ಬಾರಿ ನಿರೀಕ್ಷೆ ಮೂಡಿಸಿರುವ ಈ ಬಾರಿಯ ವಿಶ್ವಕಪ್ ಟೂರ್ನಿಯಲ್ಲಿ ಕಿರೀಟ ಗೆಲ್ಲಬಹುದಾದಂತಹ ಟಾಪ್ ಮೂರು ತಂಡಗಳು ಯಾವ್ಯಾವು ಗೊತ್ತೇ??
ಐಸಿಸಿ ಟಿ20 ಮೆನ್ಸ್ ವರ್ಲ್ಡ್ ಕಪ್ ಮುಂದಿನ ತಿಂಗಳು ಶುರುವಾಗಲಿದೆ. ವಿಶ್ವದ 16 ತಂಡಗಳು ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲಿದ್ದು, ಒಟ್ಟು 45 ಪಂದ್ಯಗಳು ನಡೆಯಲಿದೆ. ನವೆಂಬರ್ 13ರಂದು ಫಿನಾಲೆ ನಡೆಯಲಿದೆ. ವಿಶ್ವದ ಕ್ರಿಕೆಟ್ ಅಭಿಮಾನಿಗಳು ವಿಶ್ವಕಪ್ ಪಂದ್ಯಗಳನ್ನು ನೋಡಲು ಕಾತುರರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ವಿಶ್ವಕಪ್ ಪಂದ್ಯಗಳು ನಡೆಯಲಿದೆ, ಇದೀಗ ಸೂಪರ್ 12 ಹಂತದ ಪಂದ್ಯಗಳಿಗೆ 12 ತಂಡಗಳು ಆಯ್ಕೆಯಾಗಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್, ಅಫ್ಘಾನಿಸ್ತಾನ್, ಬಾಂಗ್ಲಾದೇಶ್, ಇಂಡಿಯಾ, ಪಾಕಿಸ್ತಾನ್, ಹಾಗೂ ಸೌತ್ ಆಫ್ರಿಕಾ. ಇದು ಟೂರ್ನಮೆಂಟ್ ನ ಟಾಪ್ ತಂಡಗಳಾಗಿದ್ದು, ಇವುಗಳಲ್ಲಿ ಒಂದು ತಂಡ ವಿಶ್ವಕಪ್ ಗೆಲ್ಲುತ್ತದೆ ಎನ್ನಲಾಗುತ್ತಿದೆ.ಇಂದು ನಾವು ವಿಶ್ವಕಪ್ ಗೆಲ್ಲಬಹುದಾದ ಅಗ್ರ ಮೂರು ತಂಡಗಳ ಬಗ್ಗೆ ತಿಳಿಸುತ್ತೇವೆ..
1.ಆಸ್ಟ್ರೇಲಿಯಾ :- ಸಧ್ಯಕ್ಕೆ ಲೀಡ್ ನಲ್ಲಿರುವುದು ಅಸ್ಟ್ರೇಲಿಯಾ ತಂಡ. ಆಸ್ಟ್ರೇಲಿಯಾದಲ್ಲೇ ವಿಶ್ವಕಪ್ ನಡೆಯುತ್ತಿರುವ ಕಾರಣ, ಅಸ್ಟ್ರೇಲಿಯಾಗೆ ಇದು ಅನುಕೂಲ ಆಗಿದೆ. ಇವರು ಈ ಟೂರ್ನಮೆಂಟ್ ನ ಡಿಫೆಂಡಿಂಗ್ ಚಾಂಪಿಯನ್ಸ್ ಆಗಿದ್ದಾರೆ. ಕಳೆದ ವರ್ಷ ಟಿ20 ವರ್ಲ್ಡ್ ಕಪ್ ಗೆದ್ದಿದ್ದು, ಟಿ20 ಪಂದ್ಯಗಳಲ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಇದುವರೆಗೂ ಆಸ್ಟ್ರೇಲಿಯಾ ತಂಡ ಒಂದೇ ಒಂದು ಟಿ20 ಸೀರೀಸ್ ಅನ್ನು ಸಹ ಸೋತಿಲ್ಲ. ಟಿ20 ಸೀರೀಸ್ ನಲ್ಲಿ ಪಾಕಿಸ್ತಾನ್ ತಂಡವನ್ನು ಒಂದು ಸಾರಿ, ಶ್ರೀಲಂಕಾ ತಂಡವನ್ನು ಎರಡು ಸಾರಿ ಸೋಲಿಸಿದ್ದಾರೆ.
2.ಭಾರತ :- ಐಸಿಸಿ ಟಿ20 ಮೆನ್ಸ್ ವರ್ಲ್ಡ್ ಕಪ್ ಗೆಲ್ಲಲು ಅರ್ಹವಾಗಿರುವ ಮತ್ತೊಂದು ತಂಡ ಭಾರತ. ಕಳೆದ ಎರಡು ವರ್ಷಗಳಲ್ಲಿ ಟಿ20 ಪಂದ್ಯಗಳಲ್ಲಿ ಭಾರತ ತಂಡ ಒಳ್ಳೆಯ ಪ್ರದರ್ಶನ್ ನೀಡುತ್ತಿದೆ. ಕಳೆದ ವರ್ಷ ಟಿ20 ವರ್ಲ್ಡ್ ಕಪ್ ನಲ್ಲಿ ಭಾರತ ತಂಡ ಒಂದೇ ಒಂದು ಪಂದ್ಯವನ್ನು ಸಹ ಸೋತಿರಲಿಲ್ಲ. 7 ಟಿ20 ಸೀರೀಸ್ ಗಳನ್ನು ಭಾರತ ತಂಡ ಆಡಿದ್ದು, ಅವುಗಳಲ್ಲಿ 6 ಸೀರೀಸ್ ಗೆದ್ದಿದೆ. ಸೌತ್ ಆಫ್ರಿಕಾ ವಿರುದ್ಧದ ಒಂದು ಟಿ20 ಸೀರೀಸ್ ಪಂದ್ಯ ಟೈ ಆಯಿತು. ಐಸಿಸಿ ಟಿ20 ರಾಂಕಿಂಗ್ ಗಳಲ್ಲಿ, ಭಾರತ ಅಗ್ರಸ್ಥಾನದಲ್ಲಿದೆ.
3.ನ್ಯೂಜಿಲೆಂಡ್ :- ಮೂರನೇ ಸ್ಥಾನದಲ್ಲಿ ಇರುವ ತಂಡ ನ್ಯೂಜಿಲೆಂಡ್. ಪಂದ್ಯಗಳು ನಡೆಯುತ್ತಿರುವ ಸ್ಥಳ ಇವರಿಗೆ ಅನುಕೂಲಕರ ಆಗಬಹುದು. ಏಕೆಂದರೆ ನ್ಯೂಜಿಲೆಂಡ್ ಆಸ್ಟ್ರೇಲಿಯಾದ ಪಕ್ಕದ ದೇಶ ಆಗಿರುವುದರಿಂದ ಆಸ್ಟ್ರೇಲಿಯಾ ಸ್ಥಿತಿಗತಿಗಳ ಬಗ್ಗೆ ನ್ಯೂಜಿಲೆಂಡ್ ಗೆ ತಿಳಿದಿದೆ. ಹಾಗು ಕಳೆದ ಕೆಲವು ವರ್ಷಗಳಿಂದ ಟಿ20 ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡ ಉತ್ತಮ ಪ್ರದರ್ಶನ ನೀಡುತ್ತಿದೆ. ಕಳೆದ ವರ್ಷ ಟಿ20 ವಿಶ್ವಕಪ್ ನಲ್ಲಿ ನ್ಯೂಜಿಲೆಂಡ್ ತಂಡ ಫೈನಲ್ಸ್ ತಲುಪಿತ್ತು.