆಟ್ಟಿಯಲ್ಲಿದ್ದಾರೆ. ಇನ್ನು ಆಲ್ ರೌಂಡರ್ ಆಗಿ ಆಕ್ರಮಣಕಾರಿ ಬೌಲಿಂಗ್ ಮಾಡಲು ಹಾರ್ದಿಕ್ ಪಾಂಡ್ಯ ಇದ್ದಾರೆ. ಈ ಒಂದು ವಿಚಾರ ಟಿ20 ವಿಶ್ವಕಪ್ ಶುರುವಾದ ಬಳಿಕ ಭಾರತ ತಂಡಕ್ಕೆ ಸಮಸ್ಯೆ ಆಗಿ ಪರಿಣಮಿಸಬಹುದು

Leave A Reply

Your email address will not be published.