ಭಾರತೀಯ ಕ್ರಿಕೆಟ್ ತಂಡದ ವಿರುದ್ಧ ನಾಲಗೆ ಹರಿಬಿಟ್ಟ ಸೌತ್ ಆಫ್ರಿಕಾ ತಂಡದ ಕ್ರಿಕೆಟ್ ಆಟಗಾರನ ತಂದೆ? ಅಷ್ಟಕ್ಕೂ ಅವರು ಹೇಳಿದ್ದು ಏನು?
ಭಾರತ ಮತ್ತು ಸೌತ್ ಆಫ್ರಿಕಾ ನಡುವಿನ ಟೆಸ್ಟ್ ಸರಣಿ ನಡೆಯುತ್ತಿದ್ದು, ಮೊದಲ ಟೆಸ್ಟ್ ನಲ್ಲಿ ಭಾರತ ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತ್ತು, ಆದರೆ ಎರಡನೇ ಟೆಸ್ಟ್ ನಲ್ಲಿ ಹೀನಾಯ ಪ್ರದರ್ಶನ ತೋರುವ ಮೂಲಕ ಭಾರತ ತಂಡ ಸೋಲನ್ನು ಅನುಭವಿಸಿತ್ತು. ಭಾರತ ತಂಡಕ್ಕೆ ಹೋಲಿಸಿದರೆ ದಕ್ಷಿಣ ಆಫ್ರಿಕಾ ತಂಡ ಎರಡನೇ ಇನ್ನಿಂಗ್ಸ್ ನಲ್ಲಿ ತನ್ನ ಬ್ಯಾಟಿಂಗ್ ಪ್ರದರ್ಶನ ಉತ್ತಮವಾಗಿಸಿ ಜಯ ಸಾಧಿಸಿದ್ದರು. ಆದರೆ ಇದೀಗ ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗರ್ ಅವರ ತಂದೆ ರಿಚರ್ಡ್ ಅವರು ಭಾರತ ತಂಡದ ವಿರುದ್ಧ ಕೊಂಕು ಮಾತನಾಡುವ ಮೂಲಕ ಲೇವಡಿ ಮಾಡಿದ ಹಾಗೆ ಅನ್ನಿಸುತ್ತಿದೆ. ಹಾಗಾದರೆ ಅಷ್ಟಕ್ಕೂ ಅವರು ಹೇಳಿದ ಮಾತೇನು ಬನ್ನಿ ತಿಳಿಯಿರಿ.
ಎರಡನೇ ಇನ್ನಿಂಗ್ಸ್ ನಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡ ಜಯ ಸಾಧಿಸಿತ್ತು. ಇದರಲ್ಲಿ ಮುಖ್ಯ ಪಾತ್ರ ವಹಿಸಿದವರು ದಕ್ಷಿಣ ಆಫ್ರಿಕಾ ತಂಡದ ನಾಯಕ ಡೀನ್ ಎಲ್ಗಾರ್ ಅವರು. ಅವರು 97 ರನ್ ಗಳ ನೋಟೌಟ್ ಇನ್ನಿಂಗ್ಸ್ ದಕ್ಷಿಣ ಆಫ್ರಿಕಾ ತಂಡದ ಗೆಲುವಿಗೆ ಕಾರಣವಾಯಿತು. ಡೀನ್ ಎಲ್ಗಾರ್ ಅವರು ತಮ್ಮ ತಂದೆಗೆ ಮಾತು ಕೊಟ್ಟಿದ್ದರಂತೆ, ” ಯಾರು ಇಲ್ಲದಿದ್ದರೆ ನಾನು ಕೊನೆವರೆಗೂ ನಿಂತು ಆಡುತ್ತೇನೆ” ಎಂದು. ಅದೇ ಪ್ರಕಾರ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದರು.
ಇದಕ್ಕೆ ಉತ್ತರ ಎಂಬಂತೆ ಅವರ ತಂದೆ ” ಡೀನ್ ಎಲ್ಗಾರ್ ಅವರ ತಂದೆ ಡೀನ್ ಅನ್ನು ಕಟ್ಟಿ ಹಾಕಲು ಭಾರತ ತಂಡಕ್ಕೆ ಸಾಧ್ಯವಿಲ್ಲ, ಅವರನ್ನು ಔಟ್ ಮಾಡುವುದು ಕಷ್ಟ , ಔಟ್ ಮಾಡಲು ಸಾಧ್ಯವಿಲ್ಲ ಅವರು ಬ್ಯಾಟಿಂಗ್ ನಿಲ್ಲಿಸಬೇಕಾದರೆ ಅವರ ದೇಹದ ಯಾವುದಾದರೂ ಅಂಗಾಂಗಕ್ಕೆ ತೊಂದರೆ ಮಾಡಬೇಕು ಎಂದು ಹೇಳಿದ್ದರು”. ಇದು ಯಾಕೋ ಕ್ರೀಡಾ ಸ್ಫೂರ್ತಿ ಮರೆತು ಆಡಿದ ಮಾತಿನಂತೆ ಕಾಣುತ್ತಿದೆ. ಬ್ಯಾಟಿಂಗ್ ವೈಫಲ್ಯ ಎಲ್ಲರೂ ಕಾಣುತ್ತಾರೆ ಆದರೆ ಒಂದು ಒಳ್ಳೆಯ ಇನ್ನಿಂಗ್ಸ್ ಆಡಿದ ಮಾತ್ರಕ್ಕೆ ಈ ರೀತಿ ಹೇಳಿರುವ ಮಾತು ಯಾಕೋ ನೆಟ್ಟಿಗರ ಬಾಯಿಗೆ ಬೀಳುವಂತೆ ಮಾಡಿದೆ.