ಪದೇ ಪದೇ ದುಬಾರಿಯಾಗುತ್ತಿರುವ ಹರ್ಷಲ್ ಬದಲಿಗೆ ಈ ಟಾಪ್ ಪ್ಲೇಯರ್ ಅನ್ನು ಆಯ್ಕೆ ಮಾಡಿದರೆ ಕಪ್ ನಮ್ದೇ. ಯಾರು ಗೊತ್ತೇ??

108

ದಿನದಿಂದ ದಿನಕ್ಕೆ ಬದಲಾಗುತ್ತಿರುವ ಟೀಮ್ ಇಂಡಿಯಾ ಆಟಗಾರರ ವರ್ಚಸ್ಸು ಇದೀಗ, ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಚಿಂತೆಯನ್ನು ದುಪ್ಪಟ್ಟು ಮಾಡುತ್ತಿದೆ. ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಮೊಹಮದ್ ಸಿರಾಜ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ತಮ್ಮ ಅದ್ಭುತ ಆಟದ ಮೂಲಕ ಅವರು ಇದೀಗ ಪ್ಲೇಯರ್ ಆಫ್ ಟೂರ್ನಮೆಂಟ್ ಆಗಿ ಹೊರಹೊಮ್ಮಿದ್ದಾರೆ. ಆದರೆ ಸಿರಾಜ್ ಅವರ ಈ ಅದ್ಭುತ ಪ್ರದರ್ಶನ ಸ್ವತ ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಚಿಂತೆಗೆ ಕಾರಣವಾಗಿದೆ.

ಹೌದು ಟಿ-ಟ್ವೆಂಟಿ ವಿಶ್ವಕಪ್ಗಾಗಿ ಆಯ್ಕೆ ಮಾಡಲಾದ ತಂಡದಿಂದ ಬೆನ್ನು ನೋವಿನ ಕಾರಣದಿಂದಾಗಿ ಈಗಾಗಲೇ ಜಸ್ಪ್ರೀತ್ ಬೂಮ್ರ ಹೊರ ನಡೆದಿದ್ದಾರೆ. ಅವರ ಸ್ಥಾನದಲ್ಲಿ ಮತ್ತೊಬ್ಬ ವೇಗಿಯನ್ನು ಆಯ್ಕೆ ಸಮಿತಿ ಅಂತಿಮಗೊಳಿಸಬೇಕಿದೆ. ಈಗಾಗಲೇ ಇದಕ್ಕೆ ರೇಸ್ನಲ್ಲಿದ್ದ ಮೊಹಮ್ಮದ್ ಶಮಿ ಹಾಗೂ ದೀಪಕ್ ಚಹರ್ ಗಿಂತ ಸಿರಾಜ್ ಭರ್ಜರಿ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಅನುಭವದ ಆಧಾರದಲ್ಲಿ ನೋಡುವುದಾದರೆ ಮೊಹಮ್ಮದ್ ಶಮಿ ಮೊದಲಿದ್ದಾರೆ, ಆದರೆ ಕಳೆದ ಟಿ-20 ವಿಶ್ವಕಪ್ ಬಳಿಕ ಅವರು ಒಂದೇ ಒಂದು ಟಿ ಟ್ವೆಂಟಿ ಭಾರತದ ಪರ ಆಡಿಲ್ಲ. ಅಲ್ಲದೆ ಅವರು ಸೌತ್ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿಯೂ ಹೊರಗುಳಿದಿದ್ದರು.

ಇತ್ತ ಈ ಎರಡು ಸರಣಿಗಳಲ್ಲಿ ಕಾಣಿಸಿಕೊಂಡಿದ್ದ ದೀಪಕ್ ಚಹರ್ ಗಾಯಗೊಳಗಾಗಿದ್ದಾರೆ. ಹೀಗಾಗಿ ಇಬ್ಬರ ಆಯ್ಕೆ ಅನುಮಾನವಾಗಿರುವ ಬೆನ್ನಲ್ಲೇ ಸಿರಾಜ್ ಅದ್ಬುತ ಪ್ರದರ್ಶನ ತೋರಿದ್ದಾರೆ. ಬಲಿಷ್ಠ ಮೂರು ಪಂದ್ಯಗಳಲ್ಲಿ 23 ಓವರ್ಗಳನ್ನು ಎಸೆದಿರುವ ಸಿರಾಜ್ ಕೇವಲ 104 ರನ್ ಬಿಟ್ಟು ಕೊಟ್ಟಿದ್ದಾರೆ. 4.52 ಎಕನಾಮಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದು 5 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾರೆ. ಇಂತಹ ಅದ್ಭುತ ಪ್ರದರ್ಶನದ ಮೂಲಕ ಅವರು ಟಿ-20 ತಂಡದ ಬಾಗಿಲು ತಟ್ಟಿದ್ದಾರೆ. ಆಯ್ಕೆ ಸಮಿತಿ ಅಂತಿಮವಾಗಿ ಯಾರಿಗೆ ಮಣೆ ಹಾಕಲಿದೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.