ಮತ್ತೆ ಬರುವುದು ಕಷ್ಟ: ವೆಸ್ಟ್ ಇಂಡೀಸ್ ವಿರುದ್ಧ ಕಳಪೆ ಪ್ರದರ್ಶನ ನೀಡಿ ತಂಡದಿಂದ ಹೊರಬಿದ್ದಿರುವ ನಾಲ್ಕು ಆಟಗಾರರು ಯಾರು ಗೊತ್ತೇ??

150

ನಮಸ್ಕಾರ ಸ್ನೇಹಿತರೇ ವೆಸ್ಟ್ ಇಂಡೀಸ್ ತಂಡದ ವಿರುದ್ಧ ಸರಣಿಯಲ್ಲಿ ಭಾರತ ತಂಡಕ್ಕೆ ಹಲವಾರು ಹೊಸ ಪ್ರತಿಭೆಗಳು ಬೆಳಕಿಗೆ ಬಂದವು‌. ಏಕದಿನ ಹಾಗೂ ಟಿ 20 ಸರಣಿ ಜಯಿಸಿದೆ. ಈ ನಡುವೆ ತಂಡದಲ್ಲಿ ಅವಕಾಶ ಪಡೆದು, ಕಳಪೆ ಪ್ರದರ್ಶನ ನೀಡಿದ ನಾಲ್ವರು ಭಾರತೀಯ ಆಟಗಾರರಿಗೆ ಈ ಸರಣಿಯೇ ಕೊನೆಯ ಸರಣಿ ಎಂದು ಹೇಳಲಾಗುತ್ತಿದೆ. ಬನ್ನಿ ಭಾರತ ತಂಡದಿಂದ ಕೋಕ್ ಪಡೆಯಲಿರುವ ನಾಲ್ವರು ಸಂಭವನೀಯ ಆಟಗಾರರು ಯಾರು ಎಂಬುದನ್ನು ತಿಳಿಯೋಣ.

1.ಶ್ರೇಯಸ್ ಅಯ್ಯರ್: ವಿಂಡೀಸ್ ಸರಣಿಯಲ್ಲಿ ನಾಲ್ಕು ಪಂದ್ಯಗಳಲ್ಲಿ ಅವಕಾಶ ಪಡೆದ ಅಯ್ಯರ್ ಒಂದು ಪಂದ್ಯದಲ್ಲಿ ಮಾತ್ರ ಮಿಂಚಿದ್ದರು. ಮಧ್ಯಮ ಕ್ರಮಾಂಕದ ಬ್ಯಾಟ್ಸಮನ್ ಆಗಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ಅವರಿಗೆ ಮುಂದಿನ ದಿನಗಳಲ್ಲಿ ತಂಡದಲ್ಲಿ ಅವಕಾಶ ಸಿಗುವುದು ಕಷ್ಟ ಸಾಧ್ಯ.

2.ಕುಲದೀಪ್ ಯಾದವ್ – ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಗೆ ವಿಂಡೀಸ್ ಸರಣಿಯಲ್ಲಿ ಒಂದೇ ಒಂದು ಪಂದ್ಯದಲ್ಲಿ ಅವಕಾಶ ಸಿಕ್ಕಿತು. ಆದರೇ ಸದ್ಯ ಭಾರತ ತಂಡದ ಸ್ಪಿನ್ನರ್ ಗಳಾಗಿ ಚಾಹಲ್, ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ ಉತ್ತಮ ಪ್ರದರ್ಶನ ನೀಡುತ್ತಿರುವ ಕಾರಣ ಇವರಿಗೆ ಮುಂದಿನ ದಿನಗಳಲ್ಲಿ ತಂಡದಲ್ಲಿ ಅವಕಾಶ ಸಿಗುವುದು ಕಷ್ಟ.

3.ಸಂಜು ಸ್ಯಾಮ್ಸನ್: ಮಧ್ಯಮ ಕ್ರಮಾಂಕದ ವಿಕೆಟ್ ಕೀಪರ್ ಬ್ಯಾಟ್ಸಮನ್ ಸಂಜು ಸ್ಯಾಮ್ಸನ್ ಗೆ ಅವಕಾಶ ಸಿಕ್ಕಾಗ ಅದೃಷ್ಟ ಕೈ ಕೊಡುತ್ತದೆ. ಅದೃಷ್ಟ ಇದ್ದಾಗ ಅವಕಾಶಗಳು ಸಿಗೋದಿಲ್ಲ. ವಿಂಡೀಸ್ ವಿರುದ್ಧದ ಸರಣಿಯಲ್ಲಿ ಅವಕಾಶ ಸಿಕ್ಕರೂ, ತಮ್ಮ ಅರ್ಹತೆಗೆ ತಕ್ಕ ಆಟ ಸಂಜು ಬ್ಯಾಟ್ ನಿಂದ ಬರಲಿಲ್ಲ. ಹಾಗಾಗಿ ಸಂಜು ಸ್ಯಾಮ್ಸನ್ ಗೆ ಭಾರತ ತಂಡಕ್ಕೆ ಆಯ್ಕೆ ಆಗುವುದು ಸ್ವಲ್ಪ ಕಷ್ಟ.

4.ಆವೇಶ್ ಖಾನ್ – ಟಿ 20 ಕ್ರಿಕೆಟ್ ನಲ್ಲಿ ದುಬಾರಿಯಾಗಿರುವ ಆವೇಶ್ ಖಾನ್ ಅದೃಷ್ಟವಶಾತ್ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮಹಮದ್ ಶಮಿ, ಹರ್ಷಲ್ ಪಟೇಲ್, ಜಸಪ್ರಿತ್ ಬುಮ್ರಾ ಗಾಯಗೊಂಡಿರುವ ಕಾರಣ ಸ್ಥಾನ ಪಡೆದಿರುವ ಆವೇಶ್ ಖಾನ್, ಅವರು ಗಾಯದಿಂದ ಗುಣಮುಖರಾದ ನಂತರ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.