ಭಾರತ ತಂಡಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುವ ಸಾಮರ್ಥ್ಯ ಇದ್ದರೂ ಕೂಡ ಆಯ್ಕೆಯಾಗದ 3 ನತದೃಷ್ಟ ಆಟಗಾರರು ಯಾರು ಗೊತ್ತೇ??

152

ನಮಸ್ಕಾರ ಸ್ನೇಹಿತರೇ ಟಿ 20 ವಿಶ್ವಕಪ್ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ.ಎಲ್ಲಾ ತಂಡಗಳು ಈಗಾಗಲೇ ಆಡುವ ಹದಿನೈದು ಸದಸ್ಯರ ತಂಡವನ್ನು ಪ್ರಕಟಿಸಿದೆ ಭಾರತ ಪ್ರಕಟಿಸಿರುವ ತಂಡದಲ್ಲಿ ಹಲವಾರು ಅಚ್ಚರಿಗಳು ಆಯ್ಕೆಯಾಗಿದ್ದರೇ, ಹಲವು ಪ್ರತಿಭಾನ್ವಿತ ಆಟಗಾರರನ್ನು ಕೈ ಬಿಟ್ಟಿರುವುದು ಸಹ ಅಚ್ಚರಿಗೆ ಕಾರಣವಾಗಿದೆ. ವಿಶ್ವಕಪ್ ಗೆಲ್ಲಿಸುವ ಸಾಮರ್ಥ್ಯವಿದ್ದರೂ ತಂಡಕ್ಕೆ ಆಯ್ಕೆಯಾಗದ ಮೂವರು ನತದೃಷ್ಟ ಆಟಗಾರರು ಯಾರು ಎಂಬುದನ್ನು ತಿಳಿಯೋಣ.

1.ಸಂಜು ಸ್ಯಾಮ್ಸನ್ : ಭಾರತ ತಂಡದ ಪ್ರತಿಭಾವಂತ ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ಗೆ ಅದೃಷ್ಟ ಸದಾ ಕೈ ಕೊಡುತ್ತದೆ.ಜಿಂಬಾಬ್ವೆ ಹಾಗೂ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಆಸ್ಟ್ರೇಲಿಯಾದ ಬೌನ್ಸಿ ಪಿಚ್ ಗಳಿಗೆ ಅವರು ಸಮರ್ಥ ಬ್ಯಾಟರ್ ಆಗಿದ್ದರು.ಅದಲ್ಲದೇ ಪದೇ ಪದೇ ವೈಫಲ್ಯ ಅನುಭವಿಸುತ್ತಿರುವ ರಿಷಭ್ ಪಂತ್ ರವರ ಬದಲಿಗೆ ಅವರು ಬದಲಿ ವಿಕೇಟ್ ಕೀಪರ್ ಸಹ ಆಗುವ ಸಾಮರ್ಥ್ಯ ಹೊಂದಿದ್ದರು. ಆದರೇ ಅವರನ್ನು ಆಯ್ಕೆ ಮಾಡಿಲ್ಲ.

2.ಉಮ್ರಾನ್ ಮಲೀಕ್ : ಭಾರತದ ಸ್ಪೀಡ್ ಸ್ಟಾರ್ ಉಮ್ರಾನ್ ಮಲೀಕ್ ಆಸ್ಟ್ರೇಲಿಯಾದ ವೇಗದ ಪಿಚ್ ಗಳಿಗೆ ಹೇಳಿ ಮಾಡಿಸಿದ ಬೌಲರ್. ಬೌನ್ಸಿ ಪಿಚ್ ಗಳಲ್ಲಿ ತಮ್ಮ ಅದ್ಭುತ ವೇಗದ ಮೂಲಕ ಪರಿಣಾಮಕಾರಿಯಾಗುವ ಉಮ್ರಾನ್ ಗೆ ವಿಶ್ವಕಪ್ ಟಿ 20 ತಂಡದ ಸ್ಥಾನದ ಟಿಕೆಟ್ ಮಿಸ್ ಆಗಿದೆ.

3.ಕುಲದೀಪ್ ಯಾದವ್ : ಭಾರತದ ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಗೆ ಸಹ ವಿಶ್ವಕಪ್ ತಂಡದಲ್ಲಿ ಸ್ಥಾನ ಲಭಿಸಿಲ್ಲ.ಆಸ್ಟ್ರೇಲಿಯಾದ ದೊಡ್ಡ ಮೈದಾನಗಳಲ್ಲಿ ತಮ್ಮ ಚೈನಾಮನ್ ಬೌಲಿಂಗ್ ನಿಂದ ಪರಿಣಾಮಕಾರಿಯಾಗುವಲ್ಲಿ ಯಶಸ್ವಿಯಾಗುತ್ತಿದ್ದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.