ರೈನಾ ಸೇರಿದಂತೆ ಅನೇಕ ದಿಗ್ಗಜ ಆಟಗಾರರಿಗೆ ಐಪಿಎಲ್ ಮುಚ್ಚಿದ ಬಾಗಿಲೇ ಅಥವಾ ಇನ್ನೂ ವಾಪಾಸ್ಸಾಗುವ ಅವಕಾಶ ಇದೆಯೇ?

611

ಮಿಸ್ಟರ್ ಐಪಿಎಲ್ ಎಂದೇ ಹೆಸರುವಾಸಿಯಾಗಿರುವ ಸುರೇಶ್ ರೈನಾ ಇಲ್ಲಿಯವರೆಗೆ ದೋನಿ ನಾಯಕತ್ವದಲ್ಲಿ ಅವರ ತಂಡದಲ್ಲಿಯೇ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದರು. ಅನೇಕ ದಾಖಲೆಗಳನ್ನು ತಮ್ಮ ಹೆಸರಿನಲ್ಲಿರಿಸಿಕೊಂಡಿದ್ದಾರೆ ಈ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ. ಆದರೆ ಈ ಬಾರಿ‌ ಐಪಿಎಲ್ ನಲ್ಲಿ ಯಾವ ತಂಡ ಕೂಡಾ ಸುರೇಶ್ ರೈನಾ ಅವರನ್ನು ಖರೀದಿಸಲು ಉತ್ಸಾಹ ತೋರಲಿಲ್ಲ. ಅನೇಕ ಅಭಿಮಾನಿಗಳು ಬೇಸರದಿಂದ ಇದ್ದಾರೆ.

ಸುರೇಶ್ ರೈನಾ ಮಾತ್ರವಲ್ಲದೇ ದಿಗ್ಗಜ ಬ್ಯಾಟ್ಸ್‌ಮನ್‌ ಗಳಾದ ಡೇವಿಡ್ ಮಿಲ್ಲರ್, ಆಸ್ಟ್ರೇಲಿಯಾ ದ ಓಪನರ್ ಆರೋನ್ ಪಿಂಚ್ ಕೂಡಾ ಖರೀದಿಯಾಗದೇ ಇದ್ದಾರೆ. ಇವರ ಮುಂದಿನ ಆಯ್ಕೆ ಏನು? ಇವರು ಈ ಬಾರಿ ಐಪಿಎಲ್ ಆಡವುದು ಅಸಾದ್ಯವೇ? ಇವರ ಪಾಲಿಗೆ ಈ ಬಾರಿಯ ಐಪಿಎಲ್ ಬಾಗಿಲು ಮುಚ್ಚಿದೆಯೆ? ಎಂಬ ಅನೇಕ ಗೊಂದಲಗಳು ಕ್ರಿಕೆಟ್ ಅಭಿಮಾನಿಗಳ ಮುಂದಿದೆ. ಇವೆಲ್ಲದಕ್ಕೆ ಉತ್ತರ ಇಲ್ಲಿದೆ.

ಸುರೇಶ್ ರೈನಾ, ಸ್ಟೀವ್ ಸ್ಮಿತ್, ಶಕೀಬ್ ಅಲ್ ಹಸನ್ ಇನ್ನೂ ಕೂಡಾ ಐಪಿಎಲ್ ಆಡುವ ಸಾಧ್ಯತೆ ಇದೆ, ಇದಕ್ಕೆ ನಾವು ಐಪಿಎಲ್ ನ ಈ ನಿಯಮದ ಬಗ್ಗೆ ಮಾಹಿತಿ‌ ಪಡೆದರೆ ಸಾಕು. ಒಂದು ವೇಳೆ ಯಾವಿದೇ ಐಪಿಎಲ್ ತಂಡದಲ್ಲಿ ಆಟಗಾರರು ಭರ್ತಿಯಾಗದಿದ್ದರೆ ಈ unsold ಆಟಗಾರರನ್ನು ಫ್ರಾಂಚೈಸಿ ಗಳು ಖರೀದಿ ಮಾಡಬಹುದಾಗಿದೆ. ಇದಲ್ಲದೇ ಒಂದು ವೇಳೆ ಯಾವುದೇ ತಂಡದ ಆಟಗಾರರು ಗಾಯಗಳಾದರೆ ಈ ಹರಾಜಾಗದೇ ಇರುವ ಆಟಗಾರರನ್ನು ಖರೀದಿಸುವ ಅವಕಾಶ ಇದೆ. ಆಡಮ್ ಜಂಪಾ ಹಾಗು ಕಣೆ ರಿಚೇರ್ಡ್ಸೆನ್ ನಂತಹ ಆಟಗಾರರು ಕಳೆದ ವರ್ಷ ಕೋರೋಣ ನೆಪ ಒಡ್ಡಿ ಅರ್ಧದಲ್ಲಿಯೇ ಐಪಿಎಲ್ ಬಿಟ್ಟು ಹೋಗಿದ್ದರು ಅದೇ ಕಾರಣಕ್ಕೆ ಈ ಬಾರಿ ಈ ಆಟಗಾರರನ್ನು ಆಯ್ಕೆ ಮಾಡಲಿಲ್ಲ ಎಂದು ಕೆಲ ಆಟಗಾರರು ಅಭಿಪ್ರಾಯ ಪಟ್ಟಿದ್ದಾರೆ.

Leave A Reply

Your email address will not be published.