ಭಾರತ ತಂಡದ ಭವಿಷ್ಯದ ಆಟಗಾರರನ್ನು ಹೆಸರಿಸಿದ ಹೇಡನ್: ಆತ ಎಲ್ಲಾ ರೀತಿಯಲ್ಲೂ ಪರ್ಫೆಕ್ಟ್, ಆತನಿಗೆ ಚಾನ್ಸ್ ನೀಡಿ ಎಂದು ಆಯ್ಕೆ ಮಾಡಿದ್ದು ಯಾರನ್ನು ಗೊತ್ತೇ??

244

ಭಾರತ ತಂಡ ವಿಶ್ವಕಪ್ ಪಂದ್ಯಗಳಲ್ಲಿ ಭಾಗವಹಿಸಲು ಇನ್ನು ಒಂದು ತಿಂಗಳಿಗಿಂತ ಕಡಿಮೆ ಸಮಯ ಇದೆ..ಏಷ್ಯಾಕಪ್ ನಲ್ಲಿ ಸೋಲು ಕಂಡಿದ್ದು, ಭಾರತ ತಂಡ ಆ ಸೋಲಿನ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇನ್ನು 5 ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ವಿಶ್ವಕಪ್ ಗೆ ಭಾರತದ ಪ್ಲೇಯಿಂಗ್ 11 ತಂಡ ಇನ್ನು ಫೈನಲ್ ಆಗಿಲ್ಲ. ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯಗಳು ಶುರುವಾಗಿದ್ದು, ಮೊದಲ ಪಂದ್ಯದಲ್ಲಿ ಭಾರತ ತಂಡ 4 ವಿಕೆಟ್ ಗಳ ಭರ್ಜರಿ ಸೋಲು ಕಂಡಿತು. ಇನ್ನುಳಿದಿರುವ ಪಂದ್ಯಗಳಲ್ಲಿ ಭಾರತ ತಂಡವು ಲಯ ಕಂಡುಕೊಳ್ಳಬೇಕಿದೆ.

ಏಷ್ಯಾಕಪ್ ನಲ್ಲಿ ಆದ ಎಡವತ್ತುಗಳ ಕಾರಣದಿಂದ ಈ ಬಾರಿ ರಿಷಬ್ ಪಂತ್ ಅವರನ್ನು ಪ್ಲೇಯಿಂಗ್ 11 ಇಂದ ಹೊರಗಿಟ್ಟು, ಅವರ ಬದಲಾಗಿ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆದರೆ ದಿನೇಶ್ ಕಾರ್ತಿಕ್ ಅವರು ತಮಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಮೊನ್ನೆಯ ಪಂದ್ಯದಲ್ಲಿ 6 ರನ್ ಗಳಿಗೆ ಔಟ್ ಆದರು ಅಷ್ಟೇ ಅಲ್ಲದೆ ವಿಕೆಟ್ ಕೀಪಿಂಗ್ ನಲ್ಲಿ ಸಹ ಎಡವಟ್ಟು ಮಾಡಿಕೊಂಡರು ದಿನೇಶ್ ಕಾರ್ತಿಕ್. ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ ಹೇಡನ್ ಅವರು ದಿನೇಶ್ ಕಾರ್ತಿಕ್ ಅವರಿಗಿಂತ ರಿಷಬ್ ಪಂತ್ ಅವರೇ ಉತ್ತಮ ಆಯ್ಕೆ ಎಂದು ಹೇಳಿಕೆ ನೀಡಿದ್ದಾರೆ, ಪಂತ್ ಅವರನ್ನೇ ಆಯ್ಕೆ ಮಾಡಬೇಕು ಎನ್ನುವ ಈ ಹೇಳಿಕೆ ಈಗ ವೈರಲ್ ಆಗುತ್ತಿದೆ.

“ನಾನು ಆಯ್ಕೆಗಾರನಾಗಿದ್ದರೆ ರಿಷಬ್ ಪಂತ್ ಅವರನ್ನು ಖಂಡಿತವಾಗಿ ಆಯ್ಕೆ ಮಾಡುತ್ತಿದ್ದೆ. ಭಾರತ ತಂಡದ ಭವಿಷ್ಯ ಅವರು, ರಿಷಬ್ ಅವರಿಗೆ ಸ್ವಲ್ಪ ಸಮಯ ಬೇಕು ಅವರು ಮರಳಿ ಫಾರ್ಮ್ ಗೆ ಬರುತ್ತಾರೆ. ಅವರ ರನ್ಸ್ ಅಥವಾ ಫಾರ್ಮ್ ವಿಚಾರ ಹೊರತುಪಡಿಸಿದರೆ, ಪಂತ್ ಅವರು ತಂಡದಲ್ಲಿ ಇರಲೇಬೇಕು ಎನ್ನುವುದು ನನ್ನ ಅಭಿಪ್ರಾಯ. ಎಲ್ಲಾ ರೀತಿಯಲ್ಲೂ ನೋಡಿದರೆ ಪಂತ್ ಅವರು ಒಬ್ಬ ಅದ್ಭುತವಾದ ಹಾಗೂ ಸುಪಿರಿಯರ್ ಆಟಗಾರ ಆಗಿದ್ದಾರೆ..” ಎಂದಿದ್ದಾರೆ ಹೇಡನ್. ಈ ವರ್ಷ 17 ಟಿ20 ಮ್ಯಾಚ್ ಗಳಲ್ಲಿ ಪಂತ್ ಅವರು 25.91ರ ಸರಾಸರಿಯಲ್ಲಿ 311 ರನ್ ಗಳಿಸಿದ್ದಾರೆ, ಆದರೆ ಇವರಲ್ಲಿ ಸ್ಥಿರತೆ ಇಲ್ಲ ಎನ್ನುವ ಕಾರಣದಿಂದ ಪಂತ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿಲ್ಲ

Leave A Reply

Your email address will not be published.