ರಿಷಬ್ ಪಂತ್ ಹೊರಹೋಗುವುದು ಬಹುತೇಕ ಖಚಿತವಾಗುತ್ತಿದ್ದಂತೆ, ಡೇಂಜರ್ ಪ್ಲೇಯರ್ ಅನ್ನು ತಂಡಕ್ಕೆ ಸೇರಿಸಿಕೊಳ್ಳಲು ಸಿದ್ಧತೆ. ಆ ಬಲಾಢ್ಯ ಆಟಗಾರ ಯಾರು ಗೊತ್ತೇ??

7,372

ಏಷ್ಯಾಕಪ್ ನಲ್ಲಿ ಭಾರತ ತಂಡ ಸೋತ ಬಳಿಕ, ಮುಂಬರುವ ಎರಡು ಸರಣಿ ಪಂದ್ಯಗಳು ಹಾಗೂ ಟಿ20 ವಿಶ್ವಕಪ್ ನಲ್ಲಿ ಹಿಂದೆ ನಡೆದ ತಪ್ಪುಗಳನ್ನು ಮಾಡಬಾರದು ಎಂದು ಬಲಿಷ್ಠ ತಂಡ ಕಟ್ಟಬೇಕು ಎಂದು ಶ್ರಮ ಹಾಕುತ್ತಿದೆ. ಭಾರತ ತಂಡ ಗೆಲ್ಲಲು ಒಳ್ಳೆಯ ಸದಸ್ಯರ ಅವಶ್ಯಕತೆ ಇದೆ. ಅಕ್ಟೋಬರ್ 16 ರಿಂದ ನವೆಂಬರ್ 13ರ ವರೆಗೂ ಟಿ20 ವಿಶ್ವಕಪ್ ಪಂದ್ಯಗಳು ನಡೆಯಲಿದೆ. ಭಾರತದ ಮೊದಲ ಪಂದ್ಯ ಪಾಕಿಸ್ತಾನ್ ವಿರುದ್ದ ಅಕ್ಟೋಬರ್ 23ರಂದು ನಡೆಯಲಿದೆ. ಅದಕ್ಕಿಂತ ಮೊದಲು ಎರಡು ಸೀರಿಸ್ ಗಳು ಸಹ ಇದೆ. ಹಾಗಾಗಿ ಭಾರತ ತಂಡವು ಬಹಳ ಎಚ್ಚರಿಕೆಯಿಂದ ತಂಡದ ಆಯ್ಕೆ ಮಾಡಬೇಕಿದೆ.

ಪ್ರಸ್ತುತ ರಿಷಬ್ ಪಂತ್ ಅವರಿಗೆ ಪ್ಲೇಯಿಂಗ್ 11ನಲ್ಲಿ ಸಾಕಷ್ಟು ಬಾರಿ ಅವಕಾಶ ನೀಡಿದರು ಸಹ, ಪಂತ್ ಅವರು ಒಳ್ಳೆಯ ಪ್ರದರ್ಶನ ನೀಡಲಿಲ್ಲ, ಬಹಳ ನೀರಸ ಪ್ರದರ್ಶನ ನೀಡಿ, ಹೆಚ್ಚು ರನ್ ಗಳನ್ನು ಕಲೆಹಾಕದೆ, ಬೇಗ ಔಟ್ ಆಗುತ್ತಿದ್ದರು. ಹಾಗಾಗಿ ಮುಂದಿನ ಪಂದ್ಯಗಳಿಂದ ಪಂತ್ ಅವರನ್ನು ಹೊರಗಿಡುವುದೇ ಒಳ್ಳೆಯದು ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ಓಡಿಐ ಮತ್ತು ಟೆಸ್ಟ್ ಕ್ರಿಕೆಟ್ ನಲ್ಲಿ ಪಂತ್ ಅವರು ಅನೇಕ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡಿದ್ದಾರೆ. ಆದರೆ ಟಿ20 ಫಾರ್ಮೇಟ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡಿಲ್ಲ. ಹಾಗಾಗಿ ಪಂತ್ ಅವರ ಬದಲಾಗಿ, ಭಾರತ ತಂಡ ಸಂಜು ಸ್ಯಾಮ್ಸನ್ ಅವರನ್ನು ಆಯ್ಕೆಮಾಡಬೇಕು ಎನ್ನುವ ಅಭಿಪ್ರಾಯ ಕೇಳಿಬರುತ್ತಿದೆ.

ಸಂಜು ಸ್ಯಾಮ್ಸನ್ ಅವರು ಈಗ ಒಳ್ಳೆಯ ಫಾರ್ಮ್ ನಲ್ಲಿದ್ದಾರೆ. ಅವರ ಬ್ಯಾಟ್ ಇಂದ ರನ್ ಗಳು ಹರಿದುಬರುತ್ತಿದೆ. ಜೊತೆಗೆ ವಿಕೆಟ್ ಕೀಪಿಂಗ್ ನಲ್ಲಿ ಸಹ ಸಂಜು ಸ್ಯಾಮ್ಸನ್ ಒಳ್ಳೆಯ ಆಟದ ಸಾಮರ್ಥ್ಯ ಹೊಂದಿದ್ದಾರೆ. ಬ್ಯಾಟಿಂಗ್ ವಿಷಯದಲ್ಲಿ ಸಂಜು ಅವರು ಯಾವುದೇ ಕ್ರಮಾಂಕದಲ್ಲಿ ಅದ್ಭುತವಾಗಿ ಆಟ ಆಡುವ ಸಾಮರ್ಥ್ಯ ಹೊಂದಿದ್ದಾರೆ. ರಿಷಬ್ ಪಂತ್ ಅವರಿಗಿಂತ ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ಎರಡರಲ್ಲೂ ಸಹ ಉತ್ತಮವಾದ ಆಯ್ಕೆ ಸಂಜು ಸ್ಯಾಮ್ಸನ್ ಎನ್ನಲಾಗುತ್ತಿದ್ದು, ಭಾರತ ತಂಡ ಇವರನ್ನು ಆಯ್ಕೆ ಮಾಡಿಕೊಳ್ಳುತ್ತಾ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.