ಮತ್ತೊಮ್ಮೆ ಕೊಹ್ಲಿ ಬಂತು ಬಿಟ್ಟಿ ಸಲಹೆ: ವಿಶ್ವ ದಿಗ್ಗಜನಿಗೆ ಇಂಗ್ಲೆಂಡ್ ಆಟಗಾರ ಹೇಳಿದ್ದೇನು ಗೊತ್ತೇ?? ಕಿಂಗ್ ಅವರು ಉಷರ್ ಎಂದ ಫ್ಯಾನ್ಸ್: ಯಾಕೆ ಗೊತ್ತೇ?

192

ನಮಸ್ಕಾರ ಸ್ನೇಹಿತರೇ ವಿರಾಟ್ ಕೊಹ್ಲಿ ಸದ್ಯ ಇಡೀ ವಿಶ್ವದ ಗಮನ ಸೆಳೆಯುತ್ತಿರುವ ಕ್ರಿಕೇಟಿಗ. ಅವರು ಉತ್ತಮ ಪ್ರದರ್ಶನ ನೀಡುತ್ತಾ ಗಮನ ಸೆಳೆಯುತ್ತಿಲ್ಲ, ಬದಲಿಗೆ ಕಳಪೆ ಪ್ರದರ್ಶನದಿಂದ ಯಾವಾಗ ಹೊರಬರುತ್ತಾರೆಂದು ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವಿರಾಟ್ ಕೊಹ್ಲಿಯ ವೃತ್ತಿ ಜೀವನದ 70ನೇ ಶತಕ ಮೂರು ವರ್ಷದ ಹಿಂದೆ ಬಂದಿತ್ತು. ಆದರೇ ಇದುವರೆಗೂ 71 ನೇ ಶತಕ ಬಂದಿಲ್ಲ. ಹಲವಾರು ಟೆಸ್ಟ್ ಆಡಿದರೂ ವಿರಾಟ್ ಗೆ ಶತಕ ಬಾರಿಸಲು ಆಗಿಲ್ಲ. ಸದ್ಯ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಆಡುತ್ತಿರುವ ವಿರಾಟ್ ಕೊಹ್ಲಿ ಗೆ ಈಗ ಉತ್ತಮ ಅವಕಾಶವಿದೆ.

ಇನ್ನು ಈ ಬಗ್ಗೆ ಮಾತನಾಡಿರುವ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಹಾಗೂ ವೀಕ್ಷಕ ವಿವರಣೆಗಾರ ಗ್ರೇಮ್ ಸ್ವಾನ್, ವಿರಾಟ್ ಕೊಹ್ಲಿ ಗೆ ಫಾರ್ಮ್ ಗೆ ಮರಳಲು ಒಂದು ಸಲಹೆಯನ್ನು ನೀಡಿದ್ದಾರೆ. ಬನ್ನಿ ಆ ಸಲಹೆ ಯಾವುದು ಎಂಬುದನ್ನು ತಿಳಿಯೋಣ. ಗ್ರೇಮ್ ಸ್ವಾನ್ ಪ್ರಕಾರ ವಿರಾಟ್ ಕೊಹ್ಲಿ ಫಾರ್ಮ್ ಗೆ ಮರಳಬೇಕೆಂದರೇ ಅವರನ್ನು ಅವರಿಷ್ಟದಂತೆ ಬಿಡಬೇಕು. ಅಭಿಮಾನಿಗಳು, ತಂಡದ ಮ್ಯಾನೇಜ್ ಮೆಂಟ್ ಅವರ ಮೇಲೆ ಒತ್ತಡವನ್ನು ಹೇರುವುದನ್ನು ಬಿಡಬೇಕು. ಒತ್ತಡ ಇಲ್ಲದ ವಿರಾಟ್ ಖಂಡಿತವಾಗಿಯೂ ದೊಡ್ಡ ಇನ್ನಿಂಗ್ಸ್ ಆಡಬಲ್ಲರು. ಹಾಗಾಗಿ ಅವರನ್ನು ಅವರ ಪಾಡಿಗೆ ಬಿಡಬೇಕು.

ಆಗ ಮಾತ್ರ ವಿರಾಟ್ ಕೊಹ್ಲಿ ಸುಲಭವಾಗಿ ಫಾರ್ಮ್ ಗೆ ಮರಳಬಹುದು ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಅಜಯ್ ಜಡೇಜಾ ಸಹ ಸಹಮತ ವ್ಯಕ್ತಪಡಿಸಿದ್ದಾರೆ, ಆದರೆ ಈ ಕುರಿತು ಅಭಿಮಾನಿಗಳು ಬೇಸರ ವ್ಯಕ್ತ ಪಡಿಸಿದ್ದು, ತಿಳಿದಿರುವುದನ್ನು ಹೇಳುವುದನ್ನು ಬಿಟ್ಟಿ ಬಿಡಿ, ಅವರು ಇಷ್ಟೆಲ್ಲ ಸಾಧನೆ ಅವನ್ನು ತಿಳಿಯದೆಯೇ ಮಾಡಿದ್ದಾರೆಯೇ?? ಸಲಹೆ ಗಳಿಂದಲೇ ವಿರಾಟ್ ಹೀಗೆ ಆಗಿರುವುದು, ಅವರು ಎಲ್ಲವನ್ನು ಕೇಳದೆ ನೈಜ ಆಟ ಆಡಿದರೆ ಸಾಕು ಎಂದಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ

Leave A Reply

Your email address will not be published.