ವಿದೇಶಿ ಮಹಿಳೆ ಕರ್ನಾಟಕದ ಹುಡುಗ. ಪ್ರೀತಿಗೆ ಗಡಿಗಳಿಲ್ಲ ಎನ್ನುವುದಕ್ಕೆ ಹಿಂದೂ ಸಂಪ್ರದಾಯದಂತೆ ಆದ ಈ ಮದುವೆ ಸಾಕ್ಷಿ.

161

ಹಿಂದಿನ ಕಾಲದಲ್ಲಿ ರಾಜ ಮಹಾರಾಜರು ಕೂಡ ಪ್ರೀತಿಗೆ ಬಿದ್ದು ಅಸಾಧ್ಯ ಕೆಲಸವನ್ನು ಮಾಡಿದ್ದಾರೆ ಎನ್ನುವ ಕಥೆಗಳನ್ನು ಕೇಳಿರುತ್ತೀರಾ. ಇಂದು ಅಂತಹ ಸಿನೆಮಾಗಳು ಬರುತ್ತಲೇ ಇರುತ್ತದೆ. ಪ್ರೀತಿ ಪ್ರತಿಯೊಬ್ಬರನ್ನು ತನ್ನದೇ ಬಣ್ಣದಲ್ಲಿ ಬಣ್ಣಿಸುತ್ತದೆ. ಪ್ರೇಮ ಎನ್ನುವುದು ಅಸಾಧ್ಯ ಕೆಲಸಗಳನ್ನು ಸಾಧ್ಯಗೊಳಿಸುತ್ತದೆ. ಇದಕ್ಕೆ ಇತಿಹಾಸದಲ್ಲಿ ಅನೇಕ ಉದಾಹರಣೆಗಳಿವೆ.

ಕರ್ನಾಟಕದಲ್ಲಿ ವಾಸಿಸುವ ಒಬ್ಬ ಆಟೋ ರಿಕ್ಷಾ ಚಾಲಕನನ್ನು ಬೆಲ್ಜಿಯಂ ನಲ್ಲಿ ವಾಸಿಸುವ ಮಹಿಳೆ ಪ್ರೀತಿ ಮಾಡಿ ಇಂತಹದೇ ಸಾಹಸವನ್ನು ಮಾಡಿ ತೋರಿಸಿದ್ದಾರೆ. ಏಳು ಸಮುದ್ರ ದಾಟಿ ಬಂದು ಪ್ರೀತಿಗೋಸ್ಕರ ಹಿಂದೂ ಸಂಪ್ರದಾಯದಂತೆ ಆಟೋ ಚಾಲಕನನ್ನು ಮದುವೆ ಆಗಿದ್ದಾರೆ.

ಬೆಲ್ಜಿಯಂ ಮೂಲದ ಕ್ಯಾಮೆಲ್ 27 ವರ್ಷದ ಯುವತಿ ಹಾಗು ಅನಂತ್ರಾಜ್ ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಪರಿಚಯವಾಗಿದ್ದರು. ಇದು ಪ್ರೀತಿಗೆ ತಿರುಗಿ ಇದೀಗ ಮದುವೆ ಆಗಿ ಸುಖವಾಗಿದ್ದಾರೆ. ಅನಂತ್ ರಾಜ್ ಕರ್ನಾಟಕದಲ್ಲಿ ಆಟೋ ಚಾಲಕರಾಗಿದ್ದರು. ಹಾಗೇನೇ ಹವ್ಯಾಸಿ ಪ್ರವಾಸಿ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ಸ್ನೇಹಿತರಾಗುವ ಮೊದಲು ೨೦೧೯ ರಲ್ಲಿ ಕ್ಯಾಮಿಲ್ಲೆ ಭಾರತಕ್ಕೆ ಭೇಟಿ ನೀಡಿದ್ದರು. ಕುಟುಂಬದೊಂದಿಗೆ ಹಂಪಿ ಗೆ ಬಂದಿದ್ದರು. ಇವರಿಗೆ ಮಾರ್ಗದರ್ಶಕರಾಗಿದ್ದವರು ಇದೆ ಅನಂತ್ ರಾಜು. ಕ್ಯಾಮಿಲ್ಲೆ ಹಾಗು ಅವರ ಕುಟುಂಬದವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದೂ ಇದೆ ಅನಂತ್ ಹಾಗು ಕ್ಯಾಮಿಲ್ಲೆ ಅವರನ್ನು ಕರ್ನಾಕಟ ಸುತ್ತಿಸಿದ್ದು ಕೂಡ ಇವರೇ.

ಅನಂತ್ ರಾಜು ಅವರ ಪ್ರಾಮಾಣಿಕತೆ ಹಾಗು ಆತಿಥ್ಯ ದಿಂದ ಕ್ಯಾಮಿಲ್ಲೆ ಹಾಗು ಅವರ ಕುಟುಂಬ ಸಂತೋಷಗೊಂಡಿತ್ತು. ನಂತರ ಕ್ಯಾಮಿಲ್ಲೆ ಅವರು ಬೆಲ್ಜಿಯಂ ಗೆ ತೆರಳಿದ್ದರು. ದೇಶಕ್ಕೆ ಮರಳಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಅನಂತ್ ರಾಜು ಅವರನ್ನು ಕಂಡು ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರು. ನಂತರ ಕ್ಯಾಮಿಲ್ಲೆ ಹಾಗು ಅನಂತ್ ರಾಜು ಅವರು ಸ್ನೇಹಿತರಾಗಿದ್ದರು.

ಇವರ ಈ ಸ್ನೇಹ ಪ್ರೀತಿ ಯಾಗಿ ತಿರುಗಿತು. ಆದರೆ ಪರಸ್ಪರ ಭೇಟಿಗೆ ಮೊದಲು ಕೋರೋಣ ಸಾಂಕ್ರಾಮಿಕ ಬಂದಿತ್ತು. ಇವರ ಭೇಟಿ ಸಾಧ್ಯವಾಗಲಿಲ್ಲ. ಈ ಕೋರೋಣ ಸಾಂಕ್ರಾಮಿಕ ಮುಗಿದ ತಕ್ಷಣ ಕ್ಯಾಮಿಲ್ಲೆ ಹಾಗು ಅನಂತ್ ರಾಜ್ ಒಬ್ಬೊಬ್ಬರನ್ನು ಭೇಟಿ ಯಾಗಿ ತಮ್ಮ ಸಂಬಂಧವನ್ನು ಕುಟುಂಬದವರಿಗೆ ತಿಳಿಸಿದರು. ಇಬ್ಬರ ಕುಟುಂಬಿಕರಿಗೂ ಯಾವುದೇ ಸಮಸ್ಯೆ ಇರದೇ ಇದ್ದ ಕಾರಣ ವಿರೂಪಾಕ್ಷ ದೇವಸ್ಥಾನದಲ್ಲಿ ಇವರ ಮದುವೆ ಅದ್ದೂರಿಯಾಗಿ ನಡೆಯಿತು.

Leave A Reply

Your email address will not be published.