ರವೀಂದ್ರ ಜಡೇಜಾ ರವರ ಕುಟುಂಬ ಹೇಗಿದೆ ಗೊತ್ತೇ?? ಹೆಣ್ಣು ಮಗುವಿನ ಹೆಸರಿನ ನಿಜವಾದ ಅರ್ಥವೇನು ಗೊತ್ತೇ??

139

ನೀವು ನಿಮ್ಮ ಮನೆಯ ಮುದ್ದಾದ ಹೆಣ್ಣುಮಗುವಿಗೆ ಒಂದು ಸುಂದರವಾದ ಹೆಸರು ಹುದುಕುತ್ತಿದ್ದರೆ, ಭಾರತದ ಅದ್ಭುತ ಆಲ್ ರೌಂಡರ್ ರವೀಂದ್ರ ಜಡೇಜಾ ಅವರ ಮಗಳ ಹೆಸರನ್ನು ಇನ್ಸ್ಪಿರೇಷನ್ ಆಗಿ ತೆಗೆದುಕೊಳ್ಳಬಹುದು. ರವೀಂದ್ರ ಜಡೇಜಾ ಅವರು ತಮ್ಮ ಮುದ್ದು ಮಗಳಿಗೆ ಬಹಳ ಸುಂದರವಾದ ಹೆದರನ್ನೇ ಹುಡುಕಿ ಇಟ್ಟಿದ್ದಾರೆ. ಜಡೇಜಾ ಅವರ ಮಗಳ ಹೆಸರು ನಿಮಗು ಬಹಳ ಇಷ್ಟ ಆಗುವುದು ಖಂಡಿತ. ಇಂದು ನಾವು ನಿಮಗೆ ರವೀಂದ್ರ ಜಡೇಜಾ ಅವರು ತಮ್ಮ ಮಗುವಿಗೆ ಇಟ್ಟಿರುವ ಹೆಸರು, ಹೆಸರಿನ ಅರ್ಥ ಮತ್ತು ರವೀಂದ್ರ ಜಡೇಜಾ ಅವರ ಕುಟುಂಬದ ಬಗ್ಗೆ ತಿಳಿಸುತ್ತೇವೆ..

ಮಕ್ಕಳಿಗೆ ಹೆಸರು ಹುಡುಕಿ ಇಡುವುದು ಬಹಳ ಕಷ್ಟದ ಕೆಲಸಗಳಲ್ಲಿ ಒಂದು, ಕೆಲವರು ಇಂಗ್ಲಿಷ್ ಹೆಸರು ಇಡಲು ಬಯಸಿದರೆ, ಇನ್ನು ಕೆಲವರು ಸಾಂಪ್ರದಾಯಿಕವಾಗಿ ಹೆಸರು ಇಡಲು ಇಷ್ಟಪಡುತ್ತಾರೆ. ಭಾರತದ ಕಿಲಾಡಿ ಆಲ್ ರೌಂಡರ್ ರವೀಂದ್ರ ಜಡೇಜಾ ಅವರು ಸಹ ತಮ್ಮ ಮಗಳಿಗಾಗಿ ಬಹಳ ಹುಡುಕಿ ಯೋಚನೇ ಮಾಡಿ ಸುಂದರವಾದ ಹೆಸರೊಂದನ್ನು ಇಟ್ಟಿದ್ದಾರೆ. ಅವರ ಮಗಳ ಹೆಸರು ಕೇಳಿದರೆ ಅದು ನಿಮಗೆ ಅರ್ಥವಾಗುತ್ತದೆ. ವಿರಾಟ್ ಕೋಹ್ಲಿ ಅವರು ತಮ್ಮ ಮಗಳಿಗೆ ವಮಿಕಾ ಎಂದು ಹೆಸರು ಇಟ್ಟಿದ್ದಾರೆ. ಧೋನಿ ಅವರು ತಮ್ಮ ಮಗಳಿಗೆ Ziva ಎಂದು ಹೆಸರಿಟ್ಟಿದ್ದಾರೆ. ರವೀಂದ್ರ ಜಡೇಜಾ ಅವರ ಮಗಳು ಹುಟ್ಟಿದ್ದು, 2017ರಲ್ಲಿ, ಜಡೇಜಾ ಅವರು ತಮ್ಮ ಮುದ್ದಿನ ಮಗಳಿಗೆ ನಿಧ್ಯಾನ ಎಂದು ಹೆಸರಿಟ್ಟಿದ್ದಾರೆ. ಇದೊಂದು ಸುಂದರವಾದ ಹಿಂದೂ ಧರ್ಮದ ಹೆಸರಾಗಿದೆ.

ಭಾರತೀಯ ಮೂಲದ ಈ ನಿಧ್ಯಾನ ಹೆಸರಿನ ಅರ್ಥ, ಅಂತಃಪ್ರಜ್ಞೆ, ಸಹಜ ಜ್ಞಾನ ಎಂದು. ಜಡೇಜಾ ಅವರು ತಮ್ಮ ಮುದ್ದು ಮಗಳಿಗೆ ಇಟ್ಟಿರುವ ಹಾಗೆ ಸುಂದರವಾದ ಹಿಂದು ಧರ್ಮದ, ಒಳ್ಳೆಯ ಅರ್ಥ ಇರುವ ಹೆಸರುಗಳನ್ನು ನಿಮ್ಮ ಮಗುವಿಗೆ ಇಡಬಹುದು. 33 ವರ್ಷದ ಜಡೇಜಾ ಅವರು ಬಹಳ ಕಷ್ಟದಿಂದ ಬೆಳೆದು ಬಂದವರು, ಇವರ ತಂದೆ ವಾಚ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. 2005ರಲ್ಲಿ ಜಡೇಜಾ ಅವರ ತಾಯಿ ಲತಾ ಅಪಘಾತದಲ್ಲಿ ನಿಧನರಾದರು, ಆಗ ಜಡೇಜಾ ಅವರು ಕ್ರಿಕೆಟ್ ಬಿಡುವ ಮಟ್ಟಕ್ಕೆ ಡಿಪ್ರೆಷನ್ ಗೆ ಹೋಗಿದ್ದರು. ಜಡೇಜಾ ಅವರ ಸಹೋದರಿ ನಯನ ನರ್ಸ್ ಆಗಿದ್ದಾರೆ, 2016ರಲ್ಲಿ ರೀವಾ ಸೋಲಾಂಕಿ ಅವರೊಡನೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಜಡೇಜಾ, ಈ ದಂಪತಿಗೆ ಮಗು ಹುಟ್ಟಿದ್ದು 2017ರಲ್ಲಿ.

Leave A Reply

Your email address will not be published.