ಮತ್ತೆ ಒಂದಾಯ್ತು ಖತರ್ನಾಕ್ ಜೋಡಿ: ಬರೋಬ್ಬರಿ 15 ವರ್ಷಗಳ ಬಳಿಕ ವಿಶ್ವಕಪ್ ಗೆಲ್ಲಲು ಮತ್ತೆ ಒಂದಾದ ಜೋಡಿ. ಯಾರ್ಯಾರು ಗೊತ್ತೇ??

386

ಭಾರತ ತಂಡ ಈಗ ಟಿ20 ವಿಶ್ವಕಪ್ ನಲ್ಲಿ ಉತ್ತಮವಾದ ಪ್ರದರ್ಶನ ನೀಡಿ, ಈ ಬಾರಿ ವಿಶ್ವಕಪ್ ಗೆಲ್ಲಲೇಬೇಕು ಎಂದು ತೀರ್ಮಾನ ಮಾಡಿದೆ. ಈಗಾಗಲೇ 15 ಸದಸ್ಯರ ತಂಡವನ್ನು ಭಾರತ ತಂಡ ಪ್ರಕಟಣೆ ಮಾಡಿದೆ. ಈ ವರ್ಷ ವಿಶ್ವಕಪ್ ಪಂದ್ಯಗಳು ಭಾರತ ತಂಡದ ಇಬ್ಬರು ಆಟಗಾರರಿಗೆ ಬಹಳ ಸ್ಪೆಶಲ್. ಆ ಆಟಗಾರರು ಮತ್ಯಾರು ಅಲ್ಲ ಕ್ಯಾಪ್ಟನ್ ರೋಹಿತ್ ಶರ್ಮಾ ಅವರು ಹಾಗೂ ಫಿನಿಷರ್ ದಿನೇಶ್ ಕಾರ್ತಿಕ್ ಅವರು. ಇವರಿಬ್ಬರಿಗು ಈ ವರ್ಷ ಜವಾಬ್ದಾರಿ ಜಾಸ್ತಿ ಇದೆ.

ಏಕೆಂದರೆ ರೋಹಿತ್ ಅವರು ಹಾಗೂ ದಿನೇಶ್ ಕಾರ್ತಿಕ್ ಅವರು ಇಬ್ಬರು ಸಹ ಧೋನಿ ಅವರ ನಾಯಕತ್ವದಲ್ಲಿ 2007ರಲ್ಲಿ ವಿಶ್ವಕಪ್ ತಂಡದ ಸದಸ್ಯರಾಗಿದ್ದರು. ಆ ವರ್ಷ ಭಾರತ ತಂಡ ಅದ್ಭುತವಾದ ಪ್ರದರ್ಶನದಿಂದ ವಿಶ್ವಕಪ್ ಗೆದ್ದು, ಭಾರತಕ್ಕೆ ವಿಶ್ವಕಪ್ ಅನ್ನು ತಂದುಕೊಡುವಲ್ಲಿ ಯಶಸ್ವಿಯಾಗಿತ್ತು. ಪಾಕಿಸ್ತಾನ್ ವಿರುದ್ಧ ಕೊನೆಯ ಪಂದ್ಯವನ್ನು ಗೆದ್ದ ಭಾರತ, ವಿಶ್ವಕಪ್ ನಲ್ಲಿ ಜಯಶಾಲಿ ಆಗಿತ್ತು. ಆಗಿನ ಪಂದ್ಯದಲ್ಲಿ ರೋಹಿತ್ ಅವರಿಗೆ ಒಳ್ಳೆಯ ಅವಕಾಶ ಸಿಕಿ, ಉತ್ತಮವಾದ ಪ್ರದರ್ಶನ ನೀಡಿದ್ದರು. ಈ ಬಾರಿ ತಂಡವನ್ನು ಕ್ಯಾಪ್ಟನ್ ಆಗಿ ಮುನ್ನಡೆಸುವ ಅವಕಾಶ ರೋಹಿತ್ ಶರ್ಮಾ ಅವರಿಗೆ ಸಿಕ್ಕಿದೆ. ಆದರೆ ದಿನೇಶ್ ಕಾರ್ತಿಕ್ ಅವರಿಗೆ ಆ ರೀತಿ ಆಗಿರಲಿಲ್ಲ.

2007ರ ವರ್ಲ್ಡ್ ಕಪ್ ನಲ್ಲಿ ದಿನೇಶ್ ಕಾರ್ತಿಕ್ ಅವರು ಉತ್ತಮವಾದ ಪ್ರದರ್ಶನ ನೀಡಲು ಸಾಧ್ಯವಾಗಿರಲಿಲ್ಲ. ಈ ಬಾರಿ ಕ್ರಿಕೆಟ್ ಇಂದ ನಿವೃತ್ತಿ ಪಡೆಯುವುದಕ್ಕಿಂತ ಮೊದಲು ದಿನೇಶ್ ಕಾರ್ತಿಕ್ ಅವರ ಕನಸು ನನಸಾಗಿದೆ. ವಿಶ್ವಕಪ್ ನಲ್ಲಿ ಆಡುವ ಅವಕಾಶ ದಿನೇಶ್ ಕಾರ್ತಿಕ್ ಅವರಿಗೆ ಸಿಕ್ಕಿದೆ, ಪ್ರಸ್ತುತ ದಿನೇಶ್ ಕಾರ್ತಿಕ್ ಅವರು ಅತ್ಯುತ್ತಮವಾದ ಫಾರ್ಮ್ ನಲ್ಲಿದ್ದಾರೆ. ಹಾಗಾಗಿ ಈ ವಿಶ್ವಕಪ್ ನಲ್ಲಿ ಕಾರ್ತಿಕ್ ಅವರ ಮೇಲೆ ಜವಾಬ್ದಾರಿ ಹೆಚ್ಚಾಗಿದೆ, ಇದು ಅವರಿಗೆ ಸಿಕ್ಕಿರುವ ಬಹಳ ಒಳ್ಳೆಯ ಅವಕಾಶ ಸಿಕ್ಕಿದ್ದು, ಕಾರ್ತಿಕ್ ಅವರ ಬ್ಯಾಟಿಂಗ್ ಪ್ರದರ್ಶನ ಹೇಗಿರುತ್ತದೆ ಎಂದು ನೋಡಬೇಕಿದೆ. 15 ವರ್ಷಗಳ ನಂತರ ಈ ಇಬ್ಬರು ಆಟಗಾರರು, ಮತ್ತೊಮ್ಮೆ ಟಿ20 ವಿಶ್ವಕಪ್ ನಲ್ಲಿ ಆಟವಾಡಲಿದ್ದಾರೆ.

Leave A Reply

Your email address will not be published.