ಬದ್ದ ವೈರಿ ಪಾಕಿಸ್ತಾನದ ಜೊತೆ ಪಂದ್ಯ: ಈ ಹೈ ವೋಲ್ಟೇಜ್ ಕದನದಲ್ಲಿ ಕಿರಿಕ್ ತೆಗೆಯಬಲ್ಲ ಪಾಕ್ ನ ಸಂಭವನೀಯ ಆಟಗಾರರು ಯಾರ್ಯಾರು ಗೊತ್ತೇ??

145

ನಮಸ್ಕಾರ ಸ್ನೇಹಿತರೇ ಭಾರತ ಹಾಗೂ ಪಾಕಿಸ್ತಾನ ತಂಡದ ನಡುವಿನ ಹೈ ವೋಲ್ಟೇಜ್ ಪಂದ್ಯ ಇದೇ ಭಾನುವಾರ ರಾತ್ರಿ 07-30ಕ್ಕೆ ಆರಂಭವಾಗಲಿದೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಕೇವಲ ಕ್ರಿಕೆಟ್ ಮಾತ್ರವಲ್ಲದೇ ಹಲವಾರು ಭಾವನೆಗಳ ಎರಕವಿರುತ್ತದೆ. ಈ ಪಂದ್ಯದಲ್ಲಿ ಆಟಗಾರರ ನಡುವಿನ ಫೈಟ್ ಗಳು ಕಾಮನ್. ಹಲವಾರು ವರ್ಷಗಳಿಂದ ಇಂತಹ ಸ್ಲೆಡ್ಜಿಂಗ್ ಗಳು ಹಾಗೂ ಅದಕ್ಕೆ ಪ್ರತ್ಯುತ್ತರಗಳು ಕಾಣಸಿಗುತ್ತವೆ. ಈ ಪಂದ್ಯದಲ್ಲಿಯೂ ಸಹ ಇಂತಹ ಘಟನೆ ನಡೆಯುವ ಸಾಧ್ಯತೆ ಇದೆ. ಬನ್ನಿ ಉದ್ದೇಶಪೂರ್ವಕವಾಗಿ ಭಾರತ ತಂಡದ ಆಟಗಾರರೊಂದಿಗೆ ಕಿರಿಕ್ ತೆಗೆಯಬಲ್ಲ ಪಾಕಿಸ್ತಾನದ ಮೂವರು ಆಟಗಾರರು ಯಾರು ಎಂಬುದನ್ನು ತಿಳಿಯೋಣ.

1.ಹ್ಯಾರಿಸ್ ರೌಫ್ – ಪಾಕಿಸ್ತಾನದ ಈ ವೇಗದ ಬೌಲರ್ ಮಧ್ಯಮ ಓವರ್ ಗಳಲ್ಲಿ ವಿಕೇಟ್ ತೆಗೆಯಲು ಫೇಮಸ್. ಆದರೇ ಈ ಬೌಲರ್ ಗೆ ಕೋಪ ಸಹ ಜಾಸ್ತಿ. ಕ್ಯಾಚ್ ಬಿಟ್ಟ ಎಂಬ ಕಾರಣಕ್ಕೆ ಮೈದಾನದ ಮಧ್ಯದಲ್ಲಿಯೇ ಸಹ ಆಟಗಾರನಿಗೆ ಹೊಡೆಯಲು ಹೋಗಿದ್ದ. ಹೀಗಾಗಿ ಭಾರತೀಯ ಬ್ಯಾಟ್ಸ್ಮನ್ ಗಳು ಇವರಿಗೆ ಸಿಕ್ಸ್ ಹೊಡೆದರೇ ಆಗ ಈತ ಭಾರತೀಯ ಬ್ಯಾಟ್ಸ್ಮನ್ ಗಳ ಜೊತೆ ಕಿರಿಕ್ ತೆಗೆಯುವ ಸಾಧ್ಯತೆ ಇದೆ.

2.ಮೊಹಮದ್ ರಿಜ್ವಾನ್ – ಸೌಮ್ಯ ಸ್ವಭಾವದ ಪಾಕಿಸ್ತಾನದ ವಿಕೇಟ್ ಕೀಪರ್, ವಿಕೆಟ್ ಹಿಂದುಗಡೆ ನಡೆಸುವ ಸ್ಲೆಡ್ಜಿಂಗ್ ನಿಂದ ಭಾರತೀಯ ಬ್ಯಾಟ್ಸ್ಮನ್ ಗಳು ತಾಳ್ಮೆ ಕೆಟ್ಟು, ಕಿರಿಕ್ ತೆಗೆಯುವ ಸಾಧ್ಯತೆ ಇದೆ.

3.ಫಖರ್ ಜಮಾನ್ – ಪಾಕಿಸ್ತಾನದ ಹಾರ್ಡ್ ಹಿಟ್ಟಿಂಗ್ ಆರಂಭಿಕ ಬ್ಯಾಟ್ಸ್ ಮನ್ ಈತ. ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಇಳಿಯುವ ಈತ ಭಾರತದ ವೇಗದ ಬೌಲರ್ ಗಳಾದ ಭುವನೇಶ್ವರ್ ಕುಮಾರ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಹಾರ್ದಿಕ್ ಪಾಂಡ್ಯ ಜೊತೆ ಕಿರಿಕ್ ತೆಗೆಯುವ ಸಾಧ್ಯತೆ ಹೆಚ್ಚು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.