ಮುಂದಿನ ಐಪಿಎಲ್ ಗೆ RCB ಈಗಾಗಲೇ ತಯಾರಿ ಶುರು. ತಂಡದಿಂದ ಕೈ ಬಿಡಲು ಮುಂದಾಗಿದೆ ಈ ಆಟಗಾರರನ್ನ.

299

ಇಂಡಿಯನ್ ಪ್ರೀಮಿಯರ್ ಲೀಗ್ ೨೦೨೨ ಮುಗಿದು ವಾರಗಳಷ್ಟೇ ಕಳೆದಿದೆ. ಆದರೆ RCB ಪ್ಲೇ ಆಫ್ ಅಲ್ಲಿ ಸೋತು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ಮುಂದಿನ ಬಾರಿ ಕಪ್ ಗೆಲ್ಲಲ್ಲು ಇವಾಗಿಂದಲೇ ತಯಾರಿ ನಡೆಸುತ್ತಿದೆ. ಅದೇ ರೀತಿ ಈ ಬಾರಿ ಉತ್ತಮ ಪ್ರದರ್ಶನ ನೀಡದ ಆಟಗಾರರಿಗೂ ಗೇಟ್ ಪಾಸ್ ಕೊಡುವ ಸಾಧ್ಯತೆ ಇದೆ. ಬೆಂಗಳೂರು ತಂಡ ಬಿಡುಗಡೆ ಗೊಳಿಸಬಲ್ಲ ಆಟಗಾರರು ಯಾರ್ಯಾರು? ನಮ್ಮ ಪ್ರಕಾರ ಈ ಐದು ಆಟಗಾರರಿಗೆ ಮುಂದಿನ ಬಾರಿ RCB ಪರ ಆಡುವ ಅವಕಾಶ ಸಿಗುವುದು ತುಂಬಾ ಅನುಮಾನ.

೧. ಶೆರ್ಫಾನ್ ರುಥೇರ್ಫೊರ್ಡ್- ವೆಸ್ಟ್ ಇಂಡೀಸ್ ಆಲ್ರೌಂಡರ್ ಶೆರ್ಫಾನ್ ಮ್ಯಾಕ್ಸ್ ವೆಲ್ ಬದಲಿ ಆಟಗಾರರಾಗಿ ತಂಡಕ್ಕೆ ಆಯ್ಕೆ ಆಗಿದ್ದರು. ಇವರು ಒಟ್ಟಾರೆ ೩ ಪಂದ್ಯ ಬೆಂಗಳೂರು ತಂಡದ ಪರವಾಗಿ ಆಡಿದ್ದಾರೆ. ಆದರೆ ಗಳಿಸಿದ್ದು ಕೇವಲ ೩೩ ರನ್ ಗಳಷ್ಟೇ. ಇವರ ಪಂದ್ಯದ ಸ್ಟ್ರೈಕ್ ರೇಟ್ ಕೂಡ ಅತಿ ಕಡಿಮೆ 66 ರ ಆಸುಪಾಸಿನಲ್ಲಿದೆ. ಇವರು RCB ಗೆ ಬರುವುದಕ್ಕಿಂತ ಮೊದಲು ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡುತ್ತಿದ್ದರು. ಅಲ್ಲಿಯೂ ಕೂಡ ಹೇಳಿಕೊಳ್ಳುವಂತಹ ಬ್ಯಾಟಿಂಗ್ ಇವರಿಂದ ಬಂದಿರಲಿಲ್ಲ. ಹಾಗಾಗಿ ಮುಂದಿನ ಬಾರಿ ಇವರನ್ನು ತಂಡದಿಂದ RCB ಕೈ ಬಿಟ್ಟರು ಆಶ್ಚರ್ಯ ಪಡಬೇಕಿಲ್ಲ.

೨. ಡೇವಿಡ್ ವಿಲ್ಲೆ- ಇಂಗ್ಲೆಂಡ್ ವೇಗಿ RCB ಪರ ಒಟ್ಟು ೪ ಪಂದ್ಯ ಆಡಿದ್ದಾರೆ. ಆದರೆ ಈ ನಾಲ್ಕು ಪಂದ್ಯದಲ್ಲೂ ಕೇವಲ ಒಂದು ಪಂದ್ಯದಲ್ಲಿ ಮಾತ್ರ ೪ ಓವರ್ ಪೂರ್ಣಗೊಳಿಸಿದ್ದಾರೆ. ಇವರು ಆಡಿದ ಪಂದ್ಯಗಳಲ್ಲಿ ಒಟ್ಟಾರೆ ೧೧ ಓವರ್ ಹಾಕಿದ್ದಾರೆ. ಆದರೆ ವಿಕೆಟ್ ಪಡೆದದ್ದು ಕೇವಲ ೧. ಇವರ ಎಕಾನಮಿ ರೇಟ್ ೬.೫೫ ರಲ್ಲಿದೆ. ಆಸ್ಟ್ರೇಲಿಯಾದ ಜೋಶ ಹ್ಯಾಝೆಲ್ವುಡ್ RCB ಗೆ ಲಭ್ಯವಾದ ನಂತರ ಬೆಂಚಲ್ಲಿ ಕೂರಿಸಲಾಗಿತ್ತು. ಇದೆ ಕಾರಣಕ್ಕೆ ಮುಂದಿನ ಬಾರಿ ಐಪಿಎಲ್ ಪಂದ್ಯಕ್ಕೆ ಇವರನ್ನು ಬೆಂಗಳೂರು ತಂಡ ಉಳಿಸಿಕೊಳ್ಳುವುದು ಅನುಮಾನ.

೩. ಅನುಜ್ ರಾವತ್- ಈ ಯುವ ಆಟಗಾರ ಬೆಂಗಳೂರು ತಂಡದ ನಾಯಕ ಡುಪ್ಲೆಸಿಸ್ ಜೊತೆ ಆರಂಭಿಕ ಆಟಗಾರನಾಗಿ ಐಪಿಎಲ್ ಅಲ್ಲಿ ಆಡಿದ್ದ. ದೆಹಲಿ ಮೂಲದ ಈ ಆಟಗಾರ ಒಟ್ಟು ೮ ಪಂದ್ಯಗಳನ್ನು ಆಡಿದ್ದಾರೆ. ಆದರೆ ಗಳಿಸಿದ್ದು ಕೇವಲ ೧೨೯ ರನ್ ಗಳಷ್ಟೇ. ಇವರ ಆವರೇಜ್ ೧೬.೧೩ ಅಷ್ಟೇ. ಇವರು ವಿಕೆಟ್ ಕೀಪರ್ ಕೂಡ ಆಗಿದ್ದಾರೆ. ವಿರಾಟ್ ಕೊಹ್ಲಿ ಓಪನರ್ ಆಗಿ ಬಡ್ತಿ ಹೊಂದಿದ ಮೇಲೆ ಇವರನ್ನು ಪ್ಲೇಯಿಂಗ್ ೧೧ ಇಂದ ಬಿಡಲಾಯಿತು. ಮುಂದಿನ ಬಾರಿ ಇವರು ಕೂಡ ತಂಡದಲ್ಲಿ ಕಾಣಿಸಿಕೊಳ್ಳುವುದು ಅನುಮಾನ.

೪. ಸಿದ್ದಾರ್ಥ್ ಕೌಲ್- ಸಿರಾಜ್ ಅವರ ಬದಲಿಗೆ ಸಿದ್ದಾರ್ಥ್ ಕೌಲ್ ಒಂದು ಪಂದ್ಯ ಆಡಿದ್ದಾರೆ. ಅದು ಕೂಡ ಗುಜರಾತ್ ಟೈಟನ್ ಜೊತೆಗಿನ ಪಂದ್ಯದಲ್ಲಿ. ೩೨ ವರ್ಷದ ಈ ಆಟಗಾರ ನೀಡಿದ್ದು ಬರೋಬ್ಬರಿ ೪೩ ರನ್ ಗಳು. ಒಂದು ವಿಕೆಟ್ ಕೂಡ ಪಡೆಯಲು ಸಾಧ್ಯವಾಗಿಲ್ಲ. ಇದೆ ಕಾರಣಕ್ಕೆ ಮುಂದೆ ಯಾವುದೇ ಪಂದ್ಯದಲ್ಲಿ ಇವರು ಕಾಣಿಸಿರಲಿಲ್ಲ. ಇವರನ್ನು ಪ್ಲೇಯಿಂಗ್ ೧೧ ಇಂದ ಕೈಬಿಡಲಾಗಿತ್ತು. ಕೌಲ್ ಒಟ್ಟು ೫೫ ಐಪಿಎಲ್ ಪಂದ್ಯಗಳಲ್ಲಿ ೫೮ ವಿಕೆಟ್ ಪಡೆದಿದ್ದಾರೆ. ಇವರ ಎಕಾನಮಿ ರೇಟ್ ೮.೬೩. ಇವರು ಕೂಡ ಮುಂದಿನ ಬಾರಿ RCB ಪರ ಆಡುವುದು ಅನುಮಾನ.

೫. ಜಾಸನ್ ಬೆಹ್ರೆಂಡಾರ್ಫ್- ಇವರು ಕೂಡ ಆಸ್ಟ್ರೇಲಿಯಾದ ವೇಗಿ, ಇವರು ಹಿಂದೆ ಚೆನ್ನೈ ಹಾಗು ಮುಂಬೈ ಪರ ಆಡಿದ್ದಾರೆ. ಆ ತಂಡಗಳಲ್ಲಿ ಅವಕಾಶ ಸಿಕ್ಕಿದೆ, ಆದರೆ ಬೆಂಗಳೂರು ತಂಡದಲ್ಲಿ ಇದ್ದರು ಕೂಡ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಗಲಿಲ್ಲ. ಇವರನ್ನು ಡೇವಿಡ್ ಮಿಲ್ಲೆ ಬದಲಿಗೆ ತಂಡದಲ್ಲಿ ಪಡೆದುಕೊಳ್ಳಬಹುದಿತ್ತು ಎಂದು ಅನೇಕರು ಹೇಳಿದ್ದರು. ಆದರೆ ಪಫ್ ಡು ಪ್ಲೆಸಿಸ್ ತಂಡಕ್ಕೆ ಆಯ್ಕೆ ಮಾಡಿಕೊಳ್ಳಲಿಲ್ಲ. ಈ ಬಾರಿ ಅವರ ಪ್ರದರ್ಶನ ಹೇಗೆ ಇರಬಹುದು ಎಂದು ಅಭಿಮಾನಿಗಳಿಗೆ ನೋಡಲು ಸಾಧ್ಯವಾಗಲಿಲ್ಲ. ಇದೆ ಕಾರಣಕ್ಕೆ ಮುಂಬರುವ ಆವೃತ್ತಿಯಲ್ಲೂ ಫಾಫ್ ನಾಯಕನಾಗಿರುವ ಕಾರಣ ಜಾಸನ್ ಅವರನ್ನು ಮುಂದಿನ ಐಪಿಎಲ್ ಗೆ RCB ಕೈ ಬಿಡುವ ಸಾಧ್ಯತೆ ಇದೆ.

Leave A Reply

Your email address will not be published.