ಪಂದ್ಯ ಸೋತ ಮೇಲೆ ಮತ್ತೆ ಮುನ್ನೆಲೆಗೆ ಬಂದ ಪಾಕ್ ಮಾಜಿ ನಾಯಕ ಇಂಜಮಾಮ್: ಉತ್ತಮವಾಗಿ ಆಡಿದ ಕೊಹ್ಲಿ ಬಗ್ಗೆ ಹೇಳಿದ್ದೇನು ಗೊತ್ತೇ??

116

ವಿರಾಟ್ ಕೋಹ್ಲಿ ಅವರು ಕಳೆದ ಕೆಲವು ಕಾಲದಿಂದ ಫಾರ್ಮ್ ಕಳೆದುಕೊಂಡು ವೈಫಲ್ಯ ಅನುಭವಿಸುತ್ತಿರುವ ವಿಚಾರ ನಮಗೆಲ್ಲ ಗೊತ್ತೇ ಇದೆ. ಇಂಗ್ಲೆಂಡ್ ಪಂದ್ಯಗಳಲ್ಲಿ ಹೀನಾಯವಾದ ಪ್ರದರ್ಶನ ನೀಡಿದ ಬಳಿಕ ಒಂದು ತಿಂಗಳ ವಿಶ್ರಾಂತಿ ಪಡೆದು ವಿರಾಟ್ ಅವರು ಏಷ್ಯಾಕಪ್ ಪಂದ್ಯಗಳಿಗೆ ಕಂಬ್ಯಾಕ್ ಮಾಡಿದ್ದಾರೆ. ಭಾನುವಾರ ನಡೆದ ಏಷ್ಯಾಕಪ್ ನಲ್ಲಿ ಭಾರತದ ಮೊದಲ ಪಂದ್ಯ, ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೋಹ್ಲಿ ಅವರು ಕಂಬ್ಯಾಕ್ ಮಾಡಿದ್ದಾರೆ. ಎರಡನೇ ಬಾಲ್ ನಲ್ಲಿಯೇ ಕೆ.ಎಲ್.ರಾಹುಲ್ ಅವರು ಔಟ್ ಆದ ಬಳಿಕ, 3ನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಬಂದ ಕೋಹ್ಲಿ ಅವರು 34 ಎಸೆತಗಳಲ್ಲಿ 35 ರನ್ ಗಳನ್ನು ಸಿಡಿಸಿ, ತಂಡವನ್ನು ಅಪಾಯದಿಂದ ಹೊರತಂದರು.

ಭಾನುವಾರದ ಪಂದ್ಯದಲ್ಲಿ ಎಲ್ಲರ ಕಣ್ಣು ವಿರಾಟ್ ಕೋಹ್ಲಿ ಅವರ ಮೇಲೆಯೇ ನೆಟ್ಟಿತ್ತು ಎಂದರೆ ತಪ್ಪಾಗುವುದಿಲ್ಲ. ವಿರಾಟ್ ಅವರು ಈಗ ಒಂದು ರೀತಿ ಫಾರ್ಮ್ ಗೆ ಮರಳಿ ಬಂದಿರುವ ಹಾಗೆಯೇ ಕಾಣಿಸುತ್ತಿದ್ದಾರೆ, ಪಂದ್ಯ ಮುಗಿದ ಬಳಿಕ ಪಾಕ್ ತಂಡದ ಮಾಜಿ ಖ್ಯಾತ ಆಟಗಾರ ಇನ್ಜಮಾಮ್ ಉಲ್ ಹಕ್ ವಿ ಅವರು ಆಸಕ್ತಿದಾಯಕ ಮಾತುಗಳನ್ನಾಡಿದ್ದಾರೆ, “ವಿರಾಟ್ ಕೋಹ್ಲಿ ಅವರಿಗೆ ಭಾನುವಾರದ ಪಂದ್ಯದಲ್ಲಿ ಬಹಳ ಒತ್ತಡ ಇತ್ತು. ಸಾಮಾನ್ಯವಾಗಿ ಸೆಟ್ಲ್ ಆಗಿರುವ ಬ್ಯಾಟ್ಸ್ಮನ್ ಅನ್ನು ಔಟ್ ಮಾಡುವುದು ಕಷ್ಟ, ಆದರೆ ವಿರಾಟ್ ಅವರು ಸೆಟ್ಲ್ ಆಗಿದ್ದರೂ ಸಹ, ಅವರಲ್ಲಿ ಪೂರ್ತಿಯಾದ ಆತ್ಮ ವಿಶ್ವಾಸ ಇರುವ ಹಾಗೆ ಕಾಣಲಿಲ್ಲ..” ಎಂದು ವಿರಾಟ್ ಅವರ ಬಗ್ಗೆ ಹೇಳಿದ್ದಾರೆ.

ಭಾರತದ ಮಧ್ಯಮ ಕ್ರಮಾಂಕದ ಬಗ್ಗೆ ಮಾತನಾಡಿ, “ಭಾರತದ ಮಧ್ಯಮ ಮತ್ತು ಕೆಳ ಮಧ್ಯಮ ಕ್ರಮಾಂಕದ ಆಟಗಾರರು ಅದ್ಭುತವಾದ ಪ್ರದರ್ಶನ ನೀಡುತ್ತಾರೆ, ಭಾರತ ತಂಡದ ವಿಶೇಷತೆ ಅದು. ಆದರೆ ರಿಷಬ್ ಪಂತ್ ಅವರಿಗೆ ಪ್ಲೇಯಿಂಗ್ 11 ನಲ್ಲಿ ಅವಕಾಶ ಕೊಡದೆ ಇದ್ದದ್ದು ಯಾಕೆ ಎಂದು ಅರ್ಥವಾಗಲಿಲ್ಳ. ಜಡೇಜಾ, ಪಾಂಡ್ಯ ಹಾಗೂ ಪಂತ್ ಮೂವರು ಅಪಾಯಕಾರಿ ಬ್ಯಾಟ್ಸ್ಮನ್ ಗಳು..” ಎಂದು ಹೇಳಿದ್ದಾರೆ ಇನ್ಜಮಾಮ್. ಹಾಗೂ ಪಾಕಿಸ್ತಾನ ತಂಡದ ಬಗ್ಗೆ ಕೂಡ ಮಾತನಾಡಿ, ತಮ್ಮ ತಂಡದ ಮಧ್ಯಮ ಕ್ರಮಾಂಕದ ಆಟಗಾರರ ಆಯ್ಕೆ ಚೆನ್ನಾಗಿಲ್ಲ, ಅದನ್ನು ಬದಲಿಸಬೇಕು, ಫಾಕರ್ ಜಮಾನ್ ವಿಕೆಟ್ ಉರುಳಿದ ಬಳಿಕ, ಇನ್ನೆಲ್ಲರು ಬೇಗ ಔಟ್ ಆಗುತ್ತಾರೆ ಎಂದು ಹೇಳಿದ್ದಾರೆ ಇನ್ಜಮಾಮ್.

Leave A Reply

Your email address will not be published.