ಮುಂದಿನ ವರ್ಷ ಕೂಡ ಚೆನ್ನೈ ಪರವಾಗಿಯೇ ಆಡಲಿದ್ದಾರೆ ಧೋನಿ. ನಿವೃತ್ತಿ ಬಗ್ಗೆ ಮಾತಾಡಿದ ಕ್ಯಾಪ್ಟನ್ ಕೂಲ್.

222

ಈ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಕೊನೆಯ ಪಂದ್ಯ ಆಡಿದ ಚೆನ್ನೈ ತಂಡ ಹಾಗು ರಾಜಸ್ತಾನ್ ಜೊತೆ ನಿನ್ನೆ ನಡೆದಿತ್ತು. ಇದೆ ಸಮಯದಲ್ಲಿ ಇಯಾನ್ ಬಿಷಪ್ ಅವರು ಧೋನಿ ನಿವೃತ್ತಿ ಬಗ್ಗೆ ಪ್ರಶ್ನಿಸಿದ್ದರು. ಧೋನಿ ತಮ್ಮ ನಿವೃತ್ತಿ ಗುಸುಗುಸು ಗೆ ಒಂದು ಫುಲ್ ಸ್ಟಾಪ್ ಇಟ್ಟಿದ್ದಾರೆ. ಮುಂದಿನ ಬಾರಿ ಇನ್ನು ಹೆಚ್ಚು ಬಲಿಷ್ಠವಾಗಿ ಮೈದಾನಕ್ಕೆ ಬರಲಿದ್ದೇನೆ ಎಂದು ಹೇಳಿದ್ದಾರೆ. ಅದೇ ರೀತಿ ನಾನು ಚೆನ್ನೈ ಅಭಿಮಾನಿಗಳಿಗೆ ಅವರ ತವರಲ್ಲಿ ಧನ್ಯವಾದ ಹೇಳದೆ ಇದ್ದಾರೆ ತಪ್ಪಾಗುತ್ತದೆ ಎಂದಿದ್ದಾರೆ ಧೋನಿ.

ಚೆನ್ನೈ ಅಲ್ಲಿ ಆಡದೆ ಅಭಿಮಾನಿಗಳಿಗೆ ಅವರ ತವರಲ್ಲೇ ಧನ್ಯವಾದ ಹೇಳದೆ ನಿವೃತ್ತಿ ಘೋಷಿಸುವುದು ತಪ್ಪು. ಮುಂಬೈ ಒಂದು ಸ್ಥಳ, ಆದರೆ ಒಂದು ತಂಡದ ಸದಸ್ಯನಾಗಿ, ಒಬ್ಬ ವ್ಯಕ್ತಿಯಾಗಿ ನನಗೆ ಹೆಚ್ಚು ಪ್ರೀತಿ ಸಿಕ್ಕಿದ್ದು ಚೆನ್ನೈ ಅಲ್ಲಿ. ಅದೇ ಕಾರಣಕ್ಕೆ ಅವರ ತವರಲ್ಲಿ ಹೇಳದೆ ನಿವೃತ್ತಿ ಪಡೆಯುವುದು ಸರಿಯಲ್ಲ. ಮುಂದಿನ ವರ್ಷದಲ್ಲಿ ನಾನು ತಂಡದಲ್ಲಿ ಇರಲಿದ್ದೇನೆ, ಆ ಸಮಯದಲ್ಲಿ ಎಲ್ಲ ಕಡೆಯೂ ಐಪಿಎಲ್ ನಡೆಯಲಿದೆ. ಆ ಸಮಯದಲ್ಲಿ ಎಲ್ಲ ಕಡೆ ಸಂಚರಿಸಿ ಎಲ್ಲರಿಗು ಧನ್ಯವಾದ ಹೇಳುವ ಅವಕಾಶ ಸಿಗಲಿದೆ. ಮುಂದಿನ ವರ್ಷದಿಂದ ತವರು ಅಂಗಳದಲ್ಲಿ ಕೂಡ ಪಂದ್ಯ ನಡೆಯಲಿದೆ ಹಾಗೇನೇ ಬೇರೆ ಸ್ಥಳಗಳಲ್ಲಿ ಕೂಡ ನಡೆಯಲಿದೆ.

ಆದ್ದರಿಂದ ಮುಂದಿನ ಆವೃತ್ತಿಯಲ್ಲಿ ಒಂದು ತರಹ ಪಾನ್ ಇಂಡಿಯಾ ಥ್ಯಾಂಕ್ಸ್ ಗಿವಿಂಗ್ ಆಗಿರಲಿದೆ ಎಂದು ಧೋನಿ ಹೇಳಿದ್ದಾರೆ. ಆದರೆ ಮುಂದಿನ ವರ್ಷ ನಿವೃತ್ತಿ ಪಡೆಯುತ್ತೇನೆ ಎಂದು ಎಲ್ಲೂ ಧೋನಿ ಹೇಳಿಲ್ಲ, ಮುಂದಿನ ಆವೃತ್ತಿಗೆ ಇನ್ನು ಬಲಿಷ್ಠನಾಗಿ ತಂಡವನ್ನು ಮುಂದುವರೆಸುತ್ತೇನೆ ಎಂದು ಹೇಳಿದ್ದಾರೆ. ಮುಂದಿನದನ್ನು ಖಚಿತವಾಗಿ ಹೇಳಲು ಯಾರಿಂದಲೂ ಸಾಧ್ಯವಿಲ್ಲ, ಹಾಗಾಗಿ ಮುಂದಿನ ಆವೃತ್ತಿ ಬಗ್ಗೆ ಸ್ಟ್ರಾಂಗ್ ಆಗಿ ಬರಲಿದ್ದೇನೆ ಎಂದು ಅಷ್ಟೇ ಹೇಳುತ್ತೇನೆ ಎಂದು ಹೇಳುತ್ತಾ ತಮ್ಮ ನಿವೃತ್ತಿ ವಿಷಯ ಮತ್ತೊಮ್ಮೆ ನಿಗೂಢವಾಗಿ ಇರಿಸಿದ್ದಾರೆ.

ಈ ಆವೃತ್ತಿಯಲ್ಲಿ ರವೀಂದ್ರ ಜಡೇಜಾ ಅವರು ನಾಯಕರಾಗಿದ್ದರು. ಆದರೆ ಅವರ ನಾಯಕತ್ವದಲ್ಲಿ ಒಂದೇ ಒಂದು ಪಂದ್ಯ ಗೆಲ್ಲಲು ಸಾಧ್ಯವಾಗಿಲ್ಲ. ಈ ಪಂದ್ಯ ಧೋನಿ ಅವರದ್ದು ಕೊನೆಯ ಐಪಿಎಲ್ ಆಗಿರಬಹುದು ಅದೇ ಕಾರಣಕ್ಕೆ ಜಡೇಜಾ ಅವರನ್ನು ನಾಯಕರನ್ನಾಗಿ ಮಾಡಿರಬೇಕು ಎಂದು ಎಲ್ಲರು ಊಹಿಸಿದ್ದರು. ಆದರೆ ಜಡೇಜಾ ಅವರ ನಾಯಕತ್ವ ಅಷ್ಟು ಉತ್ತಮವಾಗಿಲ್ಲದೆ ಇದ್ದಿದ್ದರಿಂದ ಅವರನ್ನು ತೆಗೆದು ಮತ್ತೊಮ್ಮೆ ಧೋನಿ ಅವರನ್ನು ನಾಯಕರನ್ನಾಗಿ ಮಾಡಿತು ಚೆನ್ನೈ ಆಡಳಿತ ಮಂಡಳಿ. ಆದರೆ ನಂತರವೂ ಹೇಳಿಕೊಳ್ಳುವಂತಹ ಪ್ರದರ್ಶನ ಬರದೇ ಈ ಬಾರಿ ಚೆನ್ನೈ ಪ್ಲೇ ಆಫ್ ಗೆ ತಲುಪಲು ಸಾಧ್ಯವಾಗಿಲ್ಲ.

Leave A Reply

Your email address will not be published.