ರೋಹಿತ್ ರವರು ದಿನೇಶ್ ಕಾರ್ತಿಕ್ ರವರ ವಿಚಾರದಲ್ಲಿ ಮಾಡುತ್ತಿರುವ ತಪ್ಪನ್ನು ಎತ್ತಿ ತೋರಿಸಿದ ಆಸ್ಟ್ರೇಲಿಯಾ ಲೆಜೆಂಡ್. ಕಾರ್ತಿಕ್ ಪರ ನಿಂತು ಹೇಳಿದ್ದೇನು ಗೊತ್ತೇ??

101

ದಿನೇಶ್ ಕಾರ್ತಿಕ್ ಅವರು ಭಾರತ ತಂಡಕ್ಕೆ ವಿಕೆಟ್ ಕೀಪರ್ ಮತ್ತು ಫಿನಿಷರ್ ಆಗಿ ಆಯ್ಕೆಯಾಗಿದ್ದಾರೆ. ಕಾರ್ತಿಕ್ ಅವರು ಕಳೆದ ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರಲಿಲ್ಲ. ಈ ವರ್ಷ ಆರ್.ಸಿ.ಬಿ ತಂಡದ ಫಿನಿಷರ್ ಆಗಿ ಅದ್ಭುತವಾದ ಪಾತ್ರ ನಿರ್ವಹಿಸಿದ ಬಳಿಕ ದಿನೇಶ್ ಕಾರ್ತಿಕ್ ಅವರು ಭಾರತ ತಂಡಕ್ಕೆ ಸೆಲೆಕ್ಟ್ ಆದರೂ, ಇದು ಅವರ ದೊಡ್ಡ ಕನಸಾಗಿತ್ತು. ಏಷ್ಯಾಕಪ್ ನಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ಸರಿಯಾಗಿ ಅವಕಾಶಗಳು ಸಿಗಲಿಲ್ಲ. ಈಗ ನಡೆಯುತ್ತಿರುವ ಅಸ್ಟ್ರೇಲಿಯಾ ವರ್ಸಸ್ ಭಾರತ ಟಿ20 ಮೊದಲ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರಿಗೆ ವಿಕೆಟ್ ಕೀಪರ್ ಹಾಗೂ ಫಿನಿಷರ್ ಸ್ಥಾನ ನೀಡಲಾಗಿತ್ತು.

ಆದರೆ ಬ್ಯಾಟಿಂಗ್ ನಲ್ಲಿ ವೈಫಲ್ಯ ಅನುಭವಿಸಿದರು ಕಾರ್ತಿಕ್. ಕೇವಲ 6 ರನ್ ಗಳಿಗೆ ಔಟ್ ಆದರು. ಅಷ್ಟೇ ಅಲ್ಲದೆ ವಿಕೆಟ್ ಕೀಪಿಂಗ್ ನಲ್ಲಿ ಸಹ, ಡಿ.ಆರ್.ಎಸ್ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳದೆ ಎಡವಟ್ಟು ಮಾಡಿಕೊಂಡರು. ಇದರಿಂದಾಗಿ ದಿನೇಶ್ ಕಾರ್ತಿಕ್ ಅವರ ಆಟದ ವೈಖರಿಯ ಮೇಲೆ ಪ್ರಶ್ನೆಗಳು ಶುರುವಾಗಿದೆ, ಅಷ್ಟೇ ಅಲ್ಲದೆ ದಿನೇಶ್ ಕಾರ್ತಿಕ್ ಅವರಿಗೆ ಸರಿಯಾದ ಅವಕಾಶಗಳು ಸಿಗಲಿಲ್ಲ ಎನ್ನುವ ಒಂದು ಪ್ರಶ್ನೆ ಸಹ ಶುರುವಾಗಿದೆ, ಭಾರತ ತಂಡ ಅವರನ್ನು ಕಡೆಗಣಿಸಿತು ಎಂದು ಸಹ ಹೇಳಲಾಗುತ್ತಿದೆ.

ಇದೀಗ ಆಸ್ಟ್ರೇಲಿಯಾ ತಂಡದ ಮಾಜಿ ಆಟವಾರ ಹೇಡನ್ಸ್ ಅವರು ದಿನೇಶ್ ಕಾರ್ತಿಕ್ ಅವರ ಪರವಾಗಿ ಮಾತನಾಡಿದ್ದಾರೆ, “ಅವರೊಬ್ಬ ಅದ್ಭುತವಾದ ಆಟಗಾರ, ಯಾವಾಗಲಾದರೂ ಮೈದಾನಕ್ಕೆ ಬಂದು ಅದೇ ರೀತಿಯ ಶಾಟ್ ಗಳನ್ನು ಹೊಡೆಯುತ್ತಾರೆ. ನನ್ನ ಪ್ರಶ್ನೆ ಅವರ ಫಿನಿಷರ್ ರೋಲ್ ಬಗ್ಗೆ ಆಗಿದೆ, ಮುಂದಿನ ಆರ್ಡರ್ ನಲ್ಲಿ ಅವರಿಗೆ ಇನ್ನು ದೊಡ್ಡ ಪಾತ್ರವಿದೆ ಎಂದು ನಾನು ಭಾವಿಸುತ್ತೇನೆ..” ಎಂದಿದ್ದಾರೆ ಹೇಡನ್ಸ್. ಇಷ್ಟೇ ಅಲ್ಲದೆ, ಭುವನೇಶ್ವರ್ ಕುಮಾರ್ ಅವರ ಬಗ್ಗೆ ಮಾತನಾಡಿ, ಅವರು ಕೂಡ ಉತ್ತಮ ಪ್ರದರ್ಶನ ನೀಡಬಲ್ಲರು ಎಂದಿದ್ದಾರೆ.

Leave A Reply

Your email address will not be published.