ಭಾರತೀಯರಿಗೆ ಅತ್ಯಂತ ಅಚ್ಚುಮೆಚ್ಚಿನ ಆಸ್ಟ್ರೇಲಿಯಾ ಕ್ರಿಕೆಟರ್ ಡೇವಿಡ್ ವಾರ್ನರ್ ಅವರು ಐಪಿಎಲ್ ನಲ್ಲಿ ಮಾಡಿದ್ದಾರೆ ಈ ೫ ದಾಖಲೆ.

906

ಐಪಿಎಲ್ ಅಲ್ಲಿ ಕೆಲವು ಆಟಗಾರರು ಉತ್ತಮ ಪ್ರದರ್ಶನ ನೀಡಿ ದಾಖಲೆ ಮಾಡಿದಾಗ ಅವರ ಹೆಸರನ್ನು ನಾವು ನೆನಪಿನಲ್ಲಿಟ್ಟುಕೊಳ್ಳುತ್ತೇವೆ. ಅಂತಹ ಹೆಸರುಗಳಲ್ಲಿ ಒಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್. ಐಪಿಎಲ್ ಅಲ್ಲಿ ಡೇವಿಡ್ ವಾರ್ನರ್ ಅವರ ಪ್ರದರ್ಶನ ಉತ್ತಮವಾಗಿತ್ತು. ಸನ್ ರಿಸೆರ್ಸ್ ಹೈದೆರಾಬಾದ್ ಪರ ಅನೇಕ ಉತ್ತಮ ಇನಿಂಗ್ಸ್ ಅದಿದ್ದರೆ ಡೇವಿಡ್ ವಾರ್ನರ್. ಮೊದಲು ಡೆಲ್ಲಿ ಪರ ಆಡುತ್ತಿದ್ದ ವಾರ್ನರ್ ನಂತರ ಹೈದೆರಾಬಾದ್ ತಂಡದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಭಾರತದಲ್ಲಿ ಅತಿ ಹೆಚ್ಚು ಜನರು ಪ್ರೀತಿಸುವ ಆಟಗಾರರಲ್ಲಿ ಡೇವಿಡ್ ವಾರ್ನರ್ ಒಬ್ಬರು.

ಐಪಿಎಲ್ ನಲ್ಲಿ ಡೇವಿಡ್ ವಾರ್ನರ್ ಮಾಡಿದ ಈ ೫ ದಾಖಲೆಗಳು.
೧. ಐಪಿಎಲ್ ಅಲ್ಲಿ ಅತಿ ಹೆಚ್ಚು ಅರ್ಧ ಶತಕ ಗಳಿಸಿದ ಶ್ರೇಯಸ್ಸು ಡೇವಿಡ್ ವಾರ್ನರ್ ಹೆಸರಲ್ಲಿದೆ. ಇವರು ಆಡಿದ ಐಪಿಎಲ್ ಪಂದ್ಯದಲ್ಲಿ ಒಟ್ಟು ೪೦ ಬಾರಿ ಅರ್ಧ ಶತಕ ದಾಖಲಿಸಿದ್ದಾರೆ. ಈ ವೇಳೆ ೩ ಶತಕ ಕೂಡ ಮಾಡಿದ್ದಾರೆ ಡೇವಿಡ್ ವಾರ್ನರ್. ಈ ದಾಖಲೆ ಸುತ್ತ ಮುತ್ತ ಇದುವರೆಗೂ ಯಾರು ಬರಲಿಲ್ಲ. ಇದು ಇಂದಿಗೂ ಇವರ ಹೆಸರಲ್ಲೇ ಇದೆ.

೨. ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ವಿದೇಶಿ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ನಮ್ಮ ಡೇವಿಡ್ ವಾರ್ನರ್ ಹೆಸರಲ್ಲಿದೆ. ಅಷ್ಟಲ್ಲದೇ ವಾರ್ನರ್ ನಮ್ಮ ದೇಶದ ಅನೇಕ ದಿಗ್ಗಜ ಬ್ಯಾಟ್ಸಮನ್ ಗಳಿಗೆ ಪೈಪೋಟಿ ನೀಡುತ್ತಿದ್ದಾರೆ. ಇಲ್ಲಿಯವರೆಗೆ ೧೧೫ ಇನ್ನಿಂಗ್ಸ್ ಅಲ್ಲಿ ೪೧ ರ ಸರಾಸರಿಯಲ್ಲಿ ೪೦೧೫ ರನ್ಗಳನ್ನು ಗಳಿಸಿದ್ದಾರೆ. ಈ ರನ್ ಗಳಲ್ಲಿ ಒಟ್ಟು ೪೦೧ ಫೋರ್ ಹಾಗು ೧೬೦ ಸಿಕ್ಸರ್ ಗಳು ಕೂಡ ಸೇರಿದೆ.

೩. ಅತಿ ಹೆಚ್ಚು ಸಂಖ್ಯೆಯಲ್ಲಿ ಆರೆಂಜ್ ಕ್ಯಾಪ್ ಪಡೆದವರಲ್ಲಿ ಮೊದಲನೇ ಸ್ಥಾನ ಡೇವಿಡ್ ವಾರ್ನರ್ ಹೆಸರಲ್ಲಿದೆ. ೨೦೧೫ ಹಾಗು ೨೦೧೭ ರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ೨೦೧೪ ರಲ್ಲಿ ಕೇವಲ ೧೪ ಪಂದ್ಯಗಳಲ್ಲಿ ೬೪೧ ರನ್ ಗಳಿಸಿದ್ದಾರೆ. ಆ ವರ್ಷದಲ್ಲಿ ಅವರ ರನ್ ಸರಾಸರಿ ೫೮ ರಲ್ಲಿತ್ತು. ೨೦೧೭ ರ ಐಪಿಎಲ್ ಅಲ್ಲಿ ೫೬೨ ರನ್ ಗಳಿಸಿದ್ದರು.

೪. ಒಂದು ಸ್ಟೇಡಿಯಂ ಅಲ್ಲಿ ಅತ್ಯಧಿಕ ಬ್ಯಾಟಿಂಗ್ ಸರಾಸರಿ ಹೊಂದಿರುವ ಆಟಗಾರ. ಎಲ್ಲ ಆಟಗಾರರಿಗೆ ಯಾವುದಾದರು ಒಂದು ಗ್ರೌಂಡ್ ಅವರ ಅಚ್ಚುಮೆಚ್ಚಿನದಾಗಿರುತ್ತದೆ. ಡೇವಿಡ್ ವಾರ್ನರ್ ಅವರ ನೆಚ್ಚಿನ ಗ್ರೌಂಡ್ ಸನ್ ರಿಸೆರ್ಸ್ ಹೈದೆರಾಬಾದ್ ನ ತವರು ಮೈದಾನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ. ಇಲ್ಲಿ ಆಡಿದ ಕೇವಲ ೨೪ ಇನ್ನಿಂಗ್ಸ್ ಅಲ್ಲಿ ೧೧೬೯ ರನ್ ಗಳಿಸಿದ್ದಾರೆ. ಈ ಗ್ರೌಂಡ್ ಅಲ್ಲಿ ವಾರ್ನರ್ ಅವರ ಸ್ಟ್ರೈಕ್ ರೇಟ್ ೧೬೨ ಮೀರಿದೆ. ಮತ್ತು ಸರಾಸರಿ ೬೫ ಆಗಿದೆ.

೫. ಒಂದು ಇನ್ನಿಂಗ್ಸ್ ಅಲ್ಲಿ ನಾಯಕನಾಗಿ ಅತ್ಯಧಿಕ ರನ್. ಡೇವಿಡ್ ವಾರ್ನರ್ ಐಪಿಎಲ್ ಅಲ್ಲಿ ಕೇವಲ ಒಳ್ಳೆ ಆಟಗಾರನಾಗಿ ಅಲ್ಲದೆ ಉತ್ತಮ ನಾಯಕನಾಗಿಯೂ ಹೊರಹೊಮ್ಮಿದ್ದಾರೆ. ೨೦೧೫ ರಲ್ಲಿ ಸನ್ ರಿಸೆರ್ಸ್ ಹೈದೆರಾಬಾದ್ ಪ್ಲೇಆಫ್ ಗೆ ಬರಲು ಸಾಧ್ಯವಾಗಲಿಲ್ಲ ಆದರೆ ೨೦೧೬ ರಲ್ಲಿ ವಾರ್ನರ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ಹಾಗು ಅತ್ಯುತ್ತಮ ನಾಯಕತ್ವದಿಂದ ಐಪಿಎಲ್ ಟ್ರೋಪಿ ತಮ್ಮದಾಗಿಸಿಕೊಂಡರು. ೨೦೧೬ ರಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ೮೦೦ ಕ್ಕೂ ಅಧಿಕ ರನ್ ಕಲೆ ಹಾಕಿದ್ದಾರೆ. ಒಬ್ಬ ನಾಯಕನಾಗಿ ಐಪಿಎಲ್ ನಲ್ಲಿ ಒಂದು ಇನ್ನಿಂಗ್ಸ್ ಅಲ್ಲಿ ಅತಿ ಹೆಚ್ಚು ರನ್ ಗಳಿಸಿದ ಖ್ಯಾತಿಗೆ ಪಾತ್ರರಾಗಿದ್ದಾರೆ. ೨೦೧೭ ರಲ್ಲಿ ಕೋಲ್ಕತ್ತಾ ನಡುವಿನ ಪಂದ್ಯದಲ್ಲಿ ಕೇವಲ ೫೯ ಬಾಲ್ ಗಳಲ್ಲಿ ೧೨೬ ರನ್ ಗಳಿಸಿದ್ದಾರೆ. ಯಾವುದೇ ನಾಯಕ ಈ ದಾಖಲೆ ದಾಟುವಲ್ಲಿ ಯಶಸ್ಸಗಲಿಲ್ಲ.

Leave A Reply

Your email address will not be published.