ಮುಂದಿನ ಐಪಿಎಲ್ ಪಂದ್ಯಗಳು Hotstar ಅಲ್ಲಿ ಪ್ರಸಾರವಾಗುವುದಿಲ್ಲ. ಮತ್ತೆ ಹೇಗೆ ನೋಡುವುದು? ಇಲ್ಲಿದೆ ಮಾಹಿತಿ.

240

ಇಂಡಿಯನ್ ಪ್ರೀಮಿಯರ್ ಲೀಗ್ ಭಾರತದ ಅತ್ಯಂತ ಹೆಚ್ಚು ವೀಕ್ಷಣೆಗೆ ಒಳಗಾಗುವ ಪಂದ್ಯ, ಹಾಗೆನೆ ಅತೀ ಹೆಚ್ಚು ಶ್ರೀಮಂತ ಟೂರ್ನಮೆಂಟ್ ಎಂದರೆ ತಪ್ಪಾಗಲಾರದು. ಈ ಐಪಿಎಲ್ ಟೂರ್ನಮೆಂಟ್ ಅಲ್ಲಿ ತೆರಿಗೆ ಕೂಡ ಇರುವುದಿಲ್ಲ. ಇದೆ ಕಾರಣಕ್ಕೆ ಇದೊಂದು ಅತ್ಯಂತ ಶ್ರೀಮಂತ ಲೀಗ್. ದೂರದರ್ಶದಲ್ಲಿ ನೋಡುವವರ ಸಂಖ್ಯೆ ಬಹಳಾನೇ ಇದೆ. ಆದರೆ ಅದಕ್ಕೆ ಸಮನಾಗಿಯೇ ಡಿಜಿಟಲ್ ಪ್ಲಾಟ್ಫಾರ್ಮ್ ಅಂದರೆ OTT ಗಳಲ್ಲೂ ಕೂಡ ಈ ಐಪಿಎಲ್ ನೇರ ಪಂದ್ಯ ಪ್ರಸಾರವಾಗುತ್ತದೆ. ಈ ಪ್ರಸಾರಕ್ಕೆ ಬೇಡಿಕೆ ತುಂಬಾ ಇದೆ.

ಇಲ್ಲಿಯವರೆಗೆ ಹಾಟ್ ಸ್ಟಾರ್ ಹಾಗು ಸ್ಟಾರ್ ಸ್ಪೋರ್ಟ್ಸ್ ಅಲ್ಲಿ ಐಪಿಎಲ್ ನೇರ ಪ್ರದರ್ಶನ ಕಾಣುತಿತ್ತು. ಇದೀಗ ಅದು ಬದಲಾಗುತ್ತಿದೆ. ಕಾರಣ ಈ ಪ್ರಸರಣದ ಹಕ್ಕಿನ ಸಮಯ ಮುಕ್ತಾಯವಾಗಿದೆ. ಈ ಐಪಿಎಲ್ ಮುಖ್ಯವಾಗಿ ನಾಲ್ಕು ಹಂತಗಳಲ್ಲಿ ಪ್ರಸಾರವಾಗುತ್ತದೆ. ಅದೇ ರೀತಿ ಈ ನಾಲ್ಕು ಹಂತಕ್ಕೂ ಒಂದೊಂದು ಬೆಲೆ ನಿಗದಿ ಮಾಡಲಾಗುತ್ತದೆ. ಈ ನಿಗದಿ ಪಡಿಸಿದ ಬೆಲೆಗಿಂತ ಹೆಚ್ಚು ಯಾರು ಹಣ ಕೊಡುತ್ತಾರೆ ಅವರಿಗೆ ಈ ಪ್ರಸರಣ ಹಕ್ಕು ದೊರಕುತ್ತದೆ. ಮೊದಲನೆಯದಾಗಿ ಟೆಲಿವಿಷನ್ ಅಂದರೆ ಟಿವಿ ಹಕ್ಕುಗಳಿಗೆ ಇರುವ ಪ್ಯಾಕೇಜ್ A ಬರೋಬ್ಬರಿ 23575 ಕೋಟಿಗೆ ಮಾರಾಟವಾಗಿದೆ. ಅಂದರೆ ಪ್ರತಿ ಪಂದ್ಯದ ಬೆಲೆ ೫೭.೫ ಕೋಟಿ ರೂಪಾಯಿಗಳು.

ಇನ್ನು ಡಿಜಿಟಲ್ ಹಕ್ಕು ಅಂದರೆ OTT ಪ್ರಸಾರಣಕ್ಕಾಗಿ ೨೦,೫೦೦ ಕೋಟಿ ರುಪಾಯಿಗೆ ಮಾರಾಟವಾಗಿದೆ ಪ್ರತಿ ಪಂದ್ಯಕ್ಕೆ 50 ಕೋಟಿ ರೂಪಾಯಿ ಬೆಲೆಯಲ್ಲಿ. ಇನ್ನು ಪ್ಯಾಕೇಜ್ ಸಿ ಇದು ನೋನ್ ಎಕ್ಸ್ಕ್ಲೂಸಿವ್ ಪಂದ್ಯಗಳು ಅಂದರೆ ಪ್ಲೇ ಆಫ್ ಹಾಗು ಫೈನಲ್ ಪಂದ್ಯಗಳನ್ನು ಒಳಗೊಂಡಂತೆ ಆಯ್ದ ೯೮ ಒಅಂದ್ಯಗಳ ಹಕ್ಕುಗಳು ಇದರಲ್ಲಿ ಸೇರಿದೆ. ಇದರ ಹರಾಜು ಪ್ರಕ್ರಿಯೆ ನಡೆಯಿತ್ತಿದೆ ಹಾಗೇನೇ ಪ್ಯಾಕೇಜ್ ಡಿ ಹರಾಜು ಕೂಡ ನಡೆಯಬೇಕಿದೆ. ಪ್ಯಾಕೇಜ್ A ಅಂದರೆ ಟಿವಿ ಪ್ರದರ್ಶನ ಹಕ್ಕು ಸೋನಿ ಸಂಸ್ಥೆಗೆ ಸಿಕ್ಕಿದೆ. ಹಾಗೇನೇ ಡಿಜಿಟಲ್ ಪ್ರಸರಣ ಹಕ್ಕು ರಿಲಯನ್ಸ್ ನೇತೃತ್ವದ ವಿಯಾಕಂ 18 ಸಂಸ್ಥೆಗೆ ಸೇರಿದೆ. ಇನ್ನುಉಳಿದ ಎರಡು ಹಂತಗಳ ಪ್ರಸರಣ ಹಕ್ಕು ಯಾರಿಗೆ ಸಿಕ್ಕಿದೆ ಎಂದು ಇನ್ನು ಗೊತ್ತಾಗಬೇಕಿದೆ ಅಷ್ಟೇ.

ಈಗಾಗಲೇ ಹೇಳಿದ ಹಾಗೆ ಈ ಬಾರಿ ಹರಾಜಿನಲ್ಲಿ 2018 ಕ್ಕೆ ಹೋಲಿಸಿದರೆ ಮೂರೂ ಪಟ್ಟು ಹೆಚ್ಚು ಹಣ ಬಿಸಿಸಿಐ ಗೆ ಹರಿದು ಬಂದಿದೆ. ಅಂದರೆ ೨೦೧೮ ರಲ್ಲಿ ೧೬,೩೪೭ ಕೋಟಿಗೆ ಮಾರಾಟವಾಗಿದ್ದರೆ, ಈ ಬಾರಿ ೨೩,೫೭೫ ಕೋಟಿಗೆ ಮಾರಾಟವಾಗಿದೆ. ಇನ್ನು ಡಿಜಿಟಲ್ ಹಕ್ಕು ಮೂಲ ಬೆಲೆ ಪ್ರತಿ ಪಂದ್ಯಕ್ಕೆ 33 ಕೋಟಿ ನಿಗದಿ ಮಾಡಲಾಗಿತ್ತು, ಆದರೆ ಈ ಬಾರಿ ಇದರ ಹರಾಜು 50 ಕೋಟಿ ಗೆ ಏರಿದೆ. ಇದು ಬರೋಬ್ಬರಿ ೫೧% ಏರಿಕೆಯಾಗಿದೆ. ಮುಂದಿನ ಐಪಿಎಲ್ ಪಂದ್ಯ ಮುಂದೆ ಜಿಯೋ ಟಿವಿ ಅಲ್ಲಿ ಬರಲಿದೆ. ಇಲ್ಲಯವರೆಗೆ ಹಾಟ್ ಸ್ಟಾರ್ ಅಲ್ಲಿ ಪ್ರಸಾರವಾಗುತ್ತಿತ್ತು. ಇನ್ನು ಮುಂದೆ ಜಿಯೋ ಮೂಲಕನೇ ಈ ಪಂದ್ಯಗಳನ್ನು ವೀಕ್ಷಿಸಲು ಸಾಧ್ಯವಾಗುತ್ತದೆ. ಇದು ಫ್ರೀ ಇರಲಿದೆಯಾ ಅಥವಾ ಹಣ ಕೊಟ್ಟು ಮೆಂಬರ್ ಆಗಬೇಕಾ ಎನ್ನುವುದು ಇನ್ನು ಗೊತ್ತಾಗಬೇಕಿದೆ.

Leave A Reply

Your email address will not be published.