ಭಾರತ ತಂಡಕ್ಕೆ ವಿಶ್ವಕಪ್ ಗೆ ಮುನ್ನ ಸಮಸ್ಯೆಗಳ ಮೇಲೆ ಸಮಸ್ಯೆ: ಕಾಡುತ್ತಿರುವ ಪ್ರಮುಖ ಸಮಸ್ಯೆಗಳೇನು ಗೊತ್ತೇ??
ಭಾರತ ತಂಡ ವಿಶ್ವಕಪ್ ಶುರುವಾಗುವುದಕ್ಕಿಂತ ಮೊದಲು ತಮ್ಮಲ್ಲಿರುವ ವೈಫಲ್ಯತೆಗಳನ್ನು ಬಗೆಹರಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ. ಅಫ್ಘಾನ್ ವಿರುದ್ಧ ಒಳ್ಳೆಯ ಪ್ರದರ್ಶನ ನೀಡಿದರು ಸಹ, ಅದಕ್ಕಿಂತ ಹಿಂದಿನ ಎರಡು ಪಂದ್ಯಗಳಲ್ಲೂ ಸಹ ಭಾರತ ತಂಡ ಉತ್ತಮ ಪ್ರದರ್ಶನ ನೀಡಲಿಲ್ಲ. ಭಾರತ ತಂಡದಲ್ಲಿರುವ ಸಮಸ್ಯೆಗಳು ಏನು? ತಂಡದಲ್ಲಿ ಏನು ಬದಲಾವಣೆ ಆಗಬೇಕಿದೆ ಎಂದು ತಿಳಿಸುತ್ತೇವೆ ನೋಡಿ..
*ರಾಹುಲ್ ಅವರು ಪಂದ್ಯದಲ್ಲಿ ಅಗ್ರಕ್ರಮಾಂಕದಲ್ಲಿ ಬ್ಯಾಟಿಂಗ್ ಚೆನ್ನಾಗಿರಬೇಕು, ವಿಕೆಟ್ ಕಳೆದುಕೊಳ್ಳಬಾರದು ಎಂದು ಯೋಚನೆ ಮಾಡಿದ್ದರಂತೆ. ಈ ಬಗ್ಗೆ ರೋಹಿತ್ ಮಾತನಾಡಿ, ಅವರ ಸಾಮರ್ಥ್ಯ ಏನು ಎಂದು ನಮಗೆ ಗೊತ್ತಿದೆ ಅವರನ್ನು ನಾವು ಒಳ್ಳೆಯ ಸ್ಥಿತಿಯಲ್ಲಿ ಇಡಬೇಕು ಎಂದಿದ್ದಾರೆ.
*ರೋಹಿತ್ ಅವರೊಡನೆ ವಿರಾಟ್ ಓಪನರ್ ಆಗಿ ಬಂದರೆ, ಸೂರ್ಯಕುಮಾರ್ ಯಾದವ್ 3ನೇ ಕ್ರಮಾಂಕದಲ್ಲಿ ಬರುತ್ತಾರೆ, ಇದರಿಂದ ರಾಹುಲ್ ಪ್ಲೇಯಿಂಗ್ 11 ಇಂದ ಹೊರಗಿರಬೇಕಾಗುತ್ತದೆ. ರಾಹುಲ್ ಅವರಲ್ಲಿ ಪ್ರತಿಭೆ ಇದೆ. ಅದಕ್ಕೆ ತಕ್ಕ ಪ್ರದರ್ಶನ ಕೊಡಲು ಏಷ್ಯಾಕಪ್ ನಲ್ಲಿ ಸಾಧ್ಯವಾಗಿಲ್ಲ.
*ಮಧ್ಯಮ ಕ್ರಮಾಂಕದಲ್ಲಿ ಸಹ ಸಮಸ್ಯೆ ಇದೆ, ದಿನೇಶ್ ಕಾರ್ತಿಕ್ ಅವರಿಗೆ ಆಡಲು ಅವಕಾಶ ಸಿಕ್ಕಿದ್ದು ಒಂದೇ ಪಂದ್ಯದಲ್ಲಿ, ಅದರಲ್ಲಿ ಅವರು 10ಕ್ಕಿಂತ ಕಡಿಮೆ ಎಸೆತಗಳನ್ನು ಫೇಸ್ ಮಾಡಿದರು
*ಅದ್ಭುತ ಬ್ಯಾಟಿಂಗ್ ಇಂದ ಹಲವು ಟೆಸ್ಟ್ ಪಂದ್ಯಗಳಲ್ಲಿ ಗೆಲುವಿಗೆ ಸಹಾಯ ಮಾಡಿದ ರಿಷಬ್ ಪಂತ್, ಏಷ್ಯಾಕಪ್ ಪಂದ್ಯಗಳಲ್ಲಿ ಉತ್ತಮವಾದ ಪ್ರದರ್ಶನ ನೀಡಿಲ್ಲ.
*ಹಾರ್ದಿಕ್ ಪಾಂಡ್ಯ ಅವರು ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಅದ್ಭುತವಾದ ಪ್ರದರ್ಶನ ನೀಡಿದರು ಸಹ, ನಂತರದ ಪಂದ್ಯಗಳಲ್ಲಿ ಅದೇ ರೀತಿಯ ಆಕ್ರಮಣಕಾರಿ ಪ್ರದರ್ಶನ ಬರಲಿಲ್ಲ.
*ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಅಲಭ್ಯತೆ ಸಹ ತೊಂದರೆಯಾಗಿದೆ, ಅಕ್ಷರ್ ಪಟೇಲ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ, ಆದರೆ ರವೀಂದ್ರ ಜಡೇಜಾ ಅವರ ಹಾಗೆ ಬ್ಯಾಟಿಂಗ್ ಮಾಡಲು ಸಾಧ್ಯವಾಗುವುದಿಲ್ಲ.
*ಮಧ್ಯಮ ಕ್ರಮಾಂಕಕ್ಕೆ ದೀಪಕ್ ಹೂಡಾ ಒಳ್ಳೆಯ ಆಯ್ಕೆ ಆಗುತ್ತಾರೆ.
*ರವೀಂದ್ರ ಜಡೇಜಾ ಅವರು ಪಾಕ್ ವಿರುದ್ಧದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದು ಬಿಗ್ ಹಿಟ್ಸ್ ಗಳನ್ನು ಹೊಡೆದಿದ್ದರು.
*19ನೇ ಓವರ್ ನಲ್ಲಿ ಪಾಕಿಸ್ತಾನಕ್ಕೆ 19 ರನ್ ಬಿಟ್ಟುಕೊಟ್ಟಿದ್ದ ಭುವನೇಶ್ವರ್ ಕುಮಾರ್ ಅವರು, ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಸಹ ಅದೇ ತಪ್ಪನ್ನು ಮಾಡಿದರು.
*ಅಫ್ಘಾನ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಪಡೆದರು ಸಹ ಭುವನೇಶ್ವರ್ ಕುಮಾರ್ ಒತ್ತಡದಲ್ಲಿ ಇರುವ ಹಾಗೆ ತೋರುತ್ತಿತ್ತು.
*ಪ್ರಸ್ತುತ ಹರ್ಷಲ್ ಪಟೇಲ್ ಹಾಗೂ ಜಸ್ಪ್ರೀತ್ ಬುಮ್ರ ಆಕ್ರಮಣಕಾರಿ ಬೌಲಿಂಗ್ ಮಾಡುವಲ್ಲಿ ನಿಸ್ಸಿಮರು, ಇವರು ಈಗ ಫಿಟ್ ಆಗಿರುವ ಕಾರಣ ತಂಡಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ.