ಮೂವರು ಆಟಗಾರರಿಗೆ ಅನ್ಯಾಯ ಮಾಡಿ ಬಿಟ್ಟ ಭಾರತದ ಹಂಗಾಮಿ ನಾಯಕ ಧವನ್: ಅದ್ಯಾಕೆ ಅಂತೇ ಗೊತ್ತೇ??

126

ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ಈಗಾಗಲೇ ಎರಡು ಪಂದ್ಯಗಳು ನಡೆದಿದೆ. ಒಟ್ಟು ಮೂರು ಪಂದ್ಯಗಳ ODI ಸರಣಿಯ ಕೊನೆಯ ಒಂದು ಪಂದ್ಯ ನಡೆಯಬೇಕಿದೆ. ಈ ಸರಣಿಯ ಕೊನೆಯ ಪಂದ್ಯವು ಟೀಮ್ ಇಂಡಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆಯುತ್ತಿದೆ. ಶಿಖರ್ ಧವನ್ ಟೀಮ್ ಇಂಡಿಯಾ ನಾಯಕತ್ವ ವಹಿಸಿಕೊಂಡಿದ್ದಾರೆ. ಕಳೆದ ಪಂದ್ಯದಲ್ಲಿ ಆಡುವ ಹನ್ನೊಂದರಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಶಿಖರ್ ಧವನ್ ಈ ನಡೆಯಿಂದಾಗಿ ಮೂರು ಆಟಗಾರರು ಈ ಪಂದ್ಯದಲ್ಲಿಯು ಪಾದರ್ಪಣೆ ಮಾಡಲಾಗದೆ ಸರಣಿಯಿಂದ ಹೊರಗೆ ನಡೆದಿದ್ದಾರೆ. ಆ ಮೂರು ಆಟಗಾರರು ಯಾರು ಎಂಬ ಮಾಹಿತಿ ಇಲ್ಲಿದೆ.

ರಾಹುಲ್ ತ್ರಿಪಾಠಿ ಅವರು ಈ ಸರಣಿಯ ಆಡಲು ಸಾಧ್ಯವಾಗುತ್ತಿಲ್ಲ. 31ರ ಹರೆಯದ ಅದ್ಭುತ ಬ್ಯಾಟ್ಸ್ಮನಾದ ಅವರು ಈ ಸರಣಿಗೆ ಪ್ರವೇಶ ಪಡೆಯುತ್ತಾರೆ ಎಂದು ನಿರೀಕ್ಷೆ ಇತ್ತು, ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನದ ನಂತರ ರಾಹುಲ್ ತ್ರಿಪಾಠಿ ಟೀಮ್ ಇಂಡಿಯಾಗೆ ಪ್ರವೇಶ ಪಡೆಯುವ ಅವಕಾಶ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿತ್ತು. ಈ ಸರಣಿಗೆ ಮೊದಲು ಅವರನ್ನು ಮೂರು ಸರಣಿ ಅವರನ್ನು ಮೂರು ಸರಣಿಗಳಲ್ಲಿಯೂ ಭಾರತ ತಂಡದ ಭಾಗವಾಗಿ ಮಾಡಲಾಯಿತು. ಆದರೆ ಈ ಎಲ್ಲಾ ಸರಣಿಗಳಲ್ಲಿಯೂ ಅವರು ಬೆಂಚ್ ಮೇಲೆ ಕೂರಬೇಕಾಯಿತು.

ರಜತ್ ಪಟಿದಾರ್ ಕೂಡ ಈ ಸರಣಿಯಲ್ಲಿ ತಮ್ಮ ಚೊಚ್ಚಲ ಪಂದ್ಯ ಆಡಲಾಗಲಿಲ್ಲ. ಐಪಿಎಲ್ 2022 ರಲ್ಲಿ ರಜತ್ ಎಂಟು ಪಂದ್ಯಗಳಲ್ಲಿ 55.50 ಸರಾಸರಿಯಲ್ಲಿ ಒಂದು ಶತಕ ಮತ್ತು ಎರಡು ಅರ್ಧ ಶತಕಗಳೊಂದಿಗೆ 333 ರನ್ ಗಳಿಸಿದ್ದರು. ಸ್ಟೈಲಿಶ್ ಹಿಟ್ಟರ್ ಅಂತಲೇ ಕರೆಸಿಕೊಳ್ಳುವ ಇಂದೋರ್ ನ 29 ವರ್ಷದ ರಜತ್ ಪಟಿದಾರ್ ಐಪಿಎಲ್ ಪ್ಲೇ ಆಫ್ ಪಂದ್ಯ ರಣಜಿ ಟ್ರೋಫಿ ಫೈನಲ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ನಲ್ಲಿ ರಜತ್ ಶತಕ ಗಳಿಸಿದ್ದರು.

ಬಂಗಾಳದ ವೇಗದ ಬೌಲರ್ ಮುಖೇಶ್ ಕುಮಾರ್ ಕೂಡ ಈ ಸರಣಿಯ ಚೊಚ್ಚಲ ಪಂದ್ಯದಲ್ಲಿ ಆಡಲಾಗಲಿಲ್ಲ. ಬಲಗೈ ವೇಗದ ಬೌಲರ್ ಹಾಗೂ ಎಡಗೈ ಬ್ಯಾಟ್ಸ್ಮನ್ ಆಗಿರುವ ಅವರಿಗೆ ಮೊದಲ ಬಾರಿಗೆ ಟೀಮ್ ಇಂಡಿಯಾದಲ್ಲಿ ಅವಕಾಶ ನೀಡಲಾಗಿದೆ. ಈ ಬಾರಿಯ ರಣಜಿ ಟ್ರೋಫಿಯಲ್ಲಿ ಬಂಗಾಳ ಪರ ಮುಕೇಶ್ 20 ವಿಕೆಟ್ ಕಬಳಿಸಿದ್ದರು. ಇತ್ತೀಚಿನ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲೂ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಈ ಮೂವರು ಆಟಗಾರರಿಗೆ ಅವರ ಸಾಮರ್ಥ್ಯ ತಕ್ಕ ಅವಕಾಶ ಸಿಗದೆ ಅನ್ಯಾಯ ಆದಂತಾಗಿದೆ.

Leave A Reply

Your email address will not be published.