ಪಂದ್ಯ ಗೆದ್ದಿರಬಹುದು, ಆದರೆ ಈತನೊಬ್ಬ ಹೊರ ಹೋದರೆ ಭಾರತಕ್ಕೆ ಮತ್ತಷ್ಟು ಗೆಲ್ಲಲಿದೆ ಎಂದ ಪಂಡಿತರು. ಮುಂದಿನ ಪಂದ್ಯಕ್ಕೆ ಯಾರು ಹೊರಹೋಗಬೇಕಂತೆ ಗೊತ್ತೇ??

91

ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡದ ಟಿ20 ಸರಣಿ ಪಂದ್ಯಗಳು ನಡೆಯುತ್ತಿದೆ, ಎರಡು ಪಂದ್ಯಗಳು ಮುಗಿದಿದ್ದು, ಮೊದಲ ಪಂದ್ಯದಲ್ಲಿ ಭಾರತ ತಂಡ ಹೀನಾಯ ಸೋಲು ಕಂಡಿತು, ಬೌಲಿಂಗ್ ವೈಫಲ್ಯದಿಂದ ದೊಡ್ಡ ಸ್ಕೋರ್ ನೀಡಿದ್ದರು ಸಹ, ಡಿಫೆಂಡ್ ಮಾಡಿಕೊಳ್ಳಲಾಗಲಿಲ್ಲ. ಇನ್ನು ನಿನ್ನೆ ನಡೆದ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಉತ್ತಮ ಬ್ಯಾಟಿಂಗ್ ಹಾಗೂ ಪಂದ್ಯದ ಕೊನೆಯಲ್ಲಿ ದಿನೇಶ್ ಕಾರ್ತಿಕ್ ಅವರ ಅಬ್ಬರದಿಂದ ಪಂದ್ಯ ಗೆಲ್ಲುವ ಹಾಗೆ ಆಯಿತು. ಭಾರತ ತಂಡ ಒಂದು ಪಂದ್ಯ ಗೆದ್ದಿದ್ದರು ಸಹ, ತಂಡದಲ್ಲಿ ಆ ಒಬ್ಬ ಆಟಗಾರ ಇರುವುದು ಬೇಡ ಎನ್ನುವ ಕೂಗು ಕೇಳಿಬರುತ್ತಿದೆ.

ಆ ಆಟಗಾರ ಮತ್ಯಾರು ಅಲ್ಲ, ಭಾರತ ತಂಡದ ಅತ್ಯದ್ಭುತ ಸ್ಟಾರ್ ಪ್ಲೇಯರ್ ಎನ್ನಿಸಿಕೊಂಡಿರುವ ಹರ್ಷಲ್ ಪಟೇಲ್ ಅವರು. ಹರ್ಷಲ್ ಪಟೇಲ್ ಅವರು ಬಾಲ್ ಮೇಲೆ ಒಳ್ಳೆಯ ಹಿಡಿತ ಹೊಂದಿದವರು, ಇವರ ನಿಧಾನಗತಿಯ ಬೌಲಿಂಗ್ ವಿಕೆಟ್ಸ್ ಪಡೆಯುವಲ್ಲಿ ಬಹಳ ಸಹಾಯಕವಾಗಿತ್ತು. ಮಧ್ಯಮ ಓವರ್ ಗಳು ಹಾಗೂ ಡೆತ್ ಓವರ್ ಗಳಲ್ಲಿ ಒಳ್ಳೆಯ ಬೌಲಿಂಗ್ ಮಾಡುತ್ತಿದ್ದರು. ಆರ್.ಸಿ.ಬಿ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ ಹರ್ಷಲ್ ಪಟೇಲ್ ನ್ಯಾಷನಲ್ ಟೀಮ್ ಗು ಸೆಲೆಕ್ಟ್ ಆದರು. ಭಾರತಕ್ಕಾಗಿಯೂ ಒಳ್ಳೆಯ ಪ್ರದರ್ಶನ ನೀಡಿರುವ ಹರ್ಷಲ್ ಅವರು, ಇಂಜುರಿ ಇಂದ ರಿಕವರ್ ಆಗಿ ಬಂದ ಬಳಿಕ ತಮ್ಮ ಫಾರ್ಮ್ ಕಳೆದುಕೊಂಡಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಪಂದ್ಯಕ್ಕೆ ಹರ್ಷಲ್ ಅವರು ರೀಎಂಟ್ರಿ ಕೊಟ್ಟಿದ್ದು, ಆಸ್ಟ್ರೇಲಿಯಾ ವಿರುದ್ಧದ ಎರಡು ಮ್ಯಾಚ್ ಗಳಲ್ಲು ಹರ್ಷಲ್ ಅವರು ದುಬಾರಿ ಬೌಲರ್ ಆಗಿದ್ದಾರೆ, ಮೊದಲ ಪಂದ್ಯದಲ್ಲಿ ಹರ್ಷಲ್ ಅವರು 4 ಓವರ್ ಗಳಲ್ಲಿ ಬರೋಬ್ಬರಿ 49 ರನ್ ಬಿಟ್ಟುಕೊಟ್ಟರು, ಎರಡನೇ ಪಂದ್ಯದಲ್ಲಿ 2 ಓವರ್ ಗಳಲ್ಲಿ 32 ರನ್ ಗಳನ್ನು ಬಿಟ್ಟುಕೊಟ್ಟರು. ಹರ್ಷಲ್ ಪಟೇಲ್ ಅವರ ಪರ್ಫಾರ್ಮೆನ್ಸ್ ಈ ರೀತಿ ಆಗಿರುವುದರಿಂದ ಹರ್ಷಲ್ ಪಟೇಲ್ ಅವರನ್ನು ತಂಡದಿಂದ ಕೈಬಿಡುವುದು ಒಳ್ಳೆಯದು ಎಂದು ಅಭಿಪ್ರಾಯ ವ್ಯಕ್ತವಾಗುತ್ತಿದೆ. ವಿಶ್ವಕಪ್ ತಂಡದಿಂದ ಹರ್ಷಲ್ ಅವರನ್ನು ಕೈಬಿಟ್ಟು, ಅವರ ಬದಲಾಗಿ ಮೊಹಮ್ಮದ್ ಶಮಿ ಅವರಿಗೆ ಅವಕಾಶ ಕೊಡುವುದು ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Leave A Reply

Your email address will not be published.