ರಿಷಬ್ ಪಂತ್ ತಂಡಕ್ಕೆ ಆಯ್ಕೆಯಾಗಿರಬಹುದು, ಆದರೆ ಹನ್ನೊಂದರ ಬಳಗದಲ್ಲಿ ಸ್ಥಾನ ಇಲ್ಲವಂತೆ. ಮತ್ಯಾರಿಗೆ ಆ ಸ್ಥಾನ ಗೊತ್ತೇ??
ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ಶುರುವಾಗಲಿದೆ. ವಿಶ್ವಕಪ್ ನಲ್ಲಿ ಭಾಗವಹಿಸಲಿರುವ ಎಲ್ಲಾ ದೇಶಗಳು ತಮ್ಮ ತಂಡಗಳನ್ನು ಆಯ್ಕೆ ಮಾಡಿಕೊಂಡಿದ್ದು, ಬಿಸಿಸಿಐ ಸಹ ಭಾರತ ತಂಡಕ್ಕೆ 15 ಪ್ಲೇಯರ್ ಗಳು ಹಾಗೂ 4 ಹೆಚ್ಚುವರಿ ಪ್ಲೇಯರ್ ಗಳನ್ನು ಆಯ್ಕೆ ಮಾಡಿದೆ. ಅಕ್ಟೋಬರ್ 23ರಂದು ಭಾರತ ತಂಡ ಮೊದಲ ಪಂದ್ಯವನ್ನು ಪಾಕಿಸ್ತಾನ್ ವಿರುದ್ಧ ಆಡಲಿದೆ. ತಂಡದಲ್ಲಿ ದಿನೇಶ್ ಕಾರ್ತಿಕ್ ಹಾಗೂ ರಿಷಬ್ ಪಂತ್ ಇಬ್ಬರಿಗೂ ಸಹ ಸ್ಥಾನ ನೀಡಲಾಗಿದೆ. ಈ ಇಬ್ಬರನ್ನು ವಿಕೆಟ್ ಕೀಪರ್ ಗಳಾಗಿಯೇ ಆಯ್ಕೆ ಮಾಡಲಾಗಿದೆ, ಆದರೆ ಪ್ಲೇಯಿಂಗ್ 11 ನಲ್ಲಿ ಇಬ್ಬರಿಗೂ ಅವಕಾಶ ಸಿಗುವುದು ಕಷ್ಟ, ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ.
ಸಧ್ಯಕ್ಕೆ ರಿಷಬ್ ಪಂತ್ ಅವರು ಒಳ್ಳೆಯ ಫಾರ್ಮ್ ನಲ್ಲಿಲ್ಲ, ಏಷ್ಯಾಕಪ್ ನಲ್ಲಿ ಸಹ ಪಂತ್ ಅವರು ತಮ್ಮನ್ನು ತಾವು ಪ್ರೂವ್ ಮಾಡಿಕೊಳ್ಳಲಿಲ್ಲ. ಇದರ ಬಗ್ಗೆಯೇ ಈಗ ಹಲವು ಚರ್ಚೆಗಳು ನಡೆಯುತ್ತಿವೆ. ಇದೀಗ ಭಾರತದ ಮಾಜಿ ಆಟಗಾರ ಇರ್ಫಾನ್ ಪಠಾಣ್ ಅವರು ಪಾಕಿಸ್ತಾನ್ ವಿರುದ್ಧ ನಡೆಯುವ ವಿಶೇಷ ಪಂದ್ಯಕ್ಕಾಗಿ, ತಮ್ಮ ಪ್ಲೇಯಿಂಗ್ 11 ತಂಡವನ್ನು ಘೋಷಿಸಿದ್ದು, ಇದರಲ್ಲಿ ಪಂತ್ ಅವರಿಗೆ ಸ್ಥಾನ ನೀಡಿಲ್ಲ, ರಿಷಬ್ ಪಂತ್ ಅವರ ಬದಲಾಗಿ ದಿನೇಶ್ ಕಾರ್ತಿಕ್ ಅವರಿಗೆ ಸ್ಥಾನ ನೀಡಿದ್ದು, ಇದು ಅಚ್ಚರಿ ಮೂಡಿಸಿದೆ. ಈ ಕುರಿತು ಸಂದರ್ಶನದಲ್ಲಿ ಮಾತನಾಡಿ, ಕಾರಣವನ್ನು ಸಹ ಹೇಳಿದ್ದಾರೆ.
“ಮೊದಲ ಪಂದ್ಯ ಆಡುವಾಗ, ಸ್ಪಿನ್ನರ್ ಜೊತೆಗೆ ಅನುಭವಿ ಬೌಲರ್ ಸಹ ಸಹಾಯಕ್ಕೆ ಬರುತ್ತಾರೆ. ಅದರಿಂದ ನನ್ನ ಪ್ಲೇಯಿಂಗ್ 11 ಟೀಮ್ ಹೀಗಿದೆ.. ರೋಹಿತ್ ಶರ್ಮಾ, ಕೆ.ಎಲ್.ರಾಹುಲ್, ವಿರಾಟ್ ಕೋಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಲೆಗ್ ಸ್ಪಿನ್ನರ್ ಯುಜವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರ ಹಾಗೂ ಹರ್ಷಲ್ ಪಟೇಲ್. ಭುವನೇಶ್ವರ್ ಕುಮಾರ್ ಅವರನ್ನು ಮೂರನೇ ವೇಗಿಯಾಗಿ ಆಯ್ಕೆ ಮಾಡಿಕೊಳ್ಳಬಹುದು. ಮೂರು ವೇಗಿ ಬೌಲರ್ ಗಳಲ್ಲಿ ಇಬ್ಬರು ಸ್ಪೆಷಲಿಸ್ಟ್ ಗಳು, ಡೆತ್ ಬೌಲಿಂಗ್ ನಲ್ಲಿ ಅರ್ಷದೀಪ್ ಸಿಂಗ್ ಅವರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ನನಗಿದೆ..”ಎಂದು ಹೇಳಿದ್ದಾರೆ ಇರ್ಫಾನ್ ಪಠಾಣ್.