ಮೊದಲ ಬಾರಿಗೆ ಬಿಸಿಸಿಐ ವಿರುದ್ಧ ಬಹಿರಂಗವಾಗಿ ಕಿಡಿ ಕಾರಿದ ಸುನಿಲ್ ಗವಾಸ್ಕರ್. ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಸುನಿಲ್ ಗವಾಸ್ಕರ್, ಭಾರತ ಕ್ರಿಕೆಟ್ ತಂಡ ಕಂಡ ಶ್ರೇಷ್ಠ ಆಟಗಾರ. ಹಲವಾರು ದಾಖಲೆಗಳನ್ನು ತನ್ನ ಹೆಸರಿಗೆ ದಾಖಲಿಸಿಕೊಂಡ ಆಟಗಾರ ಸಹ. ಸದ್ಯ ಕ್ರಿಕೆಟ್ ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಆಗಾಗ ತನ್ನ ಅಭಿಪ್ರಾಯಗಳನ್ನು ಮುಕ್ತವಾಗಿ ದಾಖಲಿಸುವ ಸುನಿಲ್ ಗವಾಸ್ಕರ್ ಈಗ ಬಿಗ್ ಬಾಸ್ ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ. ಯಾವ ಕಾರಣಕ್ಕೆ ಎಂಬುದನ್ನು ತಿಳಿಯೋಣ ಬನ್ನಿ.
ಅಷ್ಟಕ್ಕೂ ಸುನಿಲ್ ಗವಾಸ್ಕರ್ ಕೋಪಕ್ಕೆ ಪ್ರಮುಖ ಕಾರಣ, ಬಿಸಿಸಿಐ ತಂಡದ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡುತ್ತಿರುವುದು. ಹೌದು ಭಾರತ ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸಪ್ರಿತ್ ಬುಮ್ರಾ, ಮಹಮದ್ ಶಮಿ ಏಕದಿನ ಹಾಗೂ ಟಿ 20 ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ಮುಂದಿನ ತಿಂಗಳು ಆಯೋಜನೆಗೊಳ್ಳಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೂ ಸಹ ಈ ಆಟಗಾರರಿಗೆ ವಿಶ್ರಾಂತಿ ನೀಡಿದೆ.
ಈ ಬಗ್ಗೆ ಪ್ರಶ್ನಿಸಿರುವ ಗವಾಸ್ಕರ್, ಐಪಿಎಲ್ ನಂತಹ ಟೂರ್ನಿಯಲ್ಲಿ ಆಟಗಾರಿಗೆ ಆಡಲು ದಣಿವು ಆಗದಿಲ್ಲ. ಆದರೇ ಭಾರತ ತಂಡದ ಪರ ಆಡಲು ವಿಶ್ರಾಂತಿ ತೆಗೆದುಕೊಳ್ಳುತ್ತಾರೆ. ಇದು ತಪ್ಪು. ಬಿಸಿಸಿಐ ಇಂತಹ ನಿರ್ಧಾರ ತೆಗೆದುಕೊಳ್ಳಬಾರದು. ಫಾರ್ಮ್ ನಲ್ಲಿ ಇಲ್ಲದ ಆಟಗಾರರು ಫಾರ್ಮ್ ಗೆ ಮರಳಲು ವಿಶ್ರಾಂತಿ ಅಗತ್ಯವಿಲ್ಲ. ಬದಲಿಗೆ ಹೆಚ್ಚೆಚ್ಚು ಕ್ರಿಕೆಟ್ ಆಡಿದರೇ ಮಾತ್ರ ಫಾರ್ಮ್ ಗೆ ಮರಳುವ ಸಾಧ್ಯತೆ ಇದೆ. ಹಾಗಾಗಿ ಹಿರಿಯ ಕ್ರಿಕೆಟ್ ಆಟಗಾರರಿಗೆ ವಿಶ್ರಾಂತಿ ನೀಡುವಲ್ಲಿ ಬಿಸಿಸಿಐ ತನ್ನ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.