ಯಾರಿಗೂ ಕಂಡು ಹಿಡಿಯದ ಸಮಸ್ಯೆ ಬಗ್ಗೆ ಧ್ವನಿ ಎತ್ತಿದ ಮಾಜಿ ಕ್ರಿಕೆಟಿಗ: ಭಾರತಕ್ಕೆ ಇರುವ ಅತಿ ದೊಡ್ಡ ಸಮಸ್ಯೆ ಯಾವುದು ಅಂತೇ ಗೊತ್ತೇ??
ಭಾರತ ತಂಡವು ಪ್ರಸ್ತುತ ಏಷ್ಯಾಕಪ್ 2022 ಪಂದ್ಯಗಳನ್ನು ಆಡುತ್ತಿದ್ದು, ಮುಂದಿನ ತಿಂಗಳಿನಿಂದ ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲಿದೆ. ಏಷ್ಯಾಕಪ್ ಪಂದ್ಯಗಳಲ್ಲಿ ಸೂಪರ್ 4 ಹಂತದಲ್ಲಿ ಪಾಕಿಸ್ತಾನ್ ವಿರುದ್ಧ ಆಡಿದ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿತು. ಉತ್ತಮವಾದ ಸ್ಕೋರ್ ಮಾಡಿದ್ದರು ಸಹ, ಭಾರತ ಗೆಲ್ಲಲು ಸಾಧ್ಯವಾಗಲಿಲ್ಲ. ಅದಕ್ಕೆ ಕಾರಣ ಕಳಪೆ ಬೌಲಿಂಗ್ ಪ್ರದರ್ಶನ. ಆದರೆ ಭಾರತದ ಆರಂಭಿಕ ಬ್ಯಾಟ್ಸ್ಮನ್ ಗಳ ಬಗ್ಗೆ ಭಾರತದ ಮಾಜಿ ಆಟಗಾರ ಕಳವಳ ವ್ಯಕ್ತಪಡಿಸಿದ್ದಾರೆ..
ಭಾರತದ ಮಾಜಿ ಆಟಗಾರ ಅಂಶುಮಾನ್ ಗಾಯಕ್ವಾಡ್ ಅವರು ಭಾರತ ತಂಡದ ಮಾಜಿ ಆಟಗಾರರು ಒಳ್ಳೆಯ ರೀತಿಯಲ್ಲಿ ಆಟ ಆಡಬೇಕು ಎಂದಿದ್ದಾರೆ, ಟಾಪ್ 3 ಕ್ರಮದಲ್ಲಿರುವ ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ಹಾಗೂ ವಿರಾಟ್ ಕೋಹ್ಲಿ, ಇವರಲ್ಲಿ ವಿರಾಟ್ ಕೋಹ್ಲಿ ಅವರು ಈಗ ಲಯ ಕಂಡುಕೊಳ್ಳುತ್ತಿದ್ದಾರೆ, ಮೊನ್ನೆ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಕೋಹ್ಲಿ 44 ಬಾಲ್ ಗಳಲ್ಲಿ 60 ರನ್ ಗಳಿಸಿದರು, ಆದರೆ ಅವರು ಇನ್ನು ಅಬ್ಬರದ ಬ್ಯಾಟಿಂಗ್ ಮಾಡಬೇಕು ಎಂದಿದ್ದಾರೆ ಅಂಶುಮಾನ್. ಆದರೆ ಕೆ.ಎಲ್.ರಾಹುಲ್ ಹಾಗೂ ರೋಹಿತ್ ಶರ್ಮಾ ಈಗಲೂ ರನ್ ಗಳಿಸಲು ಕಷ್ಟಪಡುತ್ತಿದ್ದಾರೆ.
ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಇವರಿಬ್ಬರು ಉತ್ತಮ ರೀತಿಯಲ್ಲೇ ಆರಂಭಿಸಿದರು, 16 ಬಾಲ್ ಗಳಲ್ಲಿ ರೋಹಿತ್ ಶರ್ಮಾ 28 ರನ್ ಭಾರಿಸಿದರು, ಇದರಲ್ಲಿ 3 ಫೋರ್ ಹಾಗೂ 1 ಸಿಕ್ಸರ್ ಇತ್ತು. ಇನ್ನು ಕೆ.ಎಲ್.ರಾಹುಲ್ ಅವರು 12 ಬಾಲ್ ಗಳಲ್ಲಿ 28 ರನ್ ಗಳಿಸಿ ಕ್ರೀಸ್ ಗೆ ಹೋದರು. ಇವರೆಲ್ಲರೂ ಟಿ20 ವಿಶ್ವಕಪ್ ಪಂದ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಆಡಬೇಕು, ಒಳ್ಳೆಯ ಲಯ ಕಂಡುಕೊಳ್ಳಬೇಕು. ಓಪನರ್ ಗಳಾಗಿ ಈ ರೀತಿಯ ಪ್ರದರ್ಶನ ನೀಡಿದರೆ ತಂಡಕ್ಕೆ ಸಮಸ್ಯೆ ಆಗುತ್ತದೆ ಎಂದು ಹೇಳಿದ್ದಾರೆ ಅಂಶುಮಾನ್ ಗಾಯಕ್ವಾಡ್.