ಪದೇ ಪದೇ ವಿಫಲವಾಗುತ್ತಿರುವ ಬುಮ್ರಾ ಹಾಗೂ ಹರ್ಷಲ್ ಬಗ್ಗೆ ಸರಣಿ ಮುಗಿದ ಬಳಿಕ ರೋಹಿತ್ ಹೇಳಿದ್ದೇನು ಗೊತ್ತೇ??

141

ಭಾರತ ವರ್ಸಸ್ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯಗಳು ನಿನ್ನೆಯಷ್ಟೇ ಮುಗಿದಿದೆ. ನಿನ್ನೆಯ ಪಂದ್ಯ ಎರಡು ತಂಡಗಳಿಗೂ ಬಹಳ ಮುಖ್ಯವಾದ ನಿರ್ಣಾಯಕ ಪಂದ್ಯವಾಗಿತ್ತು, ಭಾರತ ತಂಡ ಗೆದ್ದಿದೆ. ನಿನ್ನೆಯ ಪಂದ್ಯದಲ್ಲಿ ಭಾರತ ತಂಡವು ಆರಂಭದಲ್ಲೇ ಇಬ್ಬರು ಬ್ಯಾಟ್ಸ್ಮನ್ ಗಳನ್ನು ಬಹಳ ಬೇಗ ಕಳೆದುಕೊಂಡಿತು. ಬಳಿಕ ಬಂದ ವಿರಾಟ್ ಕೋಹ್ಲಿ ಅವರು ಉತ್ತಮ ಪ್ರದರ್ಶನ ನೀಡಿದರು. ಸೂರ್ಯಕುಮಾರ್ ಯಾದವ್ ಮತ್ತು ವಿರಾಟ್ ಕೋಹ್ಲಿ ಅವರ ಜೊತೆಯಾಟದಲ್ಲಿ 103 ರನ್ಸ್ ಗಳಿಸಿದರು. ಇನ್ನು ವಿರಾಟ್ ಕೋಹ್ಲಿ ಅವರು 48 ಎಸೆತಗಳಲ್ಲಿ 63 ರನ್ಸ್ ಗಳಿಸಿದರು.

ಸೂರ್ಯಕುಮಾರ್ ಯಾದವ್ ಅವರು 36 ಎಸೆತಗಳಲ್ಲಿ 69ನರನ್ಸ್ ಗಳಿಸಿದರು. ಸೂರ್ಯಕುಮಾರ್ ಯಾದವ್ ಅವರ ಮಿಂಚಿನ ವೇಗದ ಬ್ಯಾಟಿಂಗ್ ಎಲ್ಲರ ಮೆಚ್ಚುಗೆ ಪಡೆಯಿತು. 69 ರನ್ಸ್ ಗಳಿಸುವ ಮೂಲಕ ಈ ವರ್ಷ ಟಿ20 ಪಂದ್ಯಗಳಲ್ಲಿ ಅತಿಹೆಚ್ಚು ರನ್ಸ್ ಗಳಿಸಿದ ಬ್ಯಾಟ್ಸ್ಮನ್ ಎನ್ನಸಿಕೊಂಡಿದ್ದಾರೆ ಸೂರ್ಯಕುಮಾರ್, ಈ ವರ್ಷ 20 ಇನ್ನಿಂಗ್ಸ್ ಗಳಲ್ಲಿ 686 ರನ್ಸ್ ಗಳನ್ನು ಗಳಿಸಿದ್ದಾರೆ. ನಿನ್ನೆಯ ಪಂದ್ಯ ಮುಗಿದ ಬಳಿಕ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಹೈದರಾಬಾದ್ ನಲ್ಲಿ ಬಹಳ ಸಂತೋಷದಲ್ಲಿ ಮಾತುಗಳನ್ನಾಡಿದರು. “ಇದೊಂದು ಅದ್ಭುತವಾದ ಜಾಗ, ಈ ಮೊದಲು ಭಾರತ ತಂಡಕ್ಕಾಗಿ, ಮತ್ತು ಡೆಕ್ಕನ್ ಚಾರ್ಜರ್ಸ್ ಪರವಾಗಿ ಸಹ ಆಡಿದ್ದೇನೆ. ಮ್ಯಾನೇಜ್ಮೆಂಟ್ ಆಗಿ ಆಡುವುದು ಚೆನ್ನಾಗಿದೆ, ಟಿ20 ಪಂದ್ಯಗಳಲ್ಲಿ ಎರರ್ ಗಳ ಮಾರ್ಜಿನ್ ಬಹಳ ಕಡಿಮೆ ಇರುತ್ತದೆ.

ನಾವು ಚಾನ್ಸ್ ತೆಗೆದುಕೊಂಡು ಧೈರ್ಯವಾಗಿ ಸಹ ಆಡಿದೆವು. ಕೆಲವು ಬಾರಿ ಅಂದುಕೊಂಡ ಹಾಗೆ ನಡೆಯುವುದಿಲ್ಲ, ಅವುಗಳನ್ನು ಇಂಪ್ರೂವ್ ಮಾಡಿಕೊಳ್ಳಬೇಕು.” ಎಂದಿದ್ದಾರೆ. ಅಷ್ಟೇ ಅಲ್ಲದೆ, ಭಾರತ ತಂಡಕ್ಕೆ ಕಂಬ್ಯಾಕ್ ಮಾಡಿರುವ ಸ್ಕಿಪ್ಪರ್ ಗಳು, ಜಸ್ಪ್ರೀತ್ ಬುಮ್ರ ಮತ್ತು ಹರ್ಷಲ್ ಪಟೇಲ್ ಅವರ ಬಗ್ಗೆ ಸಹ ಮಾತನಾಡಿ, ಇಬ್ಬರು ತಮ್ಮ ಬೆಸ್ಟ್ ಫಾರ್ಮ್ ನಲ್ಲಿಲ್ಲ, ಆದರೆ ಮತ್ತೆ ತಮ್ಮ ಫಾರ್ಮ್ ಗೆ ಮರಳಿಬರುತ್ತಾರೆ ಎಂದು ನಾನು ಕೂಡ ಭರವಸೆ ಇಟ್ಟುಕೊಂಡಿದ್ದೇನೆ ಎಂದಿದ್ದಾರೆ..”ಇಂತಹ ಟಫ್ ತಂಡದ ಎದುರು ಬ್ರೇಕ್ ನಂತರ ಕಂಬ್ಯಾಕ್ ಮಾಡುವುದು ಬಹಳ ಕಷ್ಟ. ಅವರಿಗೆ ಸ್ವಲ್ಪ ಟೈಮ್ ಬೇಕು. ಮುಂದಿನ ಸೀರೀಸ್ ನಲ್ಲಿ ಫಾರ್ಮ್ ಗೆ ಮರಳಿ ಬರುತ್ತಾರೆ ಎಂದು ನಾನು ಕೂಡ ಭರವಸೆ ಇಟ್ಟುಕೊಂಡಿದ್ದೇನೆ..” ಎಂದು ಹೇಳಿದ್ದಾರೆ ರೋಹಿತ್ ಶರ್ಮಾ.

Leave A Reply

Your email address will not be published.