ಲಕ್ನೋ ಬೊಂಬಾಟ್ ಬ್ಯಾಟಿಂಗ್ ಆದರೆ ಎರಡು ರನ್ ಗಳ ಅಂತರದಲ್ಲಿ ಜಯ. ಕೆ ಎಲ್ ರಾಹುಲ್ ರನ್ನು ಹೊಗಳಿದ ಹರ್ಭಜನ್ ಸಿಂಗ್. ರಾಹುಲ್ ಬಗ್ಗೆ ಹೇಳಿದ್ದೇನು?

264

ಲಕ್ನೋ ಸೂಪರ್ ಜಯಂಟ್ ತಂಡ ಈ ಬಾರಿಯ ಐಪಿಎಲ್ ಅಲ್ಲಿ ಹೊಸದಾಗಿ ಆಯ್ಕೆ ಆಗಿದ್ದು ಇಲ್ಲಿಯ ತನಕ ಉತ್ತಮ ಪ್ರದರ್ಶನ ನೀಡಿದೆ. ಈ ಆವೃತ್ತಿಯ ಉದ್ದಕ್ಕೂ ಮೊದಲನೇ ಹಾಗು ಎರಡನೇ ಸ್ಥಾನದಲ್ಲಿಯೇ ಮುಂದುವರೆದಿದ್ದು ಮೊದಲ ಆವೃತ್ತಿಯಲ್ಲೇ ಪ್ಲೇ ಆಫ್ ಗೆ ಎರಡನೇ ತಂಡವಾಗಿ ಆಯ್ಕೆ ಆಗಿದೆ. ಇದರ ಜೊತೆಗೇನೆ ನಿನ್ನೆ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅಲ್ಲಿ ನಡೆದ ಪಂದ್ಯದಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಿಸಿಕೊಟ್ಟಿದೆ ಲಕ್ನೋ ಸೂಪರ್ ಜಯಂಟ್ಸ್.

ಬುಧವಾರ ಡಿ ವೈ ಪಾಟೀಲ್ ಸ್ಟೇಡಿಯಂ ಅಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ತಂಡ ಕ್ವಿಂಟನ್ ಡಿ ಕಾಕ್ ಅವರ ಅತ್ಯುತ್ತಮ ಶತಕ ಹಾಗು ಕೆ ಎಲ್ ರಾಹುಲ್ ಅವರ ಅರ್ಧಶತಕ ಇಂದಾಗಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ೨೦ ಓವರ್ ಗಳಲ್ಲಿ ೨೧೦ ರನ್ ಕಲೆ ಹಾಕುವ ಮೂಲಕ ಕೋಲ್ಕತ್ತ ತಂಡಕ್ಕೆ ದೊಡ್ಡ ರನ್ ಬೆನ್ನೆತ್ತುವ ಗುರಿ ನೀಡಿತು. ಈ ಪಂದ್ಯದಲ್ಲಿ ಕೆ ಎಲ್ ರಾಹುಲ್ ಅವರು ನಿಧಾನಗತಿಯಲ್ಲಿ ಬ್ಯಾಟಿಂಗ್ ನಡೆಸಿದರೆ ಮತ್ತೊಂದು ಕಡೆಯಲ್ಲಿ ಕ್ವಿಂಟನ್ ಡಿಕಾಕ್ ಉತ್ತಮ ಬ್ಯಾಟ್ ಆಡಿ ೧೪೦ ರನ್ ಗಳಿಸಿ ಶತಕ ಗಳಿಸಿ ಸಂಭ್ರಮಿಸಿದರು.

ಇನ್ನು ಹೆಚ್ಚಿನ ಸ್ಟ್ರೈಕ್ ಕ್ವಿಂಟನ್ ಡಿಕಾಕ ಅವರಿಗೆ ನೀಡುತ್ತಾ ಬಂದಿದ್ದ ಕೆ ಎಲ್ ರಾಹುಲ್ ಅವರ ನಾಯಕತ್ವಕ್ಕೆ ಎಲ್ಲೆಡೆಯಿಂದ ಭೇಷ್ ಎಂದು ಕೇಳಿ ಬಂದಿದೆ. ರಾಹುಲ್ ಅವರಿಂದ ಉತ್ತಮ ಬೆಂಬಲ ಪಡೆದ ಡಿಕಾಕ್ ಅವರು ಶತಕ ಬಾರಿಸುವುದಲ್ಲದೆ ಉತ್ತಮ ಜೊತೆಯಾಟ ದ ಜೊತೆಗೆ ತಂಡದ ಮೊತ್ತ ೨೦೦ ದಾಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇದು ದಾಖಲೆಯ ಜೊತೆಯಾಟವಾಗಿದ್ದು ಐಪಿಎಲ್ ಇತಿಹಾಸದಲ್ಲೇ ಇದೊಂದು ಮೊದಲನೇ ವಿಕೆಟ್ ಗೆ ದೊಡ್ಡ ಮೊತ್ತ ಹಾಗು ಪಾರ್ಟ್ನರ್ಶಿಪ್ ಆಗಿದೆ. ಇದರ ಬಗ್ಗೆ ಹರ್ಭಜನ್ ಸಿಂಗ್ ಅವರು ಒಳ್ಳೆ ರಾಹುಲ್ ಬಗ್ಗೆ ಮಾತು ಹೇಳಿದ್ದಾರೆ.

ಮ್ಯಾಚ್ ನಲ್ಲಿ ನಡೆಯುವ ಚಾನೆಲ್ ಚರ್ಚೆಯಲ್ಲಿ ರಾಹುಲ್ ಬಗ್ಗೆ ಮಾತನಾಡಿದ ಭಾರತದ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ರಾಹುಲ್ ಒಬ್ಬರು ವಿಭಿನ್ನ ಹಂತದ ಆಟಗಾರ, ಇನ್ನೊಂದು ಕಡೆಯಲ್ಲಿ ಭರ್ಜರಿ ಆಟವಾಡುತ್ತಿರುವುದರಿಂದ ತಾನು ದೊಡ್ಡ ಆಟಕ್ಕೆ ಕೈ ಹಾಕಬಾರದೆಂದು ಕೆ ಎಲ್ ರಾಹುಲ್ ನಿರ್ಧರಿಸಿದ್ದರು. ನಿನ್ನೆಯ ದಿನ ಕ್ವಿಂಟನ್ ಡಿಕಾಕ್ ಅವರಿಗೆ ಸ್ಟ್ರೈಕ್ ನೀಡುವುದಷ್ಟೇ ತಮ್ಮ ಕೆಲಸ ಎಂದು ಮನಗಂಡಿದ್ದರು. ಇನ್ನು ಡಿಕಾಕ್ ಅವರು ಉತ್ತಮ ಸ್ಟ್ರೈಕ್ ಹೊಂದದೆ ಇದ್ದಾಗ ರಾಹುಲ್ ಸಿಕ್ಸ್ ಕಡೆ ಬಾಲ್ ಬಿಸುತ್ತಿದ್ದರು.

Leave A Reply

Your email address will not be published.