ಯುವಿ ವಿವಾದಾತ್ಮಕ ಹೇಳಿಕೆ. ಭಾರತದ ತಂಡದ ಅಭಿಮಾನಿಗಳಲ್ಲಿ ನಿರಾಸೆ. ಹೀಗ್ಯಾಕೆ ಹೇಳಿದ್ರು ಯುವರಾಜ್ ಸಿಂಗ್?
ಭಾರತ ಹಾಗು ಪಾಕಿಸ್ತಾನದ ನಡುವಿನ ಪಂದ್ಯ ನಿನ್ನೆ ನಡೆದಿದ್ದು ಭಾರತ ೪ ವಿಕೆಟ್ಗಳಿಂದ ಗೆದ್ದು ದೀಪಾವಳಿಗೆ ಭರ್ಜರಿ ಉಡುಗೊರೆ ಕೊಟ್ಟಿದೆ. ಹಾಗೇನೇ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ದಿಂದ ಭಾರತ ಈ ಪಂದ್ಯ ಗೆದ್ದಿದೆ ಎಂದರೆ ತಪ್ಪಾಗಲಾರದು. ತಮ್ಮ ಫಾರಂ ಗೆ ಮರಳಿದ್ದಾರೆ ಕಿಂಗ್ ಕೊಹ್ಲಿ. ಇದರ ಬಗ್ಗೆ ದೇಶ ಹಾಗು ವಿದೇಶದಲ್ಲೂ ಕೂಡ ಜೈಕಾರ ಕೇಳಿ ಬರುತ್ತಿದೆ. ಇದೀಗ ಎಲ್ಲ ಮಾಜಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಹಾಗೇನೇ ಯುವರಾಜ್ ಸಿಂಗ್ ಕೂಡ ಹಂಚಿಕೊಂಡಿದ್ದಾರೆ. ಈ ಕಾರಣಕ್ಕೆ ಯುವಿ ಸದ್ಯಕ್ಕೆ ಟ್ರೊಲ್ ಆಗುತ್ತಿದ್ದಾರೆ.
ಭಾರತ ಹಾಗು ಪಾಕ್ ಪಂದ್ಯದಲ್ಲಿ ಆರ್ ಅಶ್ವಿನ್ ಅವರು ಎರಡು ನಿರ್ಣಾಯಕ ಕ್ಯಾಚ್ ಬಿಟ್ಟಿದ್ದಕ್ಕಾಗಿ ಯುವರಾಜ್ ಸಿಂಗ್ ಅಶ್ವಿನ್ ಅವರನ್ನು ಟೀಕಿಸಿದ್ದಾರೆ. ಕ್ಯಾಚ್ ಬಿಟ್ಟಾಗ ಪಂದ್ಯ ಪಾಕಿಸ್ತಾನದ ಪರವಾಯಿತು. ಇದು ಪಂದ್ಯದ ಗತಿಯನ್ನೇ ಬದಲಾಯಿಸಿತು. ಕ್ಯಾಚ್ ಮ್ಯಾಚ್ ಅನ್ನು ಗೆಲ್ಲಿಸಿಕೊಡುತ್ತದೆ, ಇಂಡಿಯಾ ಈ ಪಂದ್ಯ ಗೆಲ್ಲಬಹುದು ಎನ್ನುವ ನಿರೀಕ್ಷೆ ಇದೆ ಎಂದು ಪಂದ್ಯದ ಮದ್ಯದಲ್ಲಿ ಟ್ವೀಟ್ ಮಾಡಿದ್ದಾರೆ. “I guess the drop catch by r Ashwin ! Has changed the momentum of the game in favour of Pakistan ! Catches win matches !! Hopefully india can pull it back !!’ Come on lads 🤛 #PakVsInd”
ಈ ಟ್ವೀಟ್ ಯಾಕೆ ಇಷ್ಟೊಂದು ಟ್ರೊಲ್ ಆಗ್ತಿದೆ ಅಂದ್ರೆ ಇದೆ ಯುವರಾಜ್ ಸಿಂಗ್ ೨೦೨೨ ರ ಏಷ್ಯಾ ಕಪ್ ಸರಣಿಯಲ್ಲಿ ಪಾಕಿಸ್ತಾನದ ವಿರುದ್ಧ ಪಂದ್ಯದಲ್ಲಿ ಅರ್ಶದೀಪ್ ಸಿಂಗ್ ಕ್ಯಾಚ್ ಬಿಟ್ಟಾಗ ಯುವಿ ಅರ್ಶದೀಪ್ ಅವರನ್ನು ಬೆಂಬಲಿಸಿದ್ದರು. ಸ್ಟೇಡಿಯಂ ಅಲ್ಲಿ ತುಂಬಿರುವ ಅಭಿಮಾನಿಗಳು ಎಲ್ಲರಿಗು ಒತ್ತಡ ಇದ್ದೆ ಇರುತ್ತದೆ ಒಂದು ಕ್ಯಾಚ್ ಕೈ ಬಿಟ್ಟ ತಕ್ಷಣ ಆಟಗಾರನ ಸಾಮರ್ಥ್ಯ ಅಳೆಯಲು ಸಾಧ್ಯವಿಲ್ಲ. ನಾವು ಕ್ರಿಕೆಟ್ ಪ್ರೀತಿಸುವ ದೇಶ, ಹಾಗೇನೇ ನಾವೆಲ್ಲರೂ ಯುವ ಆಟಗಾರನನ್ನು ಟೀಕಿಸುವ ಬದಲು ಬೆಂಬಲಿಸಬೇಕು ಎಂದು ಟ್ವೀಟ್ ಮಾಡಿದ್ದರು. ಅಂದು ಅರ್ಶದೀಪ್ ಕ್ಯಾಚ್ ಬಿಟ್ಟದ್ದಕ್ಕೆ ಬೆಂಬಲಿಸಿದ್ದ ಯುವಿ ಇಂದು ಅಶ್ವಿನ್ ಕ್ಯಾಚ್ ಬಿಟ್ಟದ್ದಕ್ಕೆ ಅಶ್ವಿನ್ ಅವರನ್ನು ಟೀಕಿಸಿದ್ದು, ನೆಟ್ಟಿಗರು ಹಾಗು ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಉಂಟು ಮಾಡಿದೆ.