ವಾಪಾಸ್ ಬಂದ ಎರಡನೇ ಪಂದ್ಯದಲ್ಲೂ ವಿಫಲ: ಪಾಂಡ್ಯ ಮುಗಿದ ನಂತರ ರಾಹುಲ್ ಹೋಗಿದ್ದು ಎಲ್ಲಿಗೆ ಗೊತ್ತೇ?? ಕೈಫ್ ಹೇಳಿದ್ದೇನು ಗೊತ್ತೇ??

156

ನಮಸ್ಕಾರ ಸ್ನೇಹಿತರೇ ಈಗಾಗಲೇ ಕೆಎಲ್ ರಾಹುಲ್ ರವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ಜಿಂಬಾಬ್ವೆ ವಿರುದ್ಧದ ಹಾಡಿರುವ ಎರಡಕ್ಕೆ ಎರಡು ಏಕದಿನ ಪಂದ್ಯಗಳಲ್ಲಿ ಗೆಲುವನ್ನು ಸಾಧಿಸಿದೆ. ಏಷ್ಯಾ ಕಪ್ ಹಾಗೂ ಟಿ20 ವಿಶ್ವಕಪ್ ಮುನ್ನೆಲೆಗೆ ಬಂದಿರುವ ಹಿನ್ನೆಲೆಯಲ್ಲಿ ಇದೊಂದು ಉತ್ತಮ ಅಭ್ಯಾಸವಾಗಿದೆ ಎಂದು ಹೇಳಬಹುದಾಗಿದೆ.

ಅದರಲ್ಲೂ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ಆಡಲು ಅವಕಾಶ ಪಡೆಯದಿದ್ದ ನಾಯಕ ಕೆಎಲ್ ರಾಹುಲ್ ರವರು ಎರಡನೆಯ ಪಂದ್ಯದಲ್ಲಿ ಓಪನರ್ ಬ್ಯಾಟ್ಸ್ಮನ್ ಆಗಿ ಬಡ್ತಿ ಹೊಂದಿ ಆಡಲು ಹೋಗಿದ್ದರು. ಈ ಪಂದ್ಯದಲ್ಲಿ ಮೊದಲ ಪಂದ್ಯದಲ್ಲಿ ಆಡಿದ ದೀಪಕ್ ಚಹರ್ ಅವರ ಬದಲಿಗೆ ಶಾರ್ದೂಲ್ ಠಾಕೂರ್ ರವರು ಎರಡನೇ ಪಂದ್ಯದಲ್ಲಿ ಆಡಿದ್ದರು. ಇನ್ನು ಮೊದಲು ಬ್ಯಾಟಿಂಗಿಗೆ ಹೇಳಿದ ಕೆ ಎಲ್ ರಾಹುಲ್ ರವರು ಕೇವಲ 5 ಎಸೆತಗಳಲ್ಲಿ ಒಂದು ರನ್ನು ಬಾರಿಸಲು ಮಾತ್ರ ಶಕ್ತರಾಗುತ್ತಾರೆ. ನಿಜವಾಗಿ ಹೇಳಬೇಕೆಂದರೆ ಈ ವರ್ಷ ಐಪಿಎಲ್ ಮುಗಿದ ನಂತರ ಯಾವುದೇ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಕೂಡ ಇದುವರೆಗೂ ಕೆಎಲ್ ರಾಹುಲ್ ರವರು ಬ್ಯಾಟಿಂಗ್ ಮಾಡಿರಲಿಲ್ಲ. ಹೀಗಾಗಿ ಒಬ್ಬ ಕ್ಲಾಸ್ ಬ್ಯಾಟ್ಸ್ಮನ್ ಆಗಿರುವ ಕೆಎಲ್ ರಾಹುಲ್ ರವರು ನೇರವಾಗಿ ಜಿಂಬಾಬ್ವೆ ವಿರುದ್ಧದ ಎರಡನೆಯ ಏಕದಿನ ಪಂದ್ಯಕ್ಕೆ ಬ್ಯಾಟಿಂಗ್ ಮಾಡಲು ಇಳಿದಿದ್ದರು.

ಹೀಗಾಗಿ ಹಲವಾರು ಸಮಯಗಳ ನಂತರ ಬ್ಯಾಟಿಂಗ್ ಗೆ ಇಳಿದ ಕೆ ಎಲ್ ರಾಹುಲ್ ರವರು ಕಳಪೆಯಾಗಿ ಬ್ಯಾಟಿಂಗ್ ಪ್ರದರ್ಶನವನ್ನು ನೀಡಿದ್ದರು. ಆದರೆ ಅದಾದ ನಂತರ ಅವರು ಹೋಗಿದ್ದೆಲ್ಲಿಗೆ ಎಂದು ತಿಳಿದರೆ ಖಂಡಿತವಾಗಿ ನೀವು ಕೂಡ ಅವರ ಬಗ್ಗೆ ಹೆಮ್ಮೆಪಟ್ಟುಕೊಳ್ಳುತ್ತೀರಿ. ಹೌದು ಸ್ನೇಹಿತರೆ ಮ್ಯಾಚ್ ಮುಗಿದ ನಂತರ ಕೆ ಎಲ್ ರಾಹುಲ್ ರವರು ಕೂಡಲೇ ನೆಟ್ ಪ್ರಾಕ್ಟೀಸ್ ಗೆ ಬೇಕಾಗುವಂತಹ ಎಲ್ಲ ಸಾಮಗ್ರಿಗಳನ್ನು ಹಿಡಿದುಕೊಂಡು ನೆಟ್ ಪ್ರಾಕ್ಟೀಸ್ ಗೆ ಹೋಗಿ ಮತ್ತೆ ತಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತಾ ಕಾರ್ಯಪ್ರವೃತ್ತರಾಗಿದ್ದರು. ಇದು ಅವರೊಬ್ಬ ಉತ್ತಮ ಆಟಗಾರ ಹಾಗೂ ಉತ್ತಮ ನಾಯಕನ ಗುಣಗಳನ್ನು ಹೊಂದಿರುವ ವ್ಯಕ್ತಿತ್ವ ಎಂಬುದನ್ನು ಪ್ರತಿಬಿಂಬಿಸುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಏಷ್ಯಾಕಪ್ ನಲ್ಲಿ ತಮ್ಮ ಫಾರಂಗೆ ಮತ್ತೆ ಕೆಎಲ್ ರಾಹುಲ್ ರವರು ತಮ್ಮ ಹಳೆಯ ಲಯಕ್ಕೆ ವಾಪಸು ಮರಳಿ ಬರಲಿ ಎಂಬುದಾಗಿ ಎಲ್ಲರೂ ಹಾರೈಸುತ್ತಿದ್ದಾರೆ.

Leave A Reply

Your email address will not be published.