ಭಾರತ ತಂಡದಲ್ಲಿ ಫಿನಿಶರ್ ಸ್ಥಾನ ಈ ಆಟಗಾರ ತುಂಬ ಬಲ್ಲ. ರಿಕಿ ಪಾಂಟಿಂಗ್ ಆಯ್ಕೆ ಸರಿ ಅನ್ನುತ್ತಿದ್ದಾರೆ ಕ್ರಿಕೆಟ್ ಅಭಿಮಾನಿಗಳು.
ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾಗಿ ಇದೀಗ ಸೌತ್ ಆಫ್ರಿಕಾ ಜೊತೆಗೆ ೫ ಪಂದ್ಯಗಳ ಟಿ-೨೦ ಸರಣಿ ಶುರು ವಾಗಿದೆ. ಈಗಾಗಲೇ ಎರಡು ಪಂದ್ಯ ಸೋತಿರುವ ಭಾರತ ತಂಡ ಮುಂದಿನ ಪಂದ್ಯಗಳತ್ತ ತನ್ನ ಸಂಪೂರ್ಣ ಚಿತ್ತ ಬದಲಾಯಿಸಿದೆ. ಸೋಲಿನ ಬಗ್ಗೆ ಚಿಂತಿಸದೆ ಮುಂದಿನ ಪಂದ್ಯಗಳಿಗೆ ಅಭ್ಯಾಸ ನಡೆಸುತ್ತಿದೆ. ಈ ಸರಣಿ ಆಡುತ್ತಿರುವ ಹೊಸ ಮುಖಗಳಿಗೆ ಮುಂದಿನ ವಿಶ್ವಕಪ್ ಗೆ ಬಹಳ ಮುಖ್ಯವಾಗಿದೆ. ಈ ಸರಣಿ ಪ್ರದರ್ಶನ ನೋಡಿ ಆಯ್ಕೆ ಸಮಿತಿ ತಂಡ ರಚಿಸಲಿದೆ. ಈ ಆಫ್ರಿಕಾ ಎದುರಿನ ಸರಣಿಗೆ ಒಂದು ವಿಶೇಷ ಎಂದರೆ ದಿನೇಶ್ ಕಾರ್ತಿಕ್.
೨೦೧೯ ರ ಬಳಿಕ ಭಾರತ ತಂಡಕ್ಕೆ ರಿಎಂಟ್ರಿ ಕೊಟ್ಟಿದ್ದಾರೆ. ಅದು ಕೂಡ ಸಾಧ್ಯವಾಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ. ತಮ್ಮ ಅದ್ಬುತ ಪ್ರದರ್ಶನ ಮೂಲಕ ಮ್ಯಾಚ್ ವಿನ್ನರ್ ಆಗಿದ್ದ ದಿನೇಶ್ ಕಾರ್ತಿಕ್ ಅವರನ್ನು ಈ ಬಾರಿ ಆಯ್ಕೆ ಸಮಿತಿ ಆಯ್ಕೆ ಮಾಡಿದರಲ್ಲಿ ಯಾರಿಗೂ ಅನುಮಾನವಿರಲಿಲ್ಲ. ಇದಕ್ಕೆ ಪೂರಕ ಎನ್ನುವಂತೆ ಎರಡನೇ ಪಂದ್ಯದಲ್ಲಿ ಕೊನೆಯ ಎರಡು ಓವರ್ ಗಳಲ್ಲಿ ಗಳಿಸಿದ ಅತ್ಯಮೂಲ್ಯ ೨೧ ರನ್ ತಂಡದ ಮೊತ್ತ ೧೪೮ ಬರುವಲ್ಲಿ ಸಾಧ್ಯವಾಯಿತು. ಈ ಪಂದ್ಯದಲ್ಲಿ ಭಾರತ ಸೋತರು ಕೂಡ ಉತ್ತಮ ವಿಷಯ ಎಂದರೆ ದಿನೇಶ್ ಕಾರ್ತಿಕ್ ಮಾಧ್ಯಮ ಕ್ರಮಾಂಕದಲ್ಲಿ ತಮ್ಮ ಸ್ಥಿರ ಪ್ರದರ್ಶನ ತೋರಿಸಿದ್ದು.
ಇವರ ಬಗ್ಗೆ ಭಾರತದ ಕ್ರಿಕೆಟ್ ಅಭಿಮಾನಿಗಳು ಈಗಾಗಲೇ ವಿಶ್ವಕಪ್ ತಂಡಕ್ಕೆ ಸೇರಿಸಬೇಕೆಂದು ಹೇಳಿದ್ದಾರೆ. ಅದಲ್ಲದೆ ಇದು ಈಚೆಯನ್ನು ಸ್ವತಃ ದಿನೇಶ್ ಕಾರ್ತಿಕ್ ಅವರೇ ಐಪಿಎಲ್ ಸಂದರ್ಭದಲ್ಲಿ ಇಂಗಿತ ವ್ಯಕ್ತ ಪಡಿಸಿದ್ದಾರೆ. ಇದೀಗ ಆಸ್ಟ್ರೇಲಿಯಾದ ಲೆಜೆಂಡ್ ರಿಕಿ ಪಾಂಟಿಂಗ್ ಕೂಡ ದಿನೇಶ್ ಕಾರ್ತಿಕ್ ಅವರ ಬಗ್ಗೆ ಎರಡು ಉತ್ತಮ ಮಾತುಗಳನ್ನಾಡಿ ಹೊಗಳಿದ್ದಾರೆ. ಕಾರ್ತಿಕ್ ಅವರನ್ನು ತಂಡದ ಐದು ಅಥವಾ ಆರನೇ ಕ್ರಮಾಂಕದ ಬ್ಯಾಟ್ಸಮನ್ ಆಗಿ ನೋಡಲು ನಾನು ಇಚ್ಚಿಸುತ್ತೇನೆ. RCB ತಂಡದಲ್ಲಿ ಆಡಿದ ಆಟದ ಕಾರಣನೇ ಬೆಂಗಳೂರು ಮುಂದಿನ ಪಂದ್ಯಗಳಿಗೆ ಬಡ್ತಿ ಪಡೆದದ್ದು.
ಐಪಿಎಲ್ ನೋಡಿದರೆ ತಂಡ ಗೆಲ್ಲಲು ಉತ್ತಮವಾದ ಎರಡು ಅಥವಾ ಮೂರೂ ಆಟಗಾರರು ಬೇಕಾಗುತ್ತದೆ ಎನ್ನುವುದು ಸ್ಪಷ್ಟವಾಗುತ್ತದೆ. ಅಂತಹ ಆಟಗಾರರು ತಂಡದಲ್ಲಿ ಇದ್ದಾರೆ ತಂಡ ಗೆಲ್ಲುವುದು ಶತ ಸಿದ್ದ. ಈ ಬಾರಿಯ ಐಪಿಎಲ್ ಅಲ್ಲಿ ಉಳಿದ ಆಟಗಾರರಿಗಿಂತ ತಂಡಕ್ಕೆ ದೊಡ್ಡ ಮಟ್ಟದಲ್ಲಿ ಯಶಸ್ಸು ತಂದು ಕೊಟ್ಟಿದ್ದು ದಿನೇಶ್ ಕಾರ್ತಿಕ್. ಇವರು ಮ್ಯಾಚ್ ಫಿನಿಶಿಂಗ್ ಉತ್ತಮವಾಗಿ ಮಾಡಿದ್ದಾರೆ ಎಂದು ಪಾಂಟಿಂಗ್ ಹೇಳಿದ್ದಾರೆ. ಇದೆ ರೀತಿ ಭಾರತ ತಂಡಕ್ಕೂ ದಿನೇಶ್ ಕಾರ್ತಿಕ್ ಮ್ಯಾಚ್ ಫಿನಿಶರ್ ಆಗಬಹುದು ಎಂದು ಪಾಂಟಿಂಗ್ ಹೇಳಿದ್ದಾರೆ. ಅಂದರೆ ಇವರು ಧೋನಿ ಅವರ ಸ್ಥಾನ ತುಂಬಲು ಸೂಕ್ತರು ಎನ್ನುವುದು ಪರೋಕ್ಷವಾಗಿ ಹೇಳಿದ್ದಾರೆ.