ಪಾಕಿಸ್ತಾನ್ ಪ್ರೀಮಿಯರ್ ಲೀಗ್ ನಿಂದ ಹಿಂದೆ ಸರಿದ ಆಸ್ಟ್ರೇಲಿಯಾ ಆಟಗಾರ. ಕಾರಣ ತಿಳಿದರೆ ನೀವು ಕೂಡ ನಗುತ್ತೀರ?
ಪಾಕಿಸ್ತಾನ ಎಂದರೆ ನೆನಪಾಗುವುದು ಏನು ಇಲ್ಲ ನಗು ಒಂದು ಬರುತ್ತದೆ. ಯಾಕಂದರೆ ಅವರು ಮಾಡುವ ಕೆಲಸ ಅಂತಹದು. ಸದಾ ಒಂದಿಲ್ಲ ಒಂದು ವಿಚಾರದಲ್ಲಿ ಸುದ್ದಿಯಲ್ಲಿ ಇರುತ್ತಾರೆ. ಸದಾ ತಮ್ಮನ್ನು ಭಾರತಕ್ಕಿಂತ ಶ್ರೇಷ್ಠ ರಾಷ್ಟ್ರ ಎಂದು ಹೇಳಿಕೊಂಡು ಬೀಗುತ್ತಾ ಕಾಲ ಕಳೆಯುತ್ತಾರೆ. ಆದರೆ ನಿಜಾಂಶ ನೋಡಿದರೆ ಅಲ್ಲಿನ ಜನರೇ ಹೇಳುತ್ತಾರೆ ಅಲ್ಲಿನ ಪರಿಸ್ಥಿತಿ ಬಗೆಗೆ. ಈಗ ಅದೇ ರಾಷ್ಟ್ರ ಮತ್ತೊಮ್ಮೆ ಸುದ್ದಿಯಲ್ಲಿ ಇದೆ. ಹೌದು ಈ ಬಾರಿ ಕ್ರಿಕೆಟ್ ವಿಚಾರದಲ್ಲಿ ಸುದ್ದಿಯಾಗಿದೆ.
ಪಾಕಿಸ್ತಾನ್ ಪ್ರೀಮಿಯರ್ ಲೀಗ್ ಎಂದರೆ ನಮಗೆ ಗೊತ್ತೇ ಇದೆ. ನಮ್ಮಲ್ಲಿ ಐಪಿಎಲ್ ನಡೆಯುವ ರೀತಿಯಲ್ಲಿ ಅಲ್ಲಿ ನಡೆಯುವ ಸರಣಿ ಇದು. ಆದರೆ ಇದು ನಮ್ಮ ಐಪಿಎಲ್ ಗಿಂತ ಶ್ರೇಷ್ಠ ಎಂದು ಪಾಕಿಸ್ತಾನ ಬೋರ್ಡ್ ಯಾವಾಗಲೂ ಬಿಗುತ್ತಲೆ ಇರುತ್ತದೆ. ಆದರೆ ನಿಜಾಂಶ ನೋಡಿದರೆ ಪಾಕಿಸ್ತಾನ ಇಡೀ ಸರಣಿಗೆ ಖರ್ಚು ಮಾಡುವ ಖರ್ಚು ಭಾರತ ಗೆದ್ದ ತಂಡಕ್ಕೆ ನೀಡುತ್ತದೆ. ಇದರಿಂದಲೇ ನೀವು ಅಂದಾಜು ಮಾಡಬಹುದು ಅದರ ಗುಣಮಟ್ಟ.
ಆದರೆ ಈಗ ಮತ್ತೊಮ್ಮೆ ಈ ಪಾಕಿಸ್ತಾನ್ ಪ್ರೀಮಿಯರ್ ಲೀಗ್ ಸುದ್ದಿಯಲ್ಲಿ ಇದೆ. ಆಸ್ಟ್ರೇಲಿಯಾ ದ ಖ್ಯಾತ ಆಟಗಾರ ಫೌಕ್ನರ್ ಪಾಕಿಸ್ತಾನ ಪ್ರೀಮಿಯರ್ ಲೀಗ್ ನಿಂದ ಹೊರಗೆ ಬಂದಿದ್ದಾರೆ . ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಚಾರ ಹಂಚಿಕೊಂಡಿದ್ದು ಇದೀಗ ವೈರಲ್ ಆಗಿದೆ. ತಮ್ಮ ಕಾಂಟ್ರಾಕ್ಟ್ ಪ್ರಕಾರವಾಗಿ ಹೇಳಿದ ಮೊತ್ತವನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ತನಗೆ ನೀಡಿಲ್ಲ ಅದಕ್ಕಾಗಿ ನಾನು ಮುಂದಿನ ಉಳಿದ ಎರಡು ಪಂದ್ಯಾಟ ಆಡುತ್ತಿಲ್ಲ. ಬದಲಾಗಿ ತವರಿಗೆ ವಾಪಾಸಗುತ್ತಿದ್ದೇನೆ ಎಂದು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಇದು ವೈರಲ್ ಆಗಿದ್ದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದ ಔತಣ ಕೂಟದ ಹಾಗೆ ಆಗಿದೆ. ಇದೀಗ ಟ್ವಿಟರ್ ನಲ್ಲಿ ಎಲ್ಲೆಡೆ ಪಾಕಿಸ್ತಾನವನ್ನು ಟ್ರೊಲ್ ಮಾಡುತ್ತಿದ್ದಾರೆ.