ರಿಷಬ್ ಪಂತ್ ಉತ್ತಮ ನಾಯಕನಾಗಲು ಸಾಧ್ಯವಿಲ್ಲ, ಇದಕ್ಕೆ ಸ್ಪಷ್ಟವಾಗಿ ಸಾಕ್ಷ್ಯ ನೀಡುತ್ತಿದೆ ಈ ಮೂರೂ ಕಾರಣಗಳು.

275

ಭಾರತದ ವಿಕೆಟ್ ಕೀಪರ್ ಹಾಗು ಬ್ಯಾಟ್ಸಮನ್ ರಿಷಬ್ ಪಂತ್ ಮೇಲೆ ಎಲ್ಲರ ಕಣ್ಣು ಅವರ ಬ್ಯಾಟಿಂಗ್ ಮೇಲೆ ಇತ್ತು. ಇದೀಗ ವಿಮರ್ಶಕರ ಕಣ್ಣು ಇವರ ನಾಯಕತ್ವದ ಮೇಲೆ ಇದೆ. ಭಾರತದ ಟಿ-೨೦ ನಾಯಕತ್ವ ವಹಿಸಿಕೊಂಡ ರಿಷಬ್ ಪಂತ್ ಇದೀಗ ೫ ಪಂದ್ಯಗಳ ಸರಣಿಯಲ್ಲಿ ಎರಡರಲ್ಲಿ ಗೆದ್ದು ಮುಂದಿನ ಪಂದ್ಯ ಗೆಲ್ಲಲೇ ಬೇಕಾದ ಪರಿಸ್ಥಿತಿ ಇದೆ. ಮೊದಲ ಎರಡು ಪಂದ್ಯದಲ್ಲಿ ಹೀನಾಯವಾಗಿ ಸೋತಿತ್ತು ಭಾರತ ತಂಡ. ಎರಡು ಬಾರಿ ಡೆಲ್ಲಿ ಕ್ಯಾಪಿಟಲ್ ನಾಯಕತ್ವ ವಹಿಸಿಕೊಂಡಿದ್ದ ರಿಷಬ್ ಪಂತ್ ಇದೀಗ ಮೊದಲ ಬಾರಿಗೆ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದು ಎಲ್ಲರ ಗಮನ ಸೆಳೆದಿದೆ.

ಇವರು ಭಾರತ ತಂಡದ ನಾಯಕತ್ವ ವಹಿಸಿಕೊಳ್ಳಲ್ಲು ಅರ್ಹರೇ? ಭಾರತದಲ್ಲೇ ನಡೆಯುತ್ತಿರುವ ಟಿ-೨೦ ಪಂದ್ಯದಲ್ಲಿ ಭಾರತ ಮೊದಲ ಎರಡು ಪಂದ್ಯದಲ್ಲಿ ಸೋತಿದ್ದು ರಿಷಬ್ ಅವರ ನಾಯಕತ್ವದ ಮೇಲೆ ಪ್ರಶ್ನೆ ಮೂಡುವಂತೆ ಮಾಡಿದೆ. ಸದ್ಯ ಭಾರತ ತಂಡ ಸರಣಿ ನಿನ್ನೆಯ ಪಂದ್ಯದ ನಂತರ ಸಮಬಲ ಮಾಡಿಕೊಂಡಿದೆ. ಮುಂದಿನ ಪಂದ್ಯ ಗೆದ್ದರಷ್ಟೇ ದಕ್ಷಿಣ ಆಫ್ರಿಕಾ ವಿರುದ್ದದ ಟಿ-೨೦ ಸರಣಿ ಗೆದ್ದಂತೆ. ರಿಷಬ್ ಅವರು ಉತ್ತಮ ನಾಯಕನಾಗಲು ಸಾಧ್ಯವಿಲ್ಲ ಎಂದು ವಿಮರ್ಶಕರು ಹೇಳುತ್ತಿದ್ದಾರೆ. ಇದಕ್ಕೆ ಕಾರಣ ಕೂಡ ಕೊಟ್ಟಿದ್ದಾರೆ. ಅದೇನು? ಇಲ್ಲಿದೆ ಆ ಮೂರೂ ಮುಖ್ಯ ಕಾರಣಗಳು.

ಟಾಸ್ ಗೆಲ್ಲುವಲ್ಲಿ ಅದೃಷ್ಟ ಕೈ ಹಿಡಿಯುತ್ತಿಲ್ಲ- ಕ್ರಿಕೆಟ್ ಆಟದದಲ್ಲಿ ಅಥವಾ ಯಾವುದೇ ಆಟದಲ್ಲಿ ಕೂಡ ಆಟಗಾರನ ಪ್ರದರ್ಶನ ಜೊತೆಗೆ ಅದೃಷ್ಟವು ಮುಖ್ಯ. ಇದು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ನಾಯಕ ಅದೃಷ್ಟಶಾಲಿಯಾಗಿದ್ದರೆ ಇಡೀ ತಂಡ ಕೂಡ ಅದರ ಲಾಭ ಪಡೆಯಬಹುದು. ಆದರೆ ನಾಯಕ ಇದರ ವಿಷಯದಲ್ಲಿ ಹೆಣಗಾಡಿದರೆ ತಂಡ ಕೂಡ ಅದೇ ರೀತಿ ಆಗಬಹುದು. ರಿಷಬ್ ಪಂತ್ ಟಾಸ್ ಗೆಲ್ಲುವಲ್ಲಿ ವಿಫಲವಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಒಂದು ಬಾರಿಯೂ ಟಾಸ್ ಗೆದ್ದಿಲ್ಲ ರಿಷಬ್ ಪಂತ್. ಇದು ಐಪಿಎಲ್ ಅಲ್ಲೂ ಕೂಡ ಆಗಿದೆ.

ನಾಯಕತ್ವದ ತಲೆಬಿಸಿ ಅವರ ಬ್ಯಾಟಿಂಗ್ ಅಲ್ಲಿ ಕಂಡುಬರುತ್ತಿದೆ- ರಿಷಬ್ ಪಂತ್ ೨೦೧೬ ರಲ್ಲಿ ಐಪಿಎಲ್ ಅಲ್ಲಿ ಪಾದಾರ್ಪಣೆ ಮಾಡಿದ ನಂತರ ತುಂಬಾ ಆಕ್ರಮ-ಣಕರಿ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದವರು. ಇದೆ ರೀತಿ ಅವರು ಇಮೇಜ್ ರೂಪಿಸಿದ್ದರು. ಆದರೆ ಕಳೆದ ವರ್ಷದಲ್ಲಿ ಇವರ ಸ್ಟ್ರೈಕ್ ರೇಟ್ ತುಂಬಾ ಕಡಿಮೆ ಆಗುತ್ತಾ ಹೋಗಿದೆ. ೨೦೨೧ ರಲ್ಲಿ ದೆಹಲಿ ಕ್ಯಾಪಿಟಲ್ ನಾಯಕನಾದ ಮೇಲೆ ಇವರ ಸ್ಟ್ರೈಕ್ ರೇಟ್ ಕೇವಲ 128 ರಲ್ಲಿದೆ. ಹಲವಾರು ನಿರ್ಣಾಯಕ ಪಂದ್ಯದಲ್ಲಿ ಇವರು ಅಲ್ಪ ಮೊತ್ತಕ್ಕೆ ಔಟ್ ಆದ ಘಟನೆಗಳು ಕೂಡ ನಡೆದಿದೆ.

ಮೈದಾನದಲ್ಲಿ ನಿರ್ಧಾರ ಕೊಳ್ಳುವುದರಲ್ಲಿ ಗೊಂದಲ- ರಿಷಬ್ ಪಂತ್ ಅವರ ದೊಡ್ಡ ತಪ್ಪೆಂದರೆ ಬೌಲರ್ಗಳನ್ನು ಸರಿಯಾಗಿ ಬಳಸಿಕೊಳ್ಳುವುದರಲ್ಲಿ ವಿಫಲರಾಗಿದ್ದಾರೆ. ಕೆಲವೊಮ್ಮೆ ತಂಡದಲ್ಲಿ ತೆಗೆದುಕೊಂಡ ನಿರ್ಧಾರಗಳು ತಂಡದ ಪರವಾಗಿ ಹೋಗಿಲ್ಲ. ಇದಕ್ಕೆ ದೊಡ್ಡ ಉದಾಹರಣೆ ೨೦೨೧ ರಲ್ಲಿ ಚೆನ್ನೈ ವಿರುದ್ಧ ನಡೆದ ಫೈನಲ್ ಪಂದ್ಯ ಕಗಿಸೊ ರಾಬಾದ ಬದಲು ಟಾಮ್ ಕರಣ್ ಗೆ ಚೆಂಡನ್ನು ಹಸ್ತಾಂತರಿಸಿದ್ದು. ಅದೇ ರೀತಿ ಈ ಬಾರಿಯ ಐಪಿಎಲ್ ಅಲಿ ರಿಷಬ್ ಪಂತ್ ಕುಲದೀಪ್ ಯಾದವ್ ಅವರಿಗೆ ಹೆಚ್ಚಿನ ಓವರ್ ಹಾಕಲು ಬಿಡಲಿಲ್ಲ. ಇದೆ ತಪ್ಪನ್ನು ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಚಾಹಲ್ ಗೆ ಮಾಡಿ ಎಲ್ಲರಿಂದಲೂ ಬೈಯಿಸಿಕೊಂಡಿದ್ದರು ರಿಷಬ್ ಪಂತ್.

Leave A Reply

Your email address will not be published.