ಭಾರತಕ್ಕೆ ವಿಶ್ವಕಪ್ ಟೂರ್ನಿ ಆರಂಭಕ್ಕೂ ಮುನ್ನವೇ ಮತ್ತೊಂದು ಬಿಗ್ ಶಾಕ್: ಮತ್ತೊಬ್ಬ ಬಲಾಢ್ಯ ಆಟಗಾರ ಹೊರಕ್ಕೆ.

96

ಐಸಿಸಿ ಟಿ20 ವಿಶ್ವಕಪ್ ಗೆ ಸಿದ್ಧವಾಗುತ್ತಿರುವ ಟೀಮ್ ಇಂಡಿಯಾಗೆ ಮತ್ತೊಂದು ಶಾಕ್ ಎದುರಾಗಿದೆ. ವಿಶ್ವಕಪ್ ರಿಸರ್ವ್ ಆಟಗಾರರ ಪಟ್ಟಿಯಲ್ಲಿದ್ದ ಬಲಗೈ ಸ್ವಿನ್ಗ್ ಬೌಲರ್ ದೀಪಕ್ ಇದೀಗ ಬೆನ್ನು ನೋವಿನಿಂದ ಹೊರ ನಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ನಂತರ ಅವರು ಗಾಯದಿಂದ ಬಳಲುತ್ತಿದ್ದರು. ಹೀಗಾಗಿ ಅವರು ಹರಿಣಗಳ ವಿರುದ್ಧದ ಏಕದಿನ ಸರಣಿಯಲ್ಲಿಯೂ ಆಡಿರಲಿಲ್ಲ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಬೆಂಗಳೂರಿನಲ್ಲಿ ಪುನಃಶ್ಚೇಚೇತನ ಶಿಬಿರದಲ್ಲಿ ಪಾಲ್ಗೊಂಡಿರುವ ಅವರು ವಿಶ್ವಕಪ್ ಶುರುವಾಗುವ ಒಳಗೆ ಗುಣಮುಖರಾಗುವ ಸಾಧ್ಯತೆ ಇಲ್ಲ ಎಂದೇ ಹೇಳಲಾಗುತ್ತಿದೆ. ಹೀಗಾಗಿ ವಿಶ್ವಕಪ್ ಮೀಸಲು ಆಟಗಾರರ ಪಟ್ಟಿಯಿಂದ ಚಹಾರ್ ಅವರನ್ನು ಕೈ ಬಿಡಲಾಗಿದ್ದು ಆಲ್-ರೌಂಡರ್ ಶಾರ್ದುಲ್ ಠಾಕೂರ್ ಅವರು ತಂಡಕ್ಕೆ ಸೇರಿಕೊಂಡಿದ್ದಾರೆ.

ಈ ಮೊದಲು ಜಸ್ಟ್ಪ್ರೀತ್ ಬೂಮ್ರ ಕೂಡ ಬೆನ್ನು ನೋವಿನ ಕಾರಣದಿಂದ ವಿಶ್ವಕಪ್ ನಿಂದ ಹೊರ ನಡೆದಿದ್ದರೂ. ಭೂಮ್ರ ಅವರ ಜಾಗಕ್ಕೆ ಇನ್ನೂ ಬದಲಿ ಆಟಗಾರರನ್ನು ಅಂತಿಮಗೊಳಿಸಿಲ್ಲ. ಮೊಹಮ್ಮದ್ ಶಮಿ ಅವರೇ ಬೂಮ್ರ ಜಾಗದಲ್ಲಿ ಅಂತಿಮ 15ರ ಬಳಗದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೊಹಮ್ಮದ್ ಶಮಿ ಮತ್ತು ಶಾರ್ದೂಲ್ ಠಾಕೂರ್ ಜೊತೆ ಯುವ ಬಲಗೈ ವೇಗಿ ಮೊಹಮ್ಮದ್ ಸಿರಾಜ್ ಕೂಡ ಇನ್ನೆರಡು ದಿನಗಳಲ್ಲಿ ಆಸ್ಟ್ರೇಲಿಯಾಗೆ ಹಾರಲಿದ್ದು, ವಿಶ್ವಕಪ್ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಸಾಂಪ್ರದಾಯಿಕ ತಂಡ ಪಾಕಿಸ್ತಾನದ ವಿರುದ್ಧ ಭಾರತ ತಂಡ ತನ್ನ ಮೊದಲ ಪದ್ಯದಲ್ಲಿ ಸೆಣೆಸಲಿದೆ. ಅಕ್ಟೋಬರ್ 23ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಈ ಹೈ ವೋಲ್ಟೇಜ್ ಪಂದ್ಯ ಶುರುವಾಗಲಿದೆ. ಭಾರತ ತಂಡವು ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶ ತಂಡಗಳ ಜೊತೆ ಗ್ರೂಪ್ ಎರಡರಲ್ಲಿ ಸ್ಥಾನ ಪಡೆದಿದೆ. ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮೊದಲು ಭಾರತ ಆತಿಥೇಯ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧ ಬ್ರಿಸ್ಬೇನ್’ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನಾಡಲಿದೆ.

Leave A Reply

Your email address will not be published.