ಭಾರತ ತಂಡಕ್ಕೆ ಎರಡನೇ ಅಭ್ಯಾಸ ಪಂದ್ಯದಲ್ಲಿ ಹೀನಾಯ ಸೋಲು. ಆ ಸೋಲಿನಲ್ಲೂ ಕೂಡ ಖುಷಿ ಪಡುವ ಏಕೈಕ ಸಂಗತಿ ಏನು ಗೊತ್ತೇ??

147

ಟೀಮ್ ಇಂಡಿಯಾ ಕ್ರಿಕೆಟ್ ತಂಡವು ಆಸ್ಟ್ರೇಲಿಯಾದಲ್ಲಿ ಬೀಡು ಬಿಟ್ಟು, ವಿಶ್ವಕಪ್ ಗಾಗಿ ಅಭ್ಯಾಸ ನಡೆಸುತ್ತಿದೆ. ಈಗಾಗಲೇ ಎರಡು ಅಭ್ಯಾಸ ಪಂದ್ಯಗಳು ನಡೆದಿದ್ದು, ವೆಸ್ಟರ್ನ್ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ತಂಡ ಅಭ್ಯಾಸ ಪಂದ್ಯಗಳನ್ನು ಆಡಿದೆ. ಮೊದಲ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತು, ಆದರೆ ಎರಡನೇ ಪಂದ್ಯದಲ್ಲಿ ಸೋಲು ಕಂಡಿದೆ. ಕೆ.ಎಲ್.ರಾಹುಲ್ ಅವರ ನೇತೃತ್ವದಲ್ಲಿ ಎರಡನೇ ಪಂದ್ಯ ನಡೆಯಿತು, ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟರ್ನ್ ಆಸ್ಟ್ರೇಲಿಯಾ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿತು.

ಆದರೆ ಭಾರತ ತಂಡ 20 ಓವರ್ ಗಳಲ್ಲಿ 132 ರನ್ ಗಳಿಸಲು ಮಾತ್ರ ಸಾಧ್ಯವಾಯಿತು. ಕೆ.ಎಲ್.ರಾಹುಲ್ ಅವರು ಒಬ್ಬಂಟಿಯಾಗಿ, ಪಂದ್ಯವನ್ನು ಮುನ್ನಡೆಸಿದರು ಎಂದು ಹೇಳಬಹುದು. ಭಾರತದ ಬಹುತೇಕ ಬ್ಯಾಟ್ಸ್ಮನ್ ಗಳು ಎರಡು ಅಂಕೆಗಳ ರನ್ ಸಹ ಗಳಿಸಲು ಸಾಧ್ಯವಾಗಲಿಲ್ಲ. ದಿನೇಶ್ ಕಾರ್ತಿಕ್ ಅವರು 10 ರನ್, ಹಾರ್ದಿಕ್ ಪಾಂಡ್ಯ 17 ರನ್ ಗೆ ಔಟ್ ಆದರು, ಕೆ.ಎಲ್.ರಾಹುಲ್ ಅವರು 5ತ್ ಎಸೆತಗಳಲ್ಲಿ 74 ರನ್ ಭಾರಿಸಿ, ಭಾರತ ತಂಡದ ಸ್ಕೋರ್ ಹೆಚ್ಚಿಸಿದರು ಎಂದು ಹೇಳಬಹುದು. ರಾಹುಲ್ ಅವರು 2 ಸಿಕ್ಸರ್ ಮತ್ತು 9 ಬೌಂಡರಿ ಭಾರಿಸಿ 74 ರನ್ಸ್ ಭಾರಿಸಿದರು. ಇದರಿಂದ ತಂಡದ ಮೊತ್ತ ಗೆಲುವಿಗೆ ಹತ್ತಿರವಾಗಿತ್ತು.

ಭಾರತ ತಂಡ ಸೋಲು ಕಂಡಿದ್ದರು ಸಹ, ಕೆ.ಎಲ್.ರಾಹುಲ್ ಅವರು ಫಾರ್ಮ್ ಗೆ ಮರಳಿ ಬಂದಿದ್ದಾರೆ ಎನ್ನುವುದು ಸಂತೋಷರ ವಿಚಾರ ಆಗಿದೆ. ಇಂಜುರಿ ಇಂದ ಚೇತರಿಸಿಕೊಂಡು ಕೆ.ಎಲ್.ರಾಹುಲ್ ಅವರು ಭಾರತ ತಂಡಕ್ಕೆ ವಾಪಸ್ ಬಂದ ಬಳಿಕ ರಾಹುಲ್ ಅವರು ಕಳಪೆ ಫಾರ್ಮ್ ನಲ್ಲಿದ್ದರು, ಆದರೆ ಈ ಪಂದ್ಯದ ಮೂಲಕ ಫಾರ್ಮ್ ಗೆ ಮರಳಿ ಬಂದಿದ್ದಾರೆ. ಇದು ಭಾರತ ತಂಡದ ಪಾಲಿಗೆ ಒಳ್ಳೆಯ ವಿಚಾರವೇ ಆಗಿದೆ. ಆಕ್ಟೊಬರ್ 16ರಂದು ವಿಶ್ವಕಪ್ ಪಂದ್ಯಗಳು ಶುರುವಾಗಲಿದ್ದು, ಆಕ್ಟೊಬರ್ 23ರಂದು ಭಾರತದ ತಂಡದ ಮೊದಲ ಪಂದ್ಯ, ಪಾಕಿಸ್ತಾನ್ ವಿರುದ್ಧ ನಡೆಯಲಿದೆ.

Leave A Reply

Your email address will not be published.