ವಿರಾಟ್ ಕೊಹ್ಲಿಯ ೬ ವರ್ಷದ ಹಿಂದಿನ ದಾಖಲೆ ಮು-ರಿಯ ಬಲ್ಲರೇ ಜೋಸ್ ಬಟ್ಲರ್? ಬಟ್ಲರ್ ಇಲ್ಲಿಯವರೆಗಿನ ಪ್ರದರ್ಶನ ನೋಡಿದರೆ ಹೌದು ಅನಿಸುತ್ತಿದೆ.
ಐಪಿಎಲ್ ಅಂದರೇನೇ ಹೀಗೆ ಒಬ್ಬರ ದಾಖಲೆ ಇನ್ನೊಬರು ಸರಿದೂಗಿಸುತ್ತಾರೆ. ಇನೊಂದು ಹೊಸ ದಾಖಲೆ ತಮ್ಮ ಹೆಸರಿಗೆ ಬರೆಸಿಕೊಳ್ಳುತ್ತಾರೆ. ಪ್ರತಿಭಾನ್ವಿತ ಆಟಗಾರರಿಗೆ ತಮ್ಮ ಪ್ರತಿಭೆ ತೋರಿಸಲು ಇದೊಂದು ಉತ್ತಮ ವೇದಿಕೆ ಎಂದರೆ ತಪ್ಪಾಗಲಾರದು. ಅದೇ ರೀತಿ ಈ ವೇದಿಕೆ ಇಂದ ಅನೇಕ ಆಟಗಾರರು ಅಂತಾರಾಷ್ಟ್ರೀಯ ತಂಡದಲ್ಲೂ ಆಯ್ಕೆ ಆಗಿದ್ದಾರೆ, ಅಲ್ಲೂ ತಮ್ಮ ಉತ್ತಮ ಪ್ರದರ್ಶನ ತೋರಿ ಇಂದಿಗೂ ಕೆಲವರು ತಂಡದಲ್ಲಿ ಇದ್ದಾರೆ. ಇವರಲ್ಲಿ ಮುಖ್ಯವಾಗಿ ನೆನಪಿಗೆ ಬರುವುದೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಹಾರ್ದಿಕ್ ಪಾಂಡ್ಯ, ಶ್ರೇಯಸ್ ಇಯೆರ್, ಜಸ್ಪ್ರೀತ್ ಬುಮ್ರಾ ನಂತಹ ಘಟಾನುಘಟಿಗಳು.
ವಿರಾಟ್ ಕೊಹ್ಲಿ ಅವರ ಮೇಲೆ ಅನೇಕ ರೆಕಾರ್ಡ್ ಗಳಿವೆ. ಐಪಿಎಲ್ ಅಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂದರೆ ಇವರೇ. ಸುಮಾರು ೬೦೦೦ ಕ್ಕೂ ಅಧಿಕ ರನ್ ಗಳಿಸಿ ನಂಬರ್ ಒನ್ ಸ್ಥಾನದಲ್ಲಿ ಇದ್ದಾರೆ ವಿರಾಟ್ ಕೊಹ್ಲಿ. ಆದರೆ ಈ ಆವೃತ್ತಿಯಲ್ಲಿ ಅವರ ಪ್ರದರ್ಶನ ಅಷ್ಟೇನೂ ಹೇಳಿಕೊಳ್ಳುವಷ್ಟು ಉತ್ತಮವಾಗಿರಲಿಲ್ಲ. ಗೋಲ್ಡನ್ ಡಕ್ ಅಂದರೆ ಅದೆಷ್ಟೋ ಪಂದ್ಯದಲ್ಲಿ ಸೊನ್ನೆ ಸುತ್ತಿ ತಾವು ನಿರಾಶರಾಗಿದ್ದಲ್ಲದೆ ತಮ್ಮ ಅಭಿಮಾನಿಗಳನ್ನು ನಿರಾಶರನ್ನಾಗಿಸಿದ್ದಾರೆ. ಇವರ ಜೊತೆಗೆ ರೋಹಿತ್ ಶರ್ಮ ಕೂಡ ಯಾವುದೇ ಹೇಳಿಕೊಳ್ಳುವಂತಹ ಪ್ರದರ್ಶನ ನಾವು ನೋಡಲು ಸಾಧ್ಯವಾಗಿಲ್ಲ.
ಇನ್ನು ರಾಜಸ್ತಾನದ ಆರಂಭಿಕ ಆಟಗಾರರಾಗಿ ಉತ್ತಮವಾಗಿ ಆಡುತ್ತಿರುವ ಜೋಸ್ ಬಟ್ಲರ್ ಎಲ್ಲರ ಗಮನ ಸೆಳೆದಿದ್ದಾರೆ. ಇದುವರೆಗೆ ಆಡಿರುವ ಹತ್ತು ಪಂದ್ಯಗಳಲ್ಲಿ ಅವರು ೩ ಶತಕ ಹಾಗೇನೇ ೩ ಅರ್ಧ ಶತಕ ಗಳಿಸಿದ್ದಾರೆ. ಇವರ ಈ ರೀತಿಯ ಆಟ ನೋಡಿದರೆ ಇನ್ನು ಉಳಿದ ಪಂದ್ಯಗಳಲ್ಲಿ ಇವರ ಆಟ ಇದೆ ರೀತಿ ಇರಬಹುದು ಎಂದು ಹೇಳುತ್ತಿದ್ದಾರೆ ಅಭಿಮಾನಿಗಳು. ಇದೆ ರೀತಿ ಆಡಿದರೆ ವಿರಾಟ್ ಕೊಹ್ಲಿ ಅವರ ೬ ವರ್ಷದ ಹಿಂದಿನ ದಾಖಲೆ ಕೂಡ ಜೋಸ್ ಬಟ್ಲರ್ ಹಿಂದೆ ಹಾಕುವ ಸಾಧ್ಯತೆ ಇದೆ. ಇದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಪ್ರಸ್ತುತ ಆವೃತ್ತಿಯಲ್ಲಿ ಆರೆಂಜ್ ಕ್ಯಾಪ್ ಜೋಸ್ ಬಟ್ಲರ್ ಬಳಿಯೇ ಇದೆ. ಇವರು ರಾಜಸ್ತಾನ್ ಪರ ಆಡಿದ ೧೦ ಪಂದ್ಯಗಳಲ್ಲಿ ಇವರ ಸರಾಸರಿ ೬೫.೩೩ ರಲ್ಲಿ ಇದೆ. ಇವರ ಸ್ಟ್ರೈಕ್ ರೇಟ್ ೧೫೦ ಕಿಂತ ಹೆಚ್ಚಿದೆ. ಇಲ್ಲಿವರೆಗೆ ಆಡಿದ ಹತ್ತು ಪಂದ್ಯದಲ್ಲಿ ಇವರು ಒಟ್ಟಾರೆ ೫೮೮ ರನ್ ಗಳಿಸಿದ್ದಾರೆ. ಇದರಲ್ಲಿ ೫೦ ಫೋರ್ ಗಳು ಹಾಗು ೩೬ ಸಿಕ್ಸರ್ ಗಳು ಸೇರಿವೆ. ಇನ್ನು ವಿರಾಟ್ ಕೊಹ್ಲಿ ೬ ವರ್ಷಗಳ ಹಿಂದೆ ೨೦೧೬ ರಲ್ಲಿ ಬೆಂಗಳೂರು ಪರ ೧೬ ಪಾಂಡ್ಯ ಆಡಿದ್ದು ೯೭೩ ರನ್ ಗಳಿಸಿದ್ದಾರೆ. ಇದರಲ್ಲಿ ೪ ಶತಕ ಹಾಗು ೭ ಅರ್ಧ ಶತಕ ಕೂಡಿದೆ. ಇವರ ಸರಾಸರಿ ೮೧.೦೮ ಆಗಿತ್ತು ಹಾಗೇನೇ ಸ್ಟ್ರೈಕ್ ರೇಟ್ ೧೫೨.೦೩ ರಲ್ಲಿತ್ತು. ಇದರಲ್ಲಿ ೮೩ ಫೋರ್ ಹಾಗು ೩೮ ಸಿಕ್ಸರ್ ಗಳು ಕೂಡಿದ್ದವು. ಇನ್ನು ಈ ದಾಖಲೆ ಜೋಸ್ ಬಟ್ಲರ್ ಈ ಆವೃತ್ತಿಯಲ್ಲಿ ಸರಿಗಟ್ಟುವ ಎಲ್ಲ ಸಾಧ್ಯತೆ ಕಂಡು ಬರುತ್ತಿದೆ.